ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಜೂಜು ಅಡ್ಡೆಗಳ ಕಿಂಗ್ ಪಿನ್ ಗೂಂಡಾ ಕಾಯ್ದೆ ಅಡಿ ಸೆರೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 21: ರಾಜಧಾನಿಯಲ್ಲಿ ರಿಕ್ರಿಯೇಷನ್ ಕ್ಲಬ್, ವಿಡಿಯೋ ಗೇಮ್‌ನಂಥ ಜೂಜು ಅಡ್ಡೆಗಳನ್ನು ನಡೆಸುತ್ತಿದ್ದ ಪ್ರಮುಖ ಕಿಂಗ್ ಪಿನ್ ಹರಿರಾಜ್ ಶೆಟ್ಟಿ ಎಂಬಾತನನ್ನು ಗೂಂಡಾ ಕಾಯ್ದೆ ಅಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಧಾನಿಯಲ್ಲಿ ರಿಕ್ರಿಯೇಷನ್ ಕ್ಲಬ್ ಮತ್ತು ವಿಡಿಯೊ ಗೇಮ್ ಸೆಂಟರ್ ಗಳನ್ನು ನಡೆಸುತ್ತಿದ್ದ. ಈ ಮೂಲಕ ಬೆಂಗಳೂರಿನಲ್ಲಿ ದೊಡ್ಡ ಜಾಲ ಸೃಷ್ಟಿಸಿದ್ದ. ಈತನ ಅಕ್ರಮ ಜಾಲದ ವಿರುದ್ಧ ಕ್ರಮ ಜರುಗಿಸುವ ಪೊಲೀಸರಿಗೆ ಅಮಿಷ ಒಡ್ಡುವ ಮೂಲಕ ಖೆಡ್ಡಾಗೆ ಬೀಳಿಸಿ ತೇಜೋವಧೆ ಮಾಡುತ್ತಿದ್ದ ಎನ್ನಲಾಗಿದೆ.

ಬಿ. ಹರಿರಾಜ್ ಶೆಟ್ಟಿ ವಿರುದ್ಧ ವಯ್ಯಾಲಿಕಾವಲ್, ಹೈಗ್ರೌಂಡ್ಸ್, ಕಬ್ಬನ್ ಪಾರ್ಕ್, ಕೋರಮಂಗಲ, ಅಶೋಕನಗರ ಬಸವೇಶ್ವರನಗರ ಪೊಲೀಸ್ ಠಾಣೆಗಳಲ್ಲಿ ಈವರೆಗೂ ಹದಿಮೂರಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಇಷ್ಟಾಗಿಯೂ ರಾಜಧಾನಿಯಲ್ಲಿ ತನ್ನ ಏಜೆಂಟರನ್ನು ಇಟ್ಟುಕೊಂಡು ಬೆಂಗಳೂರಿನಲ್ಲಿ ರಿಕ್ರಿಯೇಷನ್ ಕ್ಲಬ್ ಗಳಲ್ಲಿ ಇಸ್ಪೀಟ್ ದಂಧೆ ಆಡಿಸುತ್ತಿದ್ದ. ಈತನ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರಿಗೆ ಚಿತ್ರ ಹಿಂಸೆ ನೀಡುತ್ತಿದ್ದ.

Bengaluru Gambling kingpin arrested under Gunda act

Recommended Video

'ಸಾವಿನ ಮನೆಯಲ್ಲಿ ರಾಜಕೀಯ ಚೆಲ್ಲಾಟ ಬೇಕಾ? ' ಸರ್ಕಾರವನ್ನ ಪ್ರಶ್ನಿಸಿದ ಹೆಚ್‌ಡಿಕೆ | Oneindia Kannada

ಈತನ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ನೀಡಿದ ವರದಿಯನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅನುಮೋದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹರೀಶ್ ರಾಜ್‌ನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಹರೀಶ್ ರಾಜ್ ನನ್ನು ಬಂಧಿಸಲಾಗಿದೆ. ಜೂಜುಕೋರರ ವಿರುದ್ಧ ಇದೇ ಪ್ರಥಮ ಬಾರಿಗೆ ಗುಂಡಾ ಕಾಯ್ದೆ ಅಸ್ತ್ರ ಪ್ರಯೋಗಿಸಲಾಗಿದೆ.

English summary
Harish Raj Shetty, who runs a gambling centers in Bengalru has been arrested by CCB police under the Gunda act know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X