• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ಲಾಸ್ಟಿಕ್ ವಿರುದ್ಧ ಗಾಂಧಿಗಿರಿ: ಪ್ಲಾಗ್ ರನ್‌ಗೆ ನೀವೂ ಹೆಜ್ಜೆ ಹಾಕಿ

|

ಬೆಂಗಳೂರು, ಅ.1: ಗಾಂಧಿ ಜಯಂತಿ ಅಂಗವಾಗಿ ಸಮಾನ ಮನಸ್ಕರೆಲ್ಲ ಒಟ್ಟುಗೂಡಿ ಪ್ಲಾಸ್ಟಿಕ್ ಮುಕ್ತ ಬೆಂಗಳೂರು ಅಭಿಯಾನ ಹಾಗೂ ಸ್ವಚ್ಛತೆಗಾಗಿ ಓಟ (ಪ್ಲಾಗ್ ರನ್) ಆಯೋಜಿಸಲಾಗಿದೆ.

ಓಟವೆಂದರೆ ಇದೊಂದು ಸ್ಪರ್ಧೆಯಲ್ಲ ಬದಲಾಗಿ ಓಟದ ಜತೆಗೆ ಕಣ್ಣಿಗೆ ಕಂಡ ಪ್ಲಾಸ್ಟಿಕ್ ಗಳನ್ನು ಆಯ್ದುಕೊಳ್ಳುತ್ತಾ ಸಾಗಬೇಕು, ಬಳಿಕ ಅದೆಲ್ಲವನ್ನು ಆಯೋಜಕರು ಗುರುತು ಮಾಡಿರುವ ಸ್ಥಳದಲ್ಲಿ ಇರಿಸಬೇಕಾಗುತ್ತದೆ. ಕೇವಲ ಒಂದು ಕಡೆ ಮಾತ್ರವಲ್ಲ ನಗರ 50 ಭಾಗಗಳಲ್ಲಿ ಏಕಕಾಲಕ್ಕೆ ಈ ಓಟವನ್ನು ಆಯೋಜನೆ ಮಾಡಲಾಗಿದೆ. ಈ ಪ್ಲಾಗ್ ರನ್‌ನಲ್ಲಿ ಒಟ್ಟು ಸಾವಿರ ಮಂದಿ ಪಾಲ್ಗೊಳ್ಳುತ್ತಾರೆ.

ಪ್ಲಾಸ್ಟಿಕ್ ಮುಕ್ತ ಬೆಂಗಳೂರಿಗಾಗಿ 'ಪ್ಲಾಗ್ ರನ್', ನೀವೂ ಭಾಗವಹಿಸಿ

ಯುನೈಟೆಡ್ ವೇ ಬೆಂಗಳೂರು, ನಮ್ಮ ನಿಮ್ಮ ಸೈಕಲ್ ಫೌಂಡೇಶನ್, ಗೋ ನೇಟಿವ್, ಜಸ್ಟ್ ಬುಕ್ಸ್, ಪೌಂಟೇನ್ ಫಿಸ್ಟಿವಲ್, ಲಯನ್ಸ್, ಹಸಿರು ಸೇನೆ, ಬಸವ ಅಂಬರ ಇದಿಷ್ಟೂ ಸಂಸ್ಥೆಗಳು ಓಟದಲ್ಲಿ ಪಾಲ್ಗೊಳ್ಳಲಿವೆ. ಓಟಕ್ಕೆ ಒಂದೇ ದಿನ ಇದೆ ಆನ್‌ಲೈನ್‌ನಲ್ಲಿ ಈಗಲೇ ಹೆಸರು ನೋಂದಾಯಿಸಿಕೊಳ್ಳಿ.

ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಾಕಷ್ಟು ಅಭಿಯಾನಗಳನ್ನು ಕೈಗೊಂಡ ಬಳಿಕ ಜನರಿಗೆ ಸಲ್ಪ ಸ್ವಲ್ಪ ಜಾಗೃತಿ ಬರುತ್ತಿದೆ, ಮಾಲ್, ಅಂಗಡಿಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಚರಂಡಿಗಳು, ರಸ್ತೆಯ ಅಕ್ಕಪಕ್ಕದ ಜಾಗಗಳು ಸೇರಿದಂತೆ ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ರಾರಾಜಿಸುತ್ತಿತ್ತು, ಹಸುಗಳು, ಬೀದಿನಾಯಿಗಳು ಸೇರಿದಂತೆ ಹಲವು ಪ್ರಾಣಿಗಳು ತ್ಯಾಜ್ಯದ ಜೊತೆ ಇವುಗಳನ್ನು ಕೂಡ ಸೇವಿಸಿ ಕಾಯಿಲೆಗೆ ತುತ್ತಾಗುತ್ತಿದ್ದವು. ಪ್ಲಾಸ್ಟಿಕ್ ನಿಷೇಧ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನೀವು ನೆರವಾಗಿ, ಸ್ವಚ್ಛ ಭಾರತ ನಿರ್ಮಾಣಕ್ಕೆ ಮುಂದಾಗಿ.

English summary
Many like minded organizations have joined their hands to celebrate Gandhi Jayanti on October 2 with different initiative as contributing plastic free Bengaluru with Shramadaana and run for awareness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X