ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣಪನಿಗೂ ತಟ್ಟಿದ ಆರ್ಥಿಕ ಹಿಂಜರಿತ ಬಿಸಿ

|
Google Oneindia Kannada News

ಬೆಂಗಳೂರು, ಆಗಸ್ಟ್ 31: ಆರ್ಥಿಕ ಹಿಂಜರಿತದ ಬಿಸಿ ಗಣಪನಿಗೂ ತಟ್ಟಿದೆ. ಗಣೇಶನ ವಿಗ್ರಹಕ್ಕೆ ಬೇಡಿಕೆ ತೀರ ಡಿಮೆ ಎಂದು ಜೋಲುಮುಖ ಹಾಕಿಕೊಂಡಿದ್ದಾರೆ ಗಣಪನ ಮೂರ್ತಿ ಮಾರುವ ವ್ಯಾಪಾರಿಗಳು.

ಜಿಡಿಪಿ ಕುಸಿತ, ತೀವ್ರ ಆರ್ಥಿಕ ಹಿಂಜರಿತ, ಜನರ ಕೊಳ್ಳುವ ಶಕ್ತಿ ಕುಂಠಿತ ಹೀಗೆ ಹಲವು ಕಾರಣಗಳಿಂದಾಗಿ ಗಣೇಶ ಹಬ್ಬ ಹಳೆಯ ಕಳೆಯನ್ನು ಈ ಬಾರಿ ಕಳೆದುಕೊಂಡಿದೆ.

ಇದೆಲ್ಲವುದರ ಜೊತೆಗೆ ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸರ ಕಠಿಣ ನಿಯಮಗಳು ಸಹ ಗಣೇಶ ಇರಿಸುವ ಸಂಘಗಳು ಹಿಂದೆ ಸರಿಯುವಂತೆ ಮಾಡಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಮೊದಲಿನ ಕಳೆ ಇಲ್ಲದೆ ವ್ಯಾಪಾರ ಮಂಕಾಗಿದೆ.

Ganesha Festival Economic Lag GST Down

ಆನ್‌ಲೈನ್‌ನಲ್ಲಿಯೂ ವಿವಿಧ ಎತ್ತರ-ಗಾತ್ರದ ಗಣೇಶನ ಮೂರ್ತಿ ಮಾರಾಟ ಮಾಡುತ್ತಿರುವುದರಿಂದಲೂ ಸಹ ಗಣೇಶ ಮೂರ್ತಿ ವ್ಯಾಪಾರಸ್ತರಿಗೆ ತೊಂದರೆ ಆಗಿದೆ. ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಬಿಬಿಎಂಪಿ ಕೊಕ್ಕೆ ಹಾಕಿರುವುದರಿಂದಲೂ ಸಹ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.

ಗಣಪನ ಎತ್ತರಕ್ಕೆ ಬಂದ ಕುತ್ತು; ವಿಘ್ನ ನಿವಾರಕನ ಹಬ್ಬ ಆಚರಣೆಗೇ ವಿಘ್ನ?ಗಣಪನ ಎತ್ತರಕ್ಕೆ ಬಂದ ಕುತ್ತು; ವಿಘ್ನ ನಿವಾರಕನ ಹಬ್ಬ ಆಚರಣೆಗೇ ವಿಘ್ನ?

ಗಣೇಶ ವ್ಯಾಪಾರಿಗಳು ಮಾತ್ರವಲ್ಲದೆ, ಹೂವು-ಹಣ್ಣು, ತರಕಾರಿ ಇನ್ನಿತರೆ ದಿನಬಳಕೆ ವಸ್ತುಗಳ ಬೆಲೆಯೂ ಮಾಮೂಲಿನಂತೆ ಏರಿಕೆ ಕಂಡಿದ್ದು ಮಾರುಕಟ್ಟೆಯಲ್ಲಿ ಹಿಂದಿನ ಉತ್ಸಾಹವೇ ಇಲ್ಲದಂತಾಗಿದೆ.

ಚಿತ್ರದುರ್ಗ ಪ್ರವೇಶಿಸಿದ್ದಾನೆ ವಿಷ್ಣು ರೂಪಿ ಮಹಾಗಣಪಚಿತ್ರದುರ್ಗ ಪ್ರವೇಶಿಸಿದ್ದಾನೆ ವಿಷ್ಣು ರೂಪಿ ಮಹಾಗಣಪ

English summary
Gansha festival not celebrated well in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X