ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕಾರ ಸ್ವೀಕರಿಸಿದ ಬಿಬಿಎಂಪಿ ಮೇಯರ್ , ಹೂಗುಚ್ಛ ತರದಿರಲು ಮನವಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 01 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 52ನೇ ಮೇಯರ್ ಆಗಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಭೇಟಿ ಮಾಡಲು ಬರುವವರು ಹೂವಿನ ಬೊಕ್ಕೆ ತರಬೇಡಿ ಎಂದು ಮೇಯರ್ ಮನವಿ ಮಾಡಿದರು.

ಸೋಮವಾರ ಬಿಬಿಎಂಪಿ ಕಚೇರಿ ಆವರಣದಲ್ಲಿ ಗಿಡ ನೆಟ್ಟು, ತಮ್ಮ ಕಚೇರಿಯಲ್ಲಿ ಬಸವಣ್ಣನ ಫೋಟೋಗೆ ಪೂಜೆ ಸಲ್ಲಿಸಿ ಗಂಗಾಂಬಿಕೆ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರಿಗಳ ಸಭೆ ನಡೆಸಿ ಅವರಿಗೆ ಹಲವಾರು ಸೂಚನೆಗಳನ್ನು ನೀಡಿದರು.

ಬೆಂಗಳೂರಿನ 52ನೇ ಮೇಯರ್ ಆಗಿ ಗಂಗಾಂಬಿಕೆ ಆಯ್ಕೆಬೆಂಗಳೂರಿನ 52ನೇ ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ

ಜಯನಗರ ವಾರ್ಡ್‌ನ ಕಾರ್ಪೊರೇಟರ್ ಆಗಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಸೆ.28ರಂದು ನಡೆದ ಮೇಯರ್ ಚುನಾವಣೆಯಲ್ಲಿ ನಗರದ 52ನೇ ಮೇಯರ್ ಆಗಿ ಆಯ್ಕೆಯಾಗಿದ್ದರು. ಎರಡು ದಿನಗಳ ಕಾಲ ಹಲವು ಮಠಗಳಿಗೆ ಭೇಟಿ ನೀಡಿದ್ದ ಅವರು ಕೆ.ಆರ್.ಮಾರುಕಟ್ಟೆಗೂ ಭೇಟಿ ನೀಡಿ ಕಸ ವಿಲೇವಾರಿ ಬಗ್ಗೆ ಪರಿಶೀಲನೆ ನಡೆಸಿದ್ದರು.

ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಸಂಕ್ಷಿಪ್ತ ವ್ಯಕ್ತಿ ಚಿತ್ರಣಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಸಂಕ್ಷಿಪ್ತ ವ್ಯಕ್ತಿ ಚಿತ್ರಣ

'ನಾನು ಸ್ವಚ್ಛತೆಗೆ ಆದ್ಯತೆ ನೀಡುತ್ತೇನೆ. ಪ್ರತಿ ಬಾರಿ ಹೇಳುತ್ತಿದ್ದೇನೆ ಹೂವಿನ ಬೊಕ್ಕೆ ತರಬೇಡಿ ಎಂದು. ಆದರೂ ತಂದಿದ್ದಾರೆ, ಮುಂದಿನ ಬಾರಿಯಿಂದ ಬೊಕ್ಕೆ ತರಬೇಡಿ' ಎಂದು ಮೇಯರ್ ಜನರಿಗೆ ಮನವಿ ಮಾಡಿದರು.

ಮೇಯರ್ ಆದ ಬಳಿಕ ಗಂಗಾಂಬಿಕೆ ಮೊದಲ ಭೇಟಿ ಎಲ್ಲಿಗೆ ಗೊತ್ತಾ?ಮೇಯರ್ ಆದ ಬಳಿಕ ಗಂಗಾಂಬಿಕೆ ಮೊದಲ ಭೇಟಿ ಎಲ್ಲಿಗೆ ಗೊತ್ತಾ?

ಬಸವಣ್ಣನ ಫೋಟೋಗೆ ಪೂಜೆ

ಬಸವಣ್ಣನ ಫೋಟೋಗೆ ಪೂಜೆ

ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಸ ಸಂಪ್ರದಾಯ ಆರಂಭಿಸಿದರು. ಮೇಯರ್ ಖುರ್ಚಿ ಮೇಲೆ ಬಸವಣ್ಣ ಅವರ ಫೋಟೋ ಇಟ್ಟು ಅದಕ್ಕೆ ಮೊದಲು ಪೂಜೆ ಸಲ್ಲಿಸಿ ಬಳಿಕ ಅವರು ಆಸೀನರಾದರು.

ಬಿಬಿಎಂಪಿ ಆವರಣದಲ್ಲಿ ಗಿಡ ನೆಟ್ಟರು

ಬಿಬಿಎಂಪಿ ಆವರಣದಲ್ಲಿ ಗಿಡ ನೆಟ್ಟರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ. ಅಧಿಕಾರಿಗಳಿಗೂ ಕೂಡ ಇದೇ ಸೂಚನೆ ನೀಡಿದ್ದಾರೆ. ಸ್ವಚ್ಛತೆಗೆ ಆದ್ಯತೆ ನೀಡುವುದರಿಂದಲೇ ಗಿಡ ನೆಟ್ಟಿದ್ದೇನೆ ಎಂದರು.

ಪರಿಶೀಲನೆ ನಡೆಸುತ್ತೇನೆ

ಪರಿಶೀಲನೆ ನಡೆಸುತ್ತೇನೆ

ನಗರದ ರಸ್ತೆಗುಂಡಿ ಕಾಮಗಾರಿ ಕೆಲವು ಕಡೆ ಕಳಪೆಯಾಗಿರುವುದಕ್ಕೆ ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಬೇಸರ ವ್ಯಕ್ತಪಡಿಸಿದರು. 'ವೈಜ್ಞಾನಿಕವಾಗಿ ಗುಂಡಿಗಳನ್ನು ಮುಚ್ಚಿಲ್ಲ. ಗುಂಡಿ ಮುಚ್ಚಿದ ಕಾಮಗಾರಿ ಪರಿಶೀಲನೆ ನಡೆಸುತ್ತೇನೆ. ವೈಜ್ಞಾನಿಕವಾಗಿ ಮುಚ್ಚಿಲ್ಲದಿದ್ದರೆ ಅದನ್ನು ಕೀಳಿಸಿ ಮತ್ತೊಮ್ಮೆ ಮುಚ್ಚಿಸುತ್ತೇನೆ' ಎಂದು ಹೇಳಿದರು.

ಗಾರೆ ಕೆಲಸದವರು ಚೆನ್ನಾಗಿ ಮುಚ್ಚುವರು

ಗಾರೆ ಕೆಲಸದವರು ಚೆನ್ನಾಗಿ ಮುಚ್ಚುವರು

'ರಸ್ತೆ ಗುಂಡಿ ಕಾಮಗಾರಿಗಳ ಬಗ್ಗೆ ಮಾತನಾಡಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ನಮ್ಮ ಇಂನಿಜಿಯರ್‌ಗಳು ಕೇವಲ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಆದರೆ, ನಮ್ಮ ಗಾರೆ ಕೆಲಸದವರು ಚೆನ್ನಾಗಿ ಗುಂಡಿ ಮುಚ್ಚುತ್ತಾರೆ' ಎಂದರು.

English summary
On October 1, 2018 Gangambike take the charge as 52nd mayor of the Bruhat Bengaluru Mahanagara Palike. BBMP mayor election held on September 28, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X