ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಫೇಲ್ ಹಗರಣ? ಹಾಗಂದ್ರೇನು? ಫ್ರೆಂಚ್ ರಾಯಭಾರಿಯ ಪ್ರಶ್ನೆ!

|
Google Oneindia Kannada News

ಬೆಂಗಳೂರು, ನವೆಂಬರ್ 29: ಕೇಂದ್ರ ಸರ್ಕಾರದ ನೆತ್ತಿ ಮೇಲೆ ಮೊನಚು ತೂಗುಕತ್ತಿಯಾಗಿರುವ ರಫೇಲ್ ಡೀಲ್ ಕುರಿತಂತೆ ಭಾರತಕ್ಕೆ ಫ್ರಾನ್ಸ್ ನ ರಾಯಭಾರಿಯಾಗಿರುವ ಅಲೇಕ್ಸಾಂಡರ್ ಜಿಗ್ಲರ್ ಪ್ರತಿಕ್ರಿಯೆ ನೀಡಿದ್ದಾರೆ.

ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ಎಂದ ಮಾಧ್ಯಮಗಳಿಗೆ, 'ರಫೇಲ್ ಹಗರಣ? ಹಾಗಂದ್ರೇನು?' ಎಂದು ಪ್ರಶ್ನಿಸಿದ ಅವರು, 'ಅಂಥದೊಂದು ಹಗರಣ ನಡೆದೇ ಇಲ್ಲ' ಎಂದರು.

ರಫೇಲ್ ತನಿಖೆ ನಡೆದರೆ ಮೋದಿ, ಅಂಬಾನಿ ಹೆಸರು ಹೊರಬರುತ್ತದೆ: ರಾಹುಲ್ರಫೇಲ್ ತನಿಖೆ ನಡೆದರೆ ಮೋದಿ, ಅಂಬಾನಿ ಹೆಸರು ಹೊರಬರುತ್ತದೆ: ರಾಹುಲ್

ಬೆಂಗಳೂರಿನಲ್ಲಿ ಫ್ರೆಂಚ್ ಟೆಕ್ ಕಮ್ಯುನಿಟಿಯನ್ನು ಉದ್ಘಾಟಿಸಿದ ಅವರು ರಫೇಲ್ ಡಿಲ್ ಕುರಿತಂತೆ ಮಾಧ್ಯಮಗಳು ಕೇಳಿದ ಹಲವು ಪ್ರಶ್ನೆಗಳಿಗೆ ತೃಪ್ತಿಕರ ಉತ್ತರ ನೀಡಿದರು.

ಸತ್ಯ ನೋಡಿ, ಟ್ವೀಟ್ ಗಳನ್ನಲ್ಲ!

ಸತ್ಯ ನೋಡಿ, ಟ್ವೀಟ್ ಗಳನ್ನಲ್ಲ!

ಒಂದು ವಿಷಯದ ಬಗ್ಗೆ ಮಾತನಾಡುವ ಮೊದಲು ವಾಸ್ತವಾಂಶಗಳನ್ನು ಪರಿಶೀಲಿಸಿ ಎಂದು ಮಾಧ್ಯಮಗಳಿಗೆ ಪರೋಕ್ಷವಾಗಿ ಛಾಟಿ ಏಟು ನೀಡಿದ ಅವರು, 'ಮೊದಲು ಸತ್ಯವನ್ನು ನೋಡಿ, ಟ್ವೀಟ್ ಗಳನ್ನಷ್ಟೇ ನೋಡಿ ನಿರ್ಧರಿಸಬೇಡಿ.' ಎಂದರು.

'ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಇದುವರಗೆ ನಡೆದ ಮಾತುಕತೆಗಳು, ಎರಡು ದೇಶಗಳ ನಡುವೆ ಇದುವರೆಗೂ ಬೆಳೆದ ವಿಶ್ವಾಸ, ಮೇಕ್ ಇನ್ ಇಂಡಿಯಾ ಬಗ್ಗೆ ಇರುವ ನಂಬಿಕೆ, ಇವನ್ನೆಲ್ಲ ಯೋಚಿಸಿ ನಂತರ ನಿರ್ಧಾರ ಕೈಗೊಳ್ಳಿ' ಎಂದು ಜಿಗ್ಲರ್ ಹೇಳಿದರು.

ರಫೇಲ್ ಡೀಲ್ ಬಗ್ಗೆ ಐಎಎಫ್ ಗೆ ಸುಪ್ರೀಂ ಪ್ರಶ್ನೆಗಳ ಸುರಿಮಳೆರಫೇಲ್ ಡೀಲ್ ಬಗ್ಗೆ ಐಎಎಫ್ ಗೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ

ಉದ್ಯೋಗಾವಕಾಶ ಕಡಿಮೆಯಾಗಿದೆಯಾ?

ಉದ್ಯೋಗಾವಕಾಶ ಕಡಿಮೆಯಾಗಿದೆಯಾ?

ರಫೇಲ್ ಯುದ್ಧವಿಮಾನದ ಬಿಡಿಭಾಗಗಳ ತಯಾರಿಕೆಯ ಜವಾಬ್ದಾರಿಯನ್ನು ರಿಲಯನ್ಸ್ ಗೆ ನೀಡಿದ್ದರಿಂದ ಎಚ್ ಎಎಲ್ ನಲ್ಲಿ ಉದ್ಯೋಗಾವಕಾಶಸಗಳು ಕಡಿಮೆಯಾಗಿವೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, 'ಎಚ್ ಎಎಲ್ ಎಂದಾದರೂ ಹೇಳಿದೆಯೇ? ತನ್ನಲ್ಲಿ ಉದ್ಯೋಗಾವಕಾಶ ಕಡಿಮೆಯಾಗಿದೆ ಎಂದು?' ಎಂಬ ಪ್ರಶ್ನೆ ಎಸೆದರು!

'90 ವರ್ಷದ ಅನುಭವಿ ಕಂಪನಿ, ಅನನುಭವಿ ರಿಲಯನ್ಸ್ ಅನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ' '90 ವರ್ಷದ ಅನುಭವಿ ಕಂಪನಿ, ಅನನುಭವಿ ರಿಲಯನ್ಸ್ ಅನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ'

ಏರೋ ಇಂಡಿಯಾ

ಏರೋ ಇಂಡಿಯಾ

2019 ರ ಫೆಬ್ರವರಿ 20-24 ರವರೆಗೆ ನಡೆಯಲಿರುವ ಏರೋ ಇಂಡಿಯಾದಲ್ಲಿ ಫ್ರಾನ್ಸ್ ನ ಹಲವು ಪ್ರಸಿದ್ಧ ಕಂಪನಿಗಳು ಭಾಗವಹಿಸಲಿವೆ ಎಂದು ಸಹ ಇದೇ ಸಂದರ್ಭದಲ್ಲಿ ಜಿಗ್ಲರ್ ಹೇಳಿದರು. ಇದು ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರವನ್ನು ನಡುಗಿಸಿದ ರಫೇಲ್ ಡೀಲ್

ಕೇಂದ್ರವನ್ನು ನಡುಗಿಸಿದ ರಫೇಲ್ ಡೀಲ್

ಯುದ್ಧ ವಿಮಾನ ಖರೀದಿಗಾಗಿ ಫ್ರಾನ್ಸ್ ಸರ್ಕಾರದೊಂದಿಗೆ ಭಾರತ ಮಾಡಿಕೊಂಡ ಒಪ್ಪಂದವೇ ರಫೇಲ್ ಡೀಲ್. ಈ ಡೀಲ್ ನಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ರಫೇಲ್ ಯುದ್ಧ ವಿಮಾನಗಳ ಬಿಡಿ ಭಾಗಗಳ ತಯಾರಿಕೆಯ ಹೊಣೆಯನ್ನು ಎಚ್ ಎಎಲ್ ಗೆ ಬದಲಾಗಿ ರಿಲಯನ್ಸ್ ಇಂಡಸ್ಟ್ರೀಸ್ ಗೆ ನೀಡಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು.

English summary
Amid an ongoing row over the Rafale fighter jet deal, the Ambassador of France to India, Alexandre Ziegler on Wednesday said that, 'Look at facts, not tweets' to media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X