ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವಜಾತ ಶಿಶುಗಳ ಐಸಿಯುನಲ್ಲಿ ಹೆಚ್ಚುತ್ತಿದೆ ಸೋಂಕು:ವೈದ್ಯರಲ್ಲಿ ಆತಂಕ

By Nayana
|
Google Oneindia Kannada News

ಬೆಂಗಳೂರು, ಜು.6: ರಾಜ್ಯದ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಶಿಶುಗಳಿಗೆ ಫಂಗಲ್‌ ಇನ್‌ಫೆಕ್ಷನ್‌ ಪ್ರಮಾಣ ಹೆಚ್ಚುತ್ತಿದೆ ಎನ್ನುವ ಆತಂಕದ ವಿಚಾರವೊಂದು ಬಹಿರಂಗಗೊಂಡಿದೆ.

ಅವಧಿಪೂರ್ವ ಶಿಶು ಜನನ, ಉಸಿರಾಟದ ತೊಂದರೆ ಇನ್ನು ಅನೇಕ ಅಂಗಾಂಗಳ ತೊಂದರೆಯಿಂದಾಗಿ ತೀವ್ರ ನಿಗಾ ಘಟಕ(ಐಸಿಯು)ನಲ್ಲಿರಿಸುವುದು ಸಾಮಾನ್ಯ. ಆದರೆ ಶಿಶುವನ್ನು ಐಸಿಯುನಲ್ಲಿರಿಸುವುದರಿಂದಲೇ ಮೃತಪಡುತ್ತಿವೆ ಎನ್ನುವುದು ಆಘಾತಕಾರಿ ಸಂಗತಿಯಾಗಿದೆ. ನರ್ಸ್‌ಗಳ ನಿರ್ಲಕ್ಷ್ಯ, ಸ್ವಚ್ಛತೆಯ ಕೊರತೆ, ತಾಯಿಯಿಂದಲೂ ಕೂಡ ಶಿಶುವಿಗೆ ಸೋಂಕು ತಗಲುವ ಎಲ್ಲಾ ಸಾಧ್ಯತೆಗಳಿರುತ್ತದೆ.

ಬ್ಯಾಟರಾಯನಪುರ: ಕಸದ ತೊಟ್ಟಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಬ್ಯಾಟರಾಯನಪುರ: ಕಸದ ತೊಟ್ಟಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಈ ಫಂಗಲ್‌ ಸೋಂಕಿನಿಂದಾಗಿ ಶಿಶುಗಳು ಸಾವನ್ನಪ್ಪುತ್ತಿವೆ. ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಫಂಗಲ್‌ ಸೋಂಕಿನಿಂದಾಗಿ ಶೇ.6.6 ರಷ್ಟು ಶಿಶುಗಳಿಗೆ ಚಿಕಿತ್ಸೆ ನೀಡಲಾಗಿತ್ತು. 2015ರಲ್ಲಿ 4.3ರಷ್ಟು ಶಿಶುಗಳು, 2016ರಲ್ಲಿ ಶೇ.4.6ರಷ್ಟು ಶಿಶುಗಳನ್ನು ಐಸಿಯುನಲ್ಲಿ ದಾಖಲಿಸಲಾಗಿತ್ತು.

Fungal infections among newborns in NICUs on the rise; docs worried

ಇತ್ತೀಚಿನ ದಿನಗಳಲ್ಲಿ ಅವಧಿಪೂರ್ವ ಶಿಶುಗಳನ್ನು ಐಸಿಯುನಲ್ಲಿರಸಲಾಗುತ್ತಿದೆ. ಶಿಶುವಿನ ತೂಕ ಕಡಿಮೆ ಇರುವ ಕಾರಣ ಆಂಟಿ ಬಯೋಟಿಕ್‌ಗಳನ್ನು ನೀಡಲಾಗುತ್ತದೆ ಇದರಿಂದ ಕೂಡ ಸೋಂಕು ತಗುಲುತ್ತಿದೆ. ನವಜಾತ ಶಿಶುಗಳಲ್ಲಿ ಫಂಗಲ್‌ ಇನ್‌ಫೆಕ್ಷನ್‌ ಕಾಣಿಸಿಕೊಳ್ಳಲು ಕಾರಣವೇನು ಎಂಬುದರ ಬಗ್ಗೆ ಇದುವರೆಗೂ ಅಧ್ಯಯನ ನಡೆದಿಲ್ಲ ಎಂದು ನ್ಯಾಷನಲ್‌ ನಿಯೊನೊಟಾಲಜಿ ಫಾರ್ಮ್‌ನ ಅಧ್ಯಕ್ಷ ಡಾ. ರಂಜನ್‌ ಪೇಜಾವರ್‌ ತಿಳಿಸಿದ್ದಾರೆ.

ಮಗುವು ಫಂಗಲ್‌ ಇನ್‌ಫೆಕ್ಷನ್‌ನಿಂದಲೇ ಸಾವನ್ನಪ್ಪಿದೆ ಎಂದು ನಿಖರವಾಗಿ ಹೇಳುವುದು ಕಷ್ಟ, ಸರ್ಕಾರಿ ಆಸ್ಪತ್ರೆಗಳಿಗೆ ಅಂತಿಮ ಸಮಯದಲ್ಲಿ ಬಂದು ದಾಖಲಾಗುತ್ತಾರೆ, ಮುಗುವಿಗೆ ಏನಾಗಿದೆ ಎಂದು ಚಿಕಿತ್ಸೆ ನೀಡುವುದರ ಒಳಗೆ ಎಷ್ಟೋ ಶಿಶುಗಳು ಸಾವನ್ನಪ್ಪಿರುತ್ತವೆ. ಮಗುವನ್ನು ಮುಟ್ಟಿದ ಟವೆಲ್‌ನ್ನು ಪುನಃ ಬಳಕೆ ಮಾಡದಿರುವ ಕುರಿತು ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕಿದೆ.

ಅಲ್ಲಿ ಬಳಕೆಯಾಗುವ ಹೋಲೋ ಟ್ಯೂಬ್‌ನ್ನು ನೀರಿನಲ್ಲಿ ಖುದಿಸಿ ಮರು ಬಳಕೆ ಮಾಡಲಾಗುತ್ತದೆ ಆದರೂ ಕೂಡ ಅದನ್ನು ಸ್ವಚ್ಛವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಅದರಿಂದ ಕ್ರಾಸ್‌ ಇನ್‌ಫೆಕ್ಷನ್‌ ಆಗಬಹುದುದು ಎಂದು ತಿಳಿಸಿದ್ದಾರೆ.

English summary
The number of infants in neonatal Intensive Care Units (NICUs) battling fungal infections has been increasing over the years, raising concerns among doctors. In the government-run Vanivilas Hospital, 6.6 percent of the babies treated in NICU last year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X