• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚನ್ನಮ್ಮ ಹಳ್ಳಿಕೇರಿ ಅವರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

By Mahesh
|

ಬೆಂಗಳೂರು, ಅಕ್ಟೋಬರ್ 03: ಗಾಂಧಿ ಜಯಂತಿ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಸರ್ವೊದಯ ಕಾರ್ಯಕರ್ತೆ ಚನ್ನಮ್ಮ ಹಳ್ಳಿಕೇರಿ ಅವರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಕರ್ನಾಟಕ-2016 ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ವಾತಂತ್ರ್ಯದ ನಂತರದ ಭಾರತದಲ್ಲಿ ಅಭಿವೃದ್ಧಿ ಉದ್ಧೇಶದಿಂದ ಆರಂಭಿಸಿದ ಪಂಚವಾರ್ಷಿಕ ಯೋಜನೆಯಲ್ಲಿ ಹಳ್ಳಿಗಳನ್ನು ಘಟಕಗಳನ್ನಾಗಿ ಪರಿಗಣನೆ ಮಾಡಿಲ್ಲ, ಅದರ ಬದಲಾಗಿ ಜಿಲ್ಲೆಗಳನ್ನು ಘಟಕಗಳನ್ನಾಗಿ ಮಾಡಿರುವುದರಿಂದ ಹಳ್ಳಿಗಳ ನೇರ ಅಭಿವೃದ್ಧಿ ಕುಂಟಿತವಾಗಿದೆ. ಮಹಾತ್ಮ ಗಾಂಧೀಜಿಯವರ ಮುಖ್ಯ ಕನಸು ಹಳ್ಳಿಗಳು ಘಟಕಗಳಾಗಬೇಕು ಮತ್ತು ಅವರ ಬೇಕು ಬೇಡುಗಳನ್ನು ಅವರೆೇ ನಿರ್ಣಯಿಸುವಂತ ಪರಿಸ್ಥಿತಿ ಸೃಷ್ಟಿಸಿದಾಗ ಮಾತ್ರ ಗ್ರಾಮೀಣಾಭಿವೃದ್ಧಿ ಸಾದ್ಯ ಎಂಬುದು ಎಂದರು.

ಜಗತ್ತಿನ ಶ್ರೇಷ್ಟ ಚಿಂತಕ, ದಾರ್ಶನಿಕ ಮತ್ತು ನುಡಿದಂತೆ ನೆಡೆದ ಸಂತ ಮಹಾತ್ಮ ಗಾಂಧಿ. ಜನರ ಕಲ್ಯಾಣಕ್ಕಾಗಿ ದುಡಿವರು ಮಾತ್ರ ದೊಡ್ಡವರಾಗಲು ಸಾದ್ಯ, ಜನರಿಗಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟಿರುವ ಚನ್ನಮ್ಮ ಹಳ್ಳಿಕೇರಿಯವರಂತ ದೊಡ್ಡವರಿಗೆ ಈ ಪ್ರಶಸ್ತಿ ನೀಡಿರುವುದರಿಂದ ಪ್ರಶಸ್ತಿಯ ಮತ್ತು ವಾರ್ತಾ ಇಲಾಖೆಯ ಮೌಲ್ಯ ಹೆಚ್ಚಿದೆ, ಇದು ಕನ್ನಡ ನಾಡಿನ 6 ಕೋಟಿ ಜನರಿಗೆ ಸಂಧ ಗೌರವವಾಗಿದೆ ಎಂದರು.

ಲಾಲ್ ಬಹುದ್ದೂರ್ ಶಾಸ್ತ್ರಿ ಸ್ಮರಣೆಯನ್ನು ಸಹ ಮಾಡಿ ರಾಜ್ಯದ ಜನರಿಗೆ ಈ ನಾಡು ಕಂಡ ಇಬ್ಬರು ಮಹನೀಯರ ಜಯಂತಿಯ ಶುಭಾಶಯಗಳನ್ನು ಕೋರಿದರು.

ಖಾತೆ ಸಚಿವ ಅನಂತ ಕುಮಾರ್: ಗಾಂಧಿ ತತ್ವ

ಖಾತೆ ಸಚಿವ ಅನಂತ ಕುಮಾರ್: ಗಾಂಧಿ ತತ್ವ

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಅವರು ಮಾತನಾಡಿ 7 ದಶಕಗಳಿಂದ ಗಾಂಧಿ ತತ್ವಗಳನ್ನು ಪಾಲನೆ ಮಾಡಿಕೊಂಡು ಅದರಂತೆ ಬದುಕುತ್ತಿರುವ ಚನ್ನಮ್ಮ ನಂತವರು ನಮಗೆ ಗಾಂಧಿಜಿಯ ನೇರ ಬಾತ್ಮೀದಾರರಿದ್ದಂತೆ, ಇವತ್ತಿನ ನೆಡೆದಾಡುವ ಗಾಂಧಿ ಅವರು, ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಕರ್ನಾಟಕ ಸರಕಾರದ ಗೌರವ ಹೆಚ್ಚಿಸಿದೆ ಎಂದು ಹೇಳಿದರು.

ಖಾತೆ ಸಚಿವ ಅನಂತ ಕುಮಾರ್: ಗಾಂಧಿ ತತ್ವ

ಖಾತೆ ಸಚಿವ ಅನಂತ ಕುಮಾರ್: ಗಾಂಧಿ ತತ್ವ

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಅವರು ಮಾತನಾಡಿ 7 ದಶಕಗಳಿಂದ ಗಾಂಧಿ ತತ್ವಗಳನ್ನು ಪಾಲನೆ ಮಾಡಿಕೊಂಡು ಅದರಂತೆ ಬದುಕುತ್ತಿರುವ ಚನ್ನಮ್ಮ ನಂತವರು ನಮಗೆ ಗಾಂಧಿಜಿಯ ನೇರ ಬಾತ್ಮೀದಾರರಿದ್ದಂತೆ, ಇವತ್ತಿನ ನೆಡೆದಾಡುವ ಗಾಂಧಿ ಅವರು, ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಕರ್ನಾಟಕ ಸರಕಾರದ ಗೌರವ ಹೆಚ್ಚಿಸಿದೆ ಎಂದು ಹೇಳಿದರು.

ಖಾಸಗಿ ಜೀವನ ಮೆಲುಕು ಹಾಕಿದ ಚನ್ನಮ್ಮ

ಖಾಸಗಿ ಜೀವನ ಮೆಲುಕು ಹಾಕಿದ ಚನ್ನಮ್ಮ

ನಮ್ಮ ತಾಯಿ ಕೂಡ ಸರ್ವೋದಯದಲ್ಲಿ ಹುಬ್ಬಳ್ಳಿಯ ಹಳ್ಳಿಗಳಲ್ಲಿ ದುಡಿದವರು ಮತ್ತು ತಂದೆ ಕಾರ್ಮಿಕ ನಾಯಕರಾಗಿ ಜೆಪಿ ತತ್ವಗಳಲ್ಲಿ ನಂಬಿಕೆ ಇಟ್ಟವರಾಗಿದ್ದರು, ಅವರ ತಾಯಿ ಸಹ ಚನ್ನಮ್ಮನವರ ಒಡನಾಡಿಯಾಗಿದ್ದರು ಮತ್ತು ಚನ್ನಮ್ಮ ಅವರ ತಾಯಿಯನ್ನು ಬೇಟಿಯಾಗಲು ಅವರ ಮನೆಗೆ ಬಂದಿದ್ದರು ಎಂದು ತಮ್ಮ ಖಾಸಗಿ ಜೀವನ ಮೆಲುಕು ಹಾಕಿದರು.

ಮಾತಿಗಿಂತ ಕೆಲಸ ಮೇಲು

ಮಾತಿಗಿಂತ ಕೆಲಸ ಮೇಲು

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚನ್ನಮ್ಮ ಹಳ್ಳಿಕೇರಿ ಅವರು ನನಗೆ ಮಾತನಾಡುವುದು ಎಂದರೆ ಬೇಜಾರು, ಮಾತಿಗಿಂತ ಕೆಲಸ ಮೇಲು ಎಂದು ನಂಬಿದವಳು ನಾನು. ನನ್ನ ಕೆಲಸ ನನಗಾಗಿ ಮಾಡಿದ್ದೇನೆ, ಈ ಪ್ರಶಸ್ತಿಯಿಂದ ಬದಿರುವ ಹಣವನ್ನು ಸರ್ವೋದಯಕ್ಕೆ ನೀಡುತ್ತೇನೆ ಮತ್ತು ಅದರಿಂದ ಏನು ಮಾಡಬಹುದು ಎಂಬುದನ್ನು ಚಿಂತಿಸುತ್ತೇನೆ ಎಂದರು.

ಗಾಂಧಿ ಭವನಗಳ ಸ್ಥಿತಿಗತಿ ಸರಿಯಿಲ್ಲ

ಗಾಂಧಿ ಭವನಗಳ ಸ್ಥಿತಿಗತಿ ಸರಿಯಿಲ್ಲ

ಕರ್ನಾಟಕದ ಕೆಲ ಹಳ್ಳಿಗಳಲ್ಲಿರುವ ಗಾಂಧಿ ಭವನಗಳ ಸ್ಥಿತಿಗತಿ ಸರಿಯಿಲ್ಲ, ಅವುಗಳನ್ನು ಉಳಿಸಿಕೊಳ್ಳುವ ಕಾರ್ಯ ತುರ್ತಾಗಿ ನೆಡೆಯಬೇಕು ಎಂದು ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದರು. ನಾ ಮಾಡಿರುವುದನ್ನು ಉಳಿಸಿಕೊಳ್ಳಿ ಮತ್ತು ಬೆಳಸಿಕೊಳ್ಳಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಕಾರ್ಯಕ್ರಮದ ಪ್ರಾರಂಭದ ಮುನ್ನ ಸಂಗೀತ ಕಟ್ಟಿ ಮತ್ತು ತಂಡದವರು ನೆಡೆಸಿಕೊಟ್ಟ ಗಾಂಧಿ ಪ್ರಿಯ ಗೀತೆಗಳ ಗಾಯನ ಕಾರ್ಯಕ್ರಮ ಜನಮನ ಸೆಳೆಯಿತು.

ಚನ್ನಮ್ಮ ಹಳ್ಳಿಕೇರಿ ಕುರಿತ ಸಾಕ್ಷ್ಯಚಿತ್ರ:

ಚನ್ನಮ್ಮ ಹಳ್ಳಿಕೇರಿ ಕುರಿತ ಸಾಕ್ಷ್ಯಚಿತ್ರ:

ಇದೇ ಸಮಯದಲ್ಲಿ ಕಲಾವಿದ ಎಂ ಎಸ್ ಮೂರ್ತಿ ಚಿತ್ರಿಸಿರುವ ‘ಮಹಾತ್ಮ ಗಾಂಧಿ ರೇಖಾ ಚಿತ್ರ ದರ್ಶನ' ಹಾಗೂ ಪತ್ರಕರ್ತೆ ರೇಖಾರಾಣಿ ನಿರ್ದೇಶಿಸಿರುವ ಚನ್ನಮ್ಮ ಹಳ್ಳಿಕೇರಿ ಅವರ ಸಾಕ್ಷ್ಯಚಿತ್ರವನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ಹೊ. ಶ್ರೀನಿವಾಸಯ್ಯ ಬಿಡುಗಡೆಗೊಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎಂ. ಲಕ್ಷ್ಮಿ ನಾರಯಣ ಅವರು ಪ್ರಾಸ್ತಾವಿಕ ನುಡಿ ಮತ್ತು ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಸ್ವಾಗತ ಹಾಗೂ ಉಪನಿರ್ದೇಶಕರಾದ ಬಿ ದಿನೇಶ್ ಅವರು ವಂದನಾರ್ಪಣೆ ಮಾಡಿದರು.

English summary
Freedom fighter and Gandhian Channamma Hallikeri has been felicitated and awarded with Mahatma Gandhi Seva Award, Karnataka-2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more