ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್‌ ಮೆಟ್ರೋ ಪರಿಷ್ಕೃತ ಮಾರ್ಗ ಬಹಳ ದೂರ, ವೆಚ್ಚವೂ ಹೆಚ್ಚು

|
Google Oneindia Kannada News

ಬೆಂಗಳೂರು, ಜುಲೈ 17: ಕೆಂಪೇಗೌಡ ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಯೋಜನೆ ಆರಂಭವಾಗುತ್ತಿದೆ. ಆದರೆ ಈಗ ರೂಪಿಸಿರುವ ಪರಿಷ್ಕೃತ ಮಾರ್ಗ ಬಹಳ ದೂರ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಈ ಮಾರ್ಗ ಪ್ರಯಾಣಿಕರ ಓಡಾಟದ ಅವಧಿಯನ್ನು ಹೆಚ್ಚು ಮಾಡುತ್ತದೆ. ನಾಗವಾರ-ಕೆಐಎ(29ಕಿ.ಮೀ), ಕೆಆರ್ ಪುರಂ-ಕೆಐಎ(38 ಕಿ.ಮೀ) ಇದ್ದು ಈಗ ಪರಿಷ್ಕೃತ ಯೋಜನೆಯಲ್ಲಿ ರೂಪಿಸಿರುವ ಮಾರ್ಗದಿಂದ ಸಮಯ ವ್ಯರ್ಥವಾಗಲಿದೆ.

ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ

ಸಾಕಷ್ಟು ಮಂದಿ ಏರ್‌ಪೋರ್ಟ್‌ಗೆ ತೆರಳಲು ಕ್ಯಾಬ್‌ ಬಳಸುತ್ತಿದ್ದಾರೆ, ಮೆಟ್ರೋ ಮಾರ್ಗ ನಿರ್ಮಾಣವಾದಲ್ಲಿ, ಕ್ಯಾಬ್ ಬದಲು ಮೆಟ್ರೋವನ್ನೇ ಬಳಸುತ್ತಾರೆ ಎನ್ನುವುದು ನಂಬಿಕೆ.

From Namma metro revised route to Kia travel time may increase

ಬಿಎಂಆರ್‌ಸಿಎಲ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಕೆಆರ್‌ಪುರಂನಿಂದ ಏರ್‌ಪೋರ್ಟ್‌ಗೆ ತೆರಲಲು 45 ನಿಮಿಷಗಳು ಸಾಕಾಗುತ್ತದೆ. ಮೊದಲೇ ಉದ್ದೇಶಿಸಿದ್ದ ನಾಗವಾರ-ಕೆಐಎಗೆ ಕೇವಲ 20 ನಿಮಿಷಗಳಲ್ಲಿ ಸಂಚರಿಸಬಹುದಿತ್ತು.

ಈಗ ಹೊಸ ಮಾರ್ಗವೂ ನಾಗವಾರಕ್ಕೂ ತೆರಳುತ್ತದೆ. ಆದರೆ ಹೆಬ್ಬಾಳ, ಕೋಗಿಲು ಕ್ರಾಸ್ ಮೂಲಕ ಹೋಗುವುದರಿಂದ 9 ಕಿ.ಮೀ ಹೆಚ್ಚು ಪ್ರಯಾಣಿಸಬೇಕಾಗುತ್ತದೆ.
ಇದು ಮೊದಲ ಉದ್ದೇಶಿಸಿದ್ದ ಆರ್‌ಕೆ ಹೆಗಡೆನಗರ ಹಾಗೂ ಯಲಹಂಕ ಮಾರ್ಗವಾಗಿ ತೆರಳುವ ಯೋಜನೆ ಕೈಬಿಡಲಾಗಿದೆ.

ಮೊದಲ ಯೋಜನೆ ಪ್ರಕಾರ ಈ ಮಾರ್ಗದಲ್ಲಿ ಒಟ್ಟು 7 ಮೆಟ್ರೋ ನಿಲ್ದಾಣಗಳು ಬರುತ್ತಿದ್ದವು. ನಾಗವಾರ, ಆರ್‌ಕೆ ಹೆಗಡೆನಗರ, ಜಕ್ಕೂರು, ಯಲಹಂಕ, ಚಿಕ್ಕಜಾಲ ಮೂಲಕ ಕೆಐಎಎಲ್ ಹೋಗುವಂತಿತ್ತು.

ಆದರೆ ಹೊಸ ಯೋಜನೆಯಲ್ಲಿ 17 ಮೆಟ್ರೋ ನಿಲ್ದಾಣಗಳು ಬರಲಿವೆ. ಕೆಆರ್ ಪುರಂ, ಚನ್ನಸಂದ್ರ, ಹೊರಮಾವು, ಕಲ್ಯಾಣನಗರ, ಎಚ್‌ಆರ್‌ಬಿಆರ್ ಲೇಔಟ್, ಎಚ್‌ಬಿಆರ್ ಲೇಔಟ್‌, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ ಕ್ರಾಸ್, ಹೆಬ್ಬಾಳ, ಕೊಡಿಗೇಹಳ್ಳಿ, ಕೋಗಿಲು ಕ್ರಾಸ್, ಪೆರಿಫೆರಲ್ ರಿಂಗ್ ರಸ್ತೆ, ಟ್ರಂಪೆಟ್ ಇಂಟರ್‌ಸೆಕ್ಷನ್ ಹಾಗೂ ಕೆಐಎ ಎರಡು ನಿಲ್ದಾಣಗಳು ಒಳಗೊಂಡಿರಲಿದೆ.

ಮೊದಲು ಮೆಟ್ರೋ ರೈಲು ಗಂಟೆಗೆ 90-95 ಕಿ.ಮೀ ವೇಗದಲ್ಲಿ ಸಂಚರಿಸಬಹುದು ಎನ್ನುವ ನಿಯಮವಿತ್ತು. ಆದರೆ ಈಗ 60 ಕಿ.ಮೀ ವೇಗದಲ್ಲಿ ಮಾತ್ರ ಸಂಚರಿಸಬೇಕು ಎನ್ನುವ ನಿಯಮವನ್ನು ಜಾರಿಗೆ ತಂದಿರುವುದರಿಂದ ಪ್ರಯಾಣದ ಅವಧಿ ಹೆಚ್ಚಳವಾಗಲಿದೆ.

ಮೆಟ್ರೋ ಮೊದಲ ಹಂತದ ಯೋಜನೆಯಲ್ಲಿ 80 ಕಿ.ಮೀ ವೇಗದಲ್ಲಿ ಓಡುವ ಹಾಗೆ ಮೆಟ್ರೋ ರೈಲನ್ನು ವಿನ್ಯಾಸಗೊಳಿಸಲಾಗಿತ್ತು. ಆದರೆ ಆ ರೈಲು ಕೇವಲ 34 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದೆ.

ಮೆಟ್ರೋ ರೈಲು ಒಂದೊಮ್ಮೆ ಮಾರ್ಗ ರೀಚ್ ಆಗಲು 45 ನಿಮಿಷಗಳು ಬೇಕಿದ್ದರೆ ರಾಜಾಜಿನಗರ, ಚಿಕ್ಕಪೇಟೆ, ಕೋರಮಂಗಲ ಇಂತಹ ಪ್ರದೇಶಗಳಲ್ಲಿ ಮಾರ್ಗ ಬದಲಾವಣೆ, ಬೇರೆ ರೈಲುಗಳಿಗೆ ಕಾಯುವಿಕೆ ಎಲ್ಲಾ ಸೇರಿ 1 ಗಂಟೆ 15 ನಿಮಿಷಗಳು ತಗುಲಲಿದೆ. ಹಾಗಾಗಿ ಬೇಗ ಹೋಗಬೇಕೆನ್ನುವವರು ಕ್ಯಾಬ್ ಅಥವಾ ಬಿಎಂಟಿಸಿ ಬಸ್‌ ಹತ್ತಬೇಕಾಗುತ್ತದೆ.

ಏರ್‌ಪೋರ್ಟ್‌ಗೆ ಹೋಗುವವರು ಔಟರ್‌ ರಿಂಗ್ ರೋಡ್ ಮಾರ್ಗವಾಗಿ ಹೋಗುತ್ತಾರೆ. ಹೆಬ್ಬಾಳ ಮೂಲಕ ಏರ್‌ಪೋರ್ಟ್‌ಗೆ ತೆರಳಲು ಬಯಸುವುದಿಲ್ಲ. ಕೆಆರ್‌ಪುರಂನಿಂದ ಏರ್‌ಪೋರ್ಟ್‌ ಮಾರ್ಗ ನಿರ್ಮಾಣಕ್ಕೆ 10,584.1 ಕೋಟಿ ವೆಚ್ಚವಾಗುತ್ತಿದೆ. ಆದರೆ ನಾಗವಾರದಿಂದ ಏರ್‌ಪೋರ್ಟ್‌ಗೆ ಕೇವಲ 5,900 ಕೋಟಿ ರೂ ಮಾತ್ರ ವೆಚ್ಚವಾಗುತ್ತದೆ.

ಆರ್‌ಕೆ ಹೆಗಡೆನಗರ ಮಾರ್ಗದಲ್ಲಿ ಬೆಂಗಳೂರು-ಮಂಗಳೂರು ಪೆಟ್ರೋಲಿಯಂ ಪೈಪ್ ಹಾದು ಹೋಗಿರುವ ಕಾರಣ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿ ಕೈಬಿಡಲಾಗಿತ್ತು. ಕೆಆರ್‌ಪುರಂ, ಗೊಟ್ಟಿಗೆರೆ, ನಾಗವಾರ, ಕೆಐಎಗೆ ತೆರಳುವ ಮಾರ್ಗದಲ್ಲಿ ಸುರಂಗ ಮಾರ್ಗ ಬರುವ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ.

English summary
From Namma metro revised route to Kia travel time may increase, from Nagawara-KIA (29km) to KR Puram-KIA (38km) — is likely to result in increased travel time for two reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X