ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಾಥ ಮಕ್ಕಳ ನಿಧಿ ಸಂಗ್ರಹಕ್ಕಾಗಿ ಸಂಗೀತ ಕಾರ್ಯಕ್ರಮ

|
Google Oneindia Kannada News

ಬೆಂಗಳೂರು, ಜನವರಿ 16: ಎಸ್ ಎಂಟಿಎ ಇಂಡಿಯಾ ಚಾಪ್ಟರ್ ನ ಸಂಸ್ಥಾಪಕ ಅಧ್ಯಕ್ಷ ಮತ್ತು ಅಮೆರಿಕ ಮೂಲದ ಎಲೆಕ್ಟ್ರಾನಿಕ್ಸ್ ಆಟೋಮೇಶನ್ ವಹಿವಾಟು ನಡೆಸುತ್ತಿರುವ ಸಮಾಜಸೇವಕರಾದ ರಾಜೀವ್ ಕುಲಕರ್ಣಿ ಮತ್ತು ಯುವ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ಸಮಾಜಸೇವಕಿ ಚಂದ್ರಿಕಾ ರಾವ್ ಅವರು ಮಾನಸಿಕ ವಿಕಲಚೇತನರ ವಸತಿ ಸಂಸ್ಥೆ ವಿದ್ಯಾರಣ್ಯ ಮತ್ತು ತಂದೆ ಇಲ್ಲದ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿರುವ ವಾತ್ಸಲ್ಯ ಸಂಸ್ಥೆಗಳಿಗೆ ಧನ ಸಹಾಯ ಮಾಡುವ ನಿಟ್ಟಿನಲ್ಲಿ ನಿಧಿ ಸಂಗ್ರಹಕ್ಕೆ ಅನ್ಮೋಲ್ ಮೋತಿ ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

2020 ರ ಜನವರಿ 18 ರಂದು ಸಂಜೆ 6 ಗಂಟೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ಈ ಸಂಗೀತ ರಸಸಂಜೆಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕರು ಹಿಂದಿ ಹಾಡುಗಳನ್ನು ಹಾಡಲಿದ್ದಾರೆ. ಈ ಮೂಲಕ ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ.

ಮನೋಜ್ ವಶಿಷ್ಠ, ಶೃತಿ ಭಿಡೆ, ಅನಿಕೇತ್ ಪ್ರಭು, ಆರುಂಧತಿ ವಶಿಷ್ಠ, ಗೋವಿಂದ ಕರ್ನೂಲ್, ಲಲಿತ್ಯ ಅವನೇಕರ್, ಯಾಸೀನ್ ಖಾನ್, ಸಾಕ್ಷಿ ಭಾಗವತ್ ಅವರು ತಮ್ಮ ಸುಶ್ರಾವ್ಯ ಕಂಠದಿಂದ ಹಿಂದಿ ಹಾಡುಗಳನ್ನು ಹಾಡಲಿದ್ದಾರೆ. ಇದಕ್ಕಾಗಿ ಆರ್ಕೆಸ್ಟ್ರಾ ವ್ಯವಸ್ಥೆಯನ್ನು ಪ್ರದೀಪ್ ಪಾಟ್ಕರ್ ಮತ್ತು ತಂಡ ಒದಗಿಸುತ್ತಿದೆ.

Fund Raiser Musical event- Anmol Moti on Jan 18th

ಕಾರ್ಯಕ್ರಮದ ವಿವರಗಳು:

ದಿನಾಂಕ: 18 ಜನವರಿ 2020

ಸಮಯ: ಸಂಜೆ 6 ಗಂಟೆಯಿಂದ

ಸ್ಥಳ: ಚೌಡಯ್ಯ ಸ್ಮಾರಕ ಭವನ, ಬೆಂಗಳೂರು

English summary
Fund Raiser Musical event- Anmol Moti on Jan 18th. Artists will be performing rare line up of melodious hindi songs. Bangalore get ready for these beautiful Anmol Moti ! Mark your calendar for January 18th, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X