ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಉಚಿತ ಪಾರ್ಕಿಂಗ್‌ ವ್ಯವಸ್ಥೆ!

By Nayana
|
Google Oneindia Kannada News

Recommended Video

ಮೆಟ್ರೋ ನಿಲ್ದಾಣದಲ್ಲಿ ಒಂದು ವಾರ ಉಚಿತ ಪಾರ್ಕಿಂಗ್‌ !

ಬೆಂಗಳೂರು, ಜು.28: ನಾಯಂಡಹಳ್ಳಿ ಮೆಟ್ರೋ ನಿಲ್ದಾಣ(ಮೈಸೂರು ರಸ್ತೆ)ದಲ್ಲಿ ಒಂದು ವಾರ ಉಚಿತ ಪಾರ್ಕಿಂಗ್‌ ಸೌಲಭ್ಯ ದೊರೆಯಲಿದೆ. ಯಾಕೆ ಅಂತೀರಾ, ಮೈಸೂರು ರಸ್ತೆಯಲ್ಲಿರುವ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಸಂಸ್ಥೆಯ ಗುತ್ತಿಗೆ ಮುಗಿದಿದೆ.

ಇದೀಗ ಮತ್ತೊಂದು ಸಂಸ್ಥೆ ಈ ಗುತ್ತಿಗೆಯನ್ನು ಪಡೆಯಬೇಕಿದೆ ಅಲ್ಲಿಯವರೆಗೆ ನಿಲ್ದಾಣದಲ್ಲಿ ಉಚಿತವಾಗಿ ಪಾರ್ಕಿಂಗ್‌ ಮಾಡಬಹುದು ಒಂದು ವಾರದ ಮಟ್ಟಿಗೆ ಪಾರ್ಕಿಂಗ್‌ ನೋಡಿಕೊಳ್ಳಲು ಸಂಸ್ಥೆಯ ಸಿಬ್ಬಂದಿಯನ್ನೇ ನೇಮಿಸಲಿದೆ.

ಇಂದಿರಾನಗರ ಮೆಟ್ರೋದಲ್ಲಿ ಸಿಕ್ಕಿದ್ದೇನು? ತಲೆಕೆಡಿಸಿಕೊಂಡಿರುವ ಪೊಲೀಸರುಇಂದಿರಾನಗರ ಮೆಟ್ರೋದಲ್ಲಿ ಸಿಕ್ಕಿದ್ದೇನು? ತಲೆಕೆಡಿಸಿಕೊಂಡಿರುವ ಪೊಲೀಸರು

ದ್ವಿಚಕ್ರ ವಾಹನಕ್ಕೆ ಮೊದಲ ನಾಲ್ಕು ಗಂಟೆಗೆ 15 ರೂ., ನಂತರದ ಪ್ರತಿ ಹೆಚ್ಚುವರಿ ಗಂಟೆಗೆ 5 ರೂ. ಹಾಗೂ ಇಡೀ ದಿನದ ಪಾರ್ಕಿಂಗ್‌ಗೆ 30 ರೂ. ಶುಲ್ಕ ನಿಗದಿಪಡಿಸಲಾಗಿದೆ. ಕಾರುಗಳಿಗೆ ಮೊದಲ ನಾಲ್ಕು ಗಂಟೆಗೆ 30 ರೂ., ನಂತರದ ಪ್ರತಿ ಹೆಚ್ಚುವರಿ ಗಂಟೆಗೆ 10 ರೂ. ಹಾಗೂ ಇಡೀ ದಿನದ ಪಾರ್ಕಿಂಗ್‌ಗೆ 60 ರೂ. ಶುಲ್ಕವಿದೆ. ಸೈಕಲ್‌ ನಿಲ್ಲಿಸಲು ಗಂಟೆಗೆ 1 ರೂ., ಇಡೀ ದಿನಕ್ಕೆ 10 ರೂ. ಶುಲ್ಕವಿದೆ. ಪ್ರತಿ ದಿನ ಉದ್ಯೋಗಿಗಳಿಗೆ ಮೆಟ್ರೊ ಪ್ರಯಾಣಕ್ಕೆ ಖರ್ಚು ಮಾಡುವುದರೊಂದಿಗೆ ಪಾರ್ಕಿಂಗ್‌ಗೂ ಹಣ ಪಾವತಿಸುತ್ತಿದ್ದರು.

Free parking in Mysuru road metro station for one week

ನೇರಳೆ ಮಾರ್ಗದ ಮೈಸೂರು ರಸ್ತೆ ಮೆಟ್ರೋ ಸಂಪರ್ಕಿಸುವ ಬೈಯಪ್ಪನಹಳ್ಳಿಗೆ ಸಂಪರ್ಕ ಕಲ್ಪಿಸುವುದರಿಂದ ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ಈ ಮಾರ್ಗವು ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುವುದರಿಂದ ಪ್ರತಿ ದಿನ ಉದ್ಯೋಗಿಗಳು ಹೆಚ್ಚಾಗಿ ಪ್ರಯಾಣಿಸುತ್ತಿದ್ದಾರೆ. ನಾಯಂಡಹಳ್ಳಿ, ಕೆಂಗೇರಿ, ರಾಜರಾಜೇಶ್ವರಿ ನಗರ ಮೊದಲಾದ ಪ್ರದೇಶಗಳಿಂದ ಬೈಕ್‌ನಲ್ಲಿ ಬರುವ ಉದ್ಯೋಗಿಗಳು ನಿಲ್ದಾಣದ ಬಳಿ ಪಾರ್ಕಿಗ್‌ ಮಾಡಿ ಸಂಚರಿಸುತ್ತಿದ್ದಾರೆ.

ಒಂದು ವಾರದ ನಂತರ ಪಾರ್ಕಿಂಗ್‌ ಶುಲ್ಕ ಪಾವತಿ ವ್ಯವಸ್ಥೆ ಜಾರಿಗೆ ಬರಲಿದೆ. ಅಲ್ಲಿಯವರೆಗೆ ಉಚಿತವಾಗಿ ವಾಹನ ನಿಲುಗಡೆ ಮಾಡಬಹುದು, ಮೆಟ್ರೋ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

English summary
As contract was ended with private agency, BMRCL should procure new one for parking lot at Mysore road metro station. So there will be no parking fee collection at the station till new agency resume work by next week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X