ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

OLX ನಲ್ಲಿ ಉಪಕರಣ ಮಾರುವ ಮುನ್ನ ಹುಷಾರ್: 3 ಡಕಾಯಿತರು ಅಂದರ್!

|
Google Oneindia Kannada News

ಬೆಂಗಳೂರು, ಜನವರಿ 25: OLX ಜಾಲ ತಾಣದಲ್ಲಿ ವಹಿವಾಟು ನಡೆಸುವ ಮುನ್ನ ಹುಷಾರ್. ಒಎಲ್ಎಕ್ಸ್ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಾರೆ. Olx.com ಜಾಲ ತಾಣದಲ್ಲಿ ಮೊಬೈಲ್ ಮಾರಲು ಯತ್ನಿಸಿದ ಯುವಕನನ್ನು ಮನೆಗೆ ಕರೆದೊಯ್ದು ಏನು ಮಾಡಿದ್ದಾರೆ ಎಂಬುದನ್ನು ತಿಳಿದರೆ ಒಎಲ್ ಎಕ್ಸ್ ಸಹವಾಸಕ್ಕೆ ಯಾರೂ ಹೋಗಲ್ಲ !

ಅನುರಾಗ್ ಶರ್ಮಾ ಎಂಬಾತ ತನ್ನ ಮೊಬೈಲ್ ನ್ನು ಮಾರಾಟ ಮಾಡಲು ಒಎಲ್ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದರು. ಪೋಸ್ಟ್ ನೋಡಿದ ಯುವಕನೊಬ್ಬ ಕರೆ ಮಾಡಿ ನಿನ್ನ ಮೊಬೈಲ್ ನನಗೆ ಇಷ್ಟವಾಗಿದೆ. ನೀವು ಮೊಬೈಲ್ ತೆಗೆದುಕೊಂಡು ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಬಳಿ ಬನ್ನಿ ಎಂದು ಕರೆಸಿಕೊಂಡಿದ್ದಾರೆ. ಕರೆ ಮಾಡಿದವನ ಮಾತು ನಂಬಿ ಅನುರಾಗ್ ಶರ್ಮಾ ಕರೆ ಮಾಡಿದವನ ಹೇಳಿದ ಜಾಗಕ್ಕೆ ಹೋಗಿ ಭೇಟಿ ಮಾಡಿದ್ದಾನೆ. ನಿಮ್ಮ ಮೊಬೈಲ್ ಇಷ್ಟವಾಗಿದೆ. ನನ್ನ ಬಳಿ ಈಗ ಹಣ ಇಲ್ಲ. ನಮ್ಮ ತಾಯಿಗೆ ಹೇಣಿ ಕಣ ಕೊಡಿಸುತ್ತೇನೆ ಎಂದು ಹೇಳಿ ಕಲಾಸಿಪಾಳ್ಯದ ನ್ಯೂ ಎಕ್ಸ್‌ಟೆನ್ಷನ್ ಗೆ ಕರೆದೊಯ್ದಿದ್ದಾನೆ.

ಮನೆಗೆ ಕರೆದೊಯ್ದು ದರೋಡೆ

ಮನೆಗೆ ಕರೆದೊಯ್ದು ದರೋಡೆ

ಮನೆ ಸಮೀಪ ಎಂದು ಅನುರಾಗ್ ಶರ್ಮಾ ನನ್ನು ಕರೆದೊಯ್ದ ಯುವಕ, ನಾಲ್ಕನೇ ಮಹಡಿಯ ಕೊಠಡಿಗೆ ಕರೆದೊಯ್ದಿದ್ದಾರೆ. ಅಲ್ಲಿದ್ದ ನಾಲ್ಕು ಹುಡುಗರು ಚಾಕು ತೋರಿಸಿ ಹಲ್ಲೆ ನಡಸಿದ್ದಾರೆ. ಅನುರಾಗ್ ಬಳಿಯಿದ್ದ 20 ಸಾವಿರ ರೂಪಾಯಿ ನಗದು ಹಣ ಹಾಗೂ ಮೊಬೈಲ್ ಪೋನ್ ಕಿತ್ತುಕೊಂಡಿದ್ದಾರೆ. ಹಣ ಕೊಟ್ಟ ಬಳಿಕವೂ ಮುಖ ಹಾಗೂ ಕೆನ್ನೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಮತ್ತೆ ಹೊರಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಲು ಆರೋಪಿಗಳು ಮಾತನಾಡಿಕೊಳ್ಳುವ ವೇಳೆ ಅನುರಾಗ್ ಶರ್ಮಾ ಆರೋಪಿಗಳಿಂದ ತಪ್ಪಿಸಿಕೊಂಡು ಪರಾರಿಯಾಗಿ ಜೀವ ರಕ್ಷಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಾನೆ.

ಮೂವರು ಬಂಧನ

ಮೂವರು ಬಂಧನ

ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಕಲಾಸಿಪಾಳ್ಯ ಪೊಲೀಸರು ಮೂವರು ಡಕಾಯಿತರನ್ನು ಬಂಧಿಸಿದ್ದಾರೆ. ಹುಸೇನ್ ಷರೀಪ್, ಅಫ್ರೀದ್ ಖಾನ್, ಅಡ್ನಾನ್ ಪಾಷಾ ಬಂಧಿತರು. ಇವರು ಒಎಲ್ ಎಕ್ಸ್ ನಲ್ಲಿ ಮೊಬೈಲ್ ಮಾರಾಟ ಮಾಡಲು ಪೋಸ್ಟ್ ಹಾಕಿದ್ದವರಿಗೆ ಕರೆ ಮಾಡಿ ಕರೆಸಿಕೊಂಡು ದರೋಡೆ ಮಾಡುತ್ತಿದ್ದರು. ಅನುರಾಗ್ ಶರ್ಮಾ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಒಎಲ್ ಎಕ್ಸ್ ಡಕಾಯಿತರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಕಲಾಸಿಪಾಳ್ಯ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಎಚ್ಚರಿಕೆ ಗಂಟೆ

ಎಚ್ಚರಿಕೆ ಗಂಟೆ

ಆರೋಪಿಗಳು ಈ ಹಿಂದೆ ಇದೇ ರೀತಿಯ ಕೃತ್ಯ ಎಸಗಿರುವ ಬಗ್ಗೆ ಇನ್ನೂ ವಿಚಾರಣೆ ನಡೆಸಲಾಗುತ್ತಿದೆ. ಈ ಮೊದಲು ಈ ರೀತಿಯ ಕೃತ್ಯ ಎಸಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಉಪಕರಣ ಮಾರಾಟ ಮಾಡುವಾಗ, ಖರೀದಿಸುವ ವೇಳೆ ಅಪರಿಚಿತರು ಕರೆದಡೆ ಯಾರೂ ಹೋಗಬಾರದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ಅವರು ಮನವಿ ಮಾಡಿದ್ದಾರೆ.

ಇನ್ನೂ ಪತ್ತೆಯಾಗದ ಅಜಿತಾಬ್

ಇನ್ನೂ ಪತ್ತೆಯಾಗದ ಅಜಿತಾಬ್

ಕಳೆದ 2017 ಡಿಸೆಂಬರ್ ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಅಜಿತಾಬ್ ತನ್ನ ಕಾರನ್ನು ಮಾರಲು ಒಎಲ್ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದರು. ಒಎಲ್ ಎಕ್ಸ್ ನಿಂದ ಬಂದ ಕರೆ ನಂಬಿ ಕಾರು ಮಾರಾಟ ಮಾಡಲು ಹೋದ ಅಜಿತಾಬ್ ನಾಲ್ಕು ವರ್ಷದ ಆದರೂ ಇನ್ನೂ ಪತ್ತೆಯಾಗಿಲ್ಲ. ಅಜಿತಾಬ್ ಕಣ್ಮೆಯಾರಗಲು ಕೂಡ ಓಎಲ್ ಎಕ್ಸ್ ಕರೆ ಕಾರಣ. ಅಜಿತಾಬ್ ಕುಟುಂಬ ಇನ್ನೂ ಕಣ್ನೀರಲ್ಲಿ ಕೈ ತೊಳೆಯುತ್ತಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೂ ಇನ್ನೂ ಪತ್ತೆಯಾಗಿಲ್ಲ. ಯಾರೋ ದುಷ್ಕರ್ಮಿಗಳು ಒಎಲ್ ಎಕ್ಸ್ ಮೂಲಕ ಅಜಿತಾಬ್ ನಂಬರ್ ಪಡೆದು ಕರೆ ಮಾಡಿದ್ದರು. ನೀವು ಮಾರಾಟ ಮಾಡಲು ಪೋಸ್ಟ್ ಹಾಕಿರುವ ಕಾರನ್ನು ತೆಗೆದುಕೊಂಡು ಬನ್ನಿ ಎಂದು ಕರೆಸಿಕೊಂಡಿದ್ದರು. ಆ ಕರೆಯನ್ನು ನಂಬಿ ಹೋದ ಅಜಿತಾಬ್ ಈವರೆಗೂ ಬದುಕಿದ್ದಾರಾ ? ಇಲ್ಲವೇ ಮೃತಪಟ್ಟಿದ್ದಾರಾ ? ಕಾರು ಎಲ್ಲಿದೆ ಎಂಬ ಸುಳಿವು ಸಿಕ್ಕಿಲ್ಲ ! ಇದು ಕೂಡ ಒಎಲ್ಎಕ್ಸ್ ಜಾಲ ತಾಣ ಬಳಿಸಿಕೊಂಡ ಜರುಗಿದ ಅಪರಾಧ ಪ್ರಕರಣ.

Recommended Video

ರಾಜ್ಯದಲ್ಲಿ ಗಣಿಗಾರಿಕೆ ಅವಶ್ಯಕತೆ ಇದೆ, ಆದ್ರೆ illegal mining ವಿರುದ್ಧ ನಿರ್ದಾಕ್ಷಿಣ್ಯ ಕ್ರಮ- CM BSY | Oneindia Kannada
ಎಚ್ಚರಿಕೆ ಗಂಟೆ

ಎಚ್ಚರಿಕೆ ಗಂಟೆ

ಒಎಲ್ಎಕ್ಸ್ ಮಾತ್ರವಲ್ಲ, ಇದೇ ಮಾದರಿಯ ಸಾಮಾಜಿಕ ಜಾಲ ತಾಣದಲ್ಲಿ ವಹಿವಾಟು ನಡೆಸುವ ಮುನ್ನ ಎಚ್ಚರಿಕೆ ವಹಿಸಬೇಕು. ಆಘುಂತಕರು ತಾವು ಇರುವಲ್ಲಿಗೆ ಕರೆಸಿಕೊಂಡು ದರೋಡೆ ಮಾಡುತ್ತಾರೆ. ಸ್ವಲ್ಪ ಯಾಮಾರಿದರೆ ಜೀವವನ್ನೇ ತೆಗೆಯುತ್ತಾರೆ. ಇದಕ್ಕೆ ಅಜಿತಾಬ್ ಪ್ರಕರಣವೇ ಸಾಕ್ಷಿ. ಹೀಗಾಗಿ ಯಾರೂ ಸಹ ಅಪರಿಚಿತರ ಕರೆಗಳನ್ನು ನಂಬಿ ಹೋಗಬಾರದು. ಕ್ರಿಮಿನಲ್ ಗಳು ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳನ್ನೇ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ ಪೊಲೀಸರು.

English summary
Gang of 3 robbed youth who put mobile for sale in OLX. police arrests 4 members in bengaluru. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X