ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬ್ಬಿನ ಗಣೇಶನಿಗೆ 4 ಸಾವಿರ ಕೆಜಿ ಬೃಹತ್ ಲಾಡು ಅರ್ಪಣೆ

|
Google Oneindia Kannada News

Recommended Video

Ganesh Chaturthi 2018 : ಬೆಂಗಳೂರಿನಲ್ಲಿ ಕಬ್ಬಿನ ಗಣೇಶ ಹಾಗು 400ಕೆಜಿ ಮಹಾ ಲಡ್ಡು ಪ್ರದರ್ಶನ |Oneindia Kannada

ಬೆಂಗಳೂರು, ಸೆಪ್ಟೆಂಬರ್ 11: ಗಣೇಶ ಚತುರ್ಥಿಯ ಅಂಗವಾಗಿ ನಗರದಲ್ಲಿ ಪ್ರಪ್ರಥಮ ಬಾರಿಗೆ ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ನಿರ್ಮಿಸಲಾಗಿರುವ 4 ಸಾವಿರ ಕೆಜಿ ತೂಕದ ಬೃಹದಾಕಾರದ ಲಾಡನ್ನು ಇಂದು ಸಾರ್ವಜನಿಕರ ವೀಕ್ಷಣೆಗೆ ಅನಾವರಣಗೊಳಿಸಲಾಯಿತು.

ಗಶೇಶ ಚತುರ್ಥಿ ವಿಶೇಷ: ಗಜಮುಖನಿಗ್ಯಾಕೆ ಇಷ್ಟೊಂದು ಹೆಸರು?ಗಶೇಶ ಚತುರ್ಥಿ ವಿಶೇಷ: ಗಜಮುಖನಿಗ್ಯಾಕೆ ಇಷ್ಟೊಂದು ಹೆಸರು?

ಇದೇ ವೇಳೆ 50 ಟನ್ ಕಬ್ಬಿನಲ್ಲಿ ಮಾಡಿದ ನಗರದಲ್ಲೇ ಅತಿದೊಡ್ಡ ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನದ ಟ್ರಸ್ಟಿ ರಾಮ್ ಮೋಹನ ರಾಜ್ ಹೇಳಿದರು.

ವರಮಹಾಲಕ್ಷ್ಮೀ ಹಬ್ಬಕ್ಕೆ ತಪ್ಪಿದ ರೇಷ್ಮೆ ಸೀರೆ, ಗೌರಿ ಗಣೇಶ ಹಬ್ಬಕ್ಕೆ ವರಮಹಾಲಕ್ಷ್ಮೀ ಹಬ್ಬಕ್ಕೆ ತಪ್ಪಿದ ರೇಷ್ಮೆ ಸೀರೆ, ಗೌರಿ ಗಣೇಶ ಹಬ್ಬಕ್ಕೆ

ಪ್ರತಿಬಾರಿ ಏನಾದರೂ ವಿಶಿಷ್ಟವಾದದ್ದನ್ನು ಭಕ್ತರಿಗೆ ನೀಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ 4 ಸಾವಿರ ತೂಕದ ಬೃಹತ್ ಲಾಡು ನಿರ್ಮಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.

ಗಣೇಶ ಚತುರ್ಥಿಯ ಅಂಗವಾಗಿ ನಗರದಲ್ಲಿ ಪ್ರಪ್ರಥಮ ಬಾರಿಗೆ ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 4 ಸಾವಿರ ಕೆಜಿ ತೂಕದ ಬೃಹದಾಕಾರದ ಲಾಡು ನಿರ್ಮಿಸಲಾಗಿದೆ. ಗಣೇಶ ಹಬ್ಬದ ನಂತರ ಈ ಲಾಡುವನ್ನು ಭಕ್ತರಿಗೆ ನೀಡಲು ದೇವಸ್ಥಾನದ ಮಂಡಳಿ ನಿರ್ಧರಿಸಿದೆ ಎಂದು ದೇವಸ್ಥಾನದ ಟ್ರಸ್ಟಿ ರಾಮ್ ಮೋಹನ ರಾಜ್ ತಿಳಿಸಿದ್ದಾರೆ.

 4 ಸಾವಿರ ತೂಕದ ಬೃಹತ್ ಲಾಡು

4 ಸಾವಿರ ತೂಕದ ಬೃಹತ್ ಲಾಡು

ಪ್ರತಿಬಾರಿ ಏನಾದರೂ ವಿಶಿಷ್ಟವಾದದ್ದನ್ನು ಭಕ್ತರಿಗೆ ನೀಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ 4 ಸಾವಿರ ತೂಕದ ಬೃಹತ್ ಲಾಡು ನಿರ್ಮಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು. ಈ ಬೃಹತ್ ಗಾತ್ರದ ಲಾಡು ನಿರ್ಮಿಸಲು 1000 ಕೆಜಿ ಕಡಲೆ ಹಿಟ್ಟು, 2000 ಕೆಜಿ ಸಕ್ಕರೆ, 700 ಕೆಜಿ ಸನ್ ಪ್ಯೂರ್ ಎಣ್ಣೆ, 300 ಕೆಜಿ ತುಪ್ಪ, 50 ಕೆಜಿ ಗೋಡಂಬಿ, 50 ಕೆಜಿ ಒಣ ದ್ರಾಕ್ಷಿ, 5 ಕೆಜಿ ಏಲಕ್ಕಿಯನ್ನು ಬಳಸಿ ಬೃಹತ್ ಗಾತ್ರದ ಲಾಡು ನಿರ್ಮಿಸಲಾಗುವುದು ಎಂದರು.

ಮೋದಕಪ್ರಿಯ ಗಣೇಶನ 32 ಹೆಸರುಗಳು: ಚಿತ್ರ ಮಾಹಿತಿ ಮೋದಕಪ್ರಿಯ ಗಣೇಶನ 32 ಹೆಸರುಗಳು: ಚಿತ್ರ ಮಾಹಿತಿ

ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿ

ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿ

ಅಲ್ಲದೆ, ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ ಈ ಬಾರಿ 30 ಅಡಿ ಎತ್ತರದ ಕಬ್ಬಿನಲ್ಲಿಯೇ ನಿರ್ಮಿಸಲಾಗಿರುವ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುವುದು. ಈ ಮೂರ್ತಿ ಪರಿಸರ ಸ್ನೇಹಿಯಾಗಿರಲಿದೆ. ಅಲ್ಲದೆ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯನ್ನು ಉಂಟು ಮಾಡದ ರೀತಿಯಲ್ಲಿ ನಿರ್ಮಿಸಲಾಗುವುದು. 50 ಟನ್ ಕಬ್ಬನ್ನು ಬಳಸಲಾಗಿದ್ದು, 50 ಕ್ಕೂ ಹೆಚ್ಚು ಕಾರ್ಮಿಕರು ಈ ಗಣಪತಿಯನ್ನು ನಿರ್ಮಿಸಲು ಹಗಲಿರುಳು ಶ್ರಮಿಸಿದ್ದಾರೆ ಎಂದರು. ಗೌರಿ ಹಬ್ಬದ ದಿನದಿಂದ ಈ ಬೃಹತ್ ಲಾಡು ಹಾಗೂ ಕಬ್ಬಿನ ಗಣಪತಿಯನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗುವುದು ಎಂದರು

ಸೆ.12 ಸ್ವರ್ಣಗೌರಿ ವ್ರತ: ಆಚರಣೆ ಏಕೆ? ಹೇಗೆ? 7 ಸಂಗತಿಸೆ.12 ಸ್ವರ್ಣಗೌರಿ ವ್ರತ: ಆಚರಣೆ ಏಕೆ? ಹೇಗೆ? 7 ಸಂಗತಿ

ಬೃಹತ್ ಲಡ್ಡು ತಯಾರಿಸುವುದು

ಬೃಹತ್ ಲಡ್ಡು ತಯಾರಿಸುವುದು

ಹೈದರಾಬಾದ್, ಮುಂಬೈ ಹಾಗೂ ಇನ್ನಿತರ ಕಡೆಗಳಲ್ಲಿ ಈ ರೀತಿ ಬೃಹತ್ ಲಡ್ಡು ತಯಾರಿಸುವುದು ಸಾಮಾನ್ಯ ಸಂಗತಿ ಎನ್ನಬಹುದು. ಈ ಹಿಂದೆ ಹೈದರಾಬಾದಿನ ಖೈರ್ತಾಬಾದ್ ನಲ್ಲಿ ೫೬ ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, 4 ಸಾವಿರ ತೂಕದ ಲಡ್ಡುವನ್ನು ನೈವೇದ್ಯ ಮಾಡಲಾಗಿತ್ತು.

ಸಾವಿರಾರು ಕೆಜಿ ತೂಕದ ಲಡ್ಡು ತಯಾರಿಕೆ

ಸಾವಿರಾರು ಕೆಜಿ ತೂಕದ ಲಡ್ಡು ತಯಾರಿಕೆ

ಕನಿಷ್ಟ 1,600 ಕೆಜಿ ಸಕ್ಕರೆ, 1,000 ಕೆಜಿ ಚನ್ನದಾಲ್ ಅಥವಾ ಹಿಟ್ಟು, 50 ಕೆಜಿ ಗೋಡಂಬಿ, 50 ಕೆಜಿ ಒಣ ದ್ರಾಕ್ಷಿ, 5 ಕೆಜಿ ಏಲಕ್ಕಿ, ಕರ್ಪೂರ, ಎಸೆನ್ಸ್ ಬೇಕಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಸಾಮಾಗ್ರಿಗಳು ಬದಲಾಗಲಿವೆ, ಮುಂಬೈನಲ್ಲಿ ಬೃಹತ್ ಗಣೇಶ ಮೂರ್ತಿ, ಲಡ್ಡುಗಳಿಗೆ ವಿಮೆ ಕೂಡಾ ಮಾಡಿಸಲಾಗುತ್ತದೆ.

English summary
A grand 4,000 kg 'maha laddoo' prepared and displayed at JP Nagar, Bengaluru here ahead of the commencement of the Ganesha festival. Ganesha also made of sugar cane is attracting the visitors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X