ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಗ್ಯಾಂಗ್‌ವಾರ್‌ಗೆ ತಿರುಗಿದ ಉಚಿತ ಹಾಲು ವಿತರಣೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಬಿಬಿಎಂಪಿಯಿಂದ ನೀಡಲಾಗುವ ಉಚಿತ ಹಾಲು ವಿತರಣೆ ಗ್ಯಾಂಗ್‌ವಾರ್ ಆಗಿ ಮಾರ್ಪಾಟಾದ ಘಟನೆ ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

ಇಡೀ ದೇಶದ ಜನರ ನಿದ್ದೆಗೆಡಿಸಿದ ಕೊರೊನಾದಿಂದ ದೂರವಿರಲು ಲಾಕ್‌ಡೌನ್ ಘೋಷಿಸಲಾಗಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ಮಂದಿ ಬಡವರಿಗೆ ಸಹಾಯ ಮಾಡುವ ದೃಷ್ಟಿಯಿಂದ ಬಿಬಿಎಂಪಿಯು ಉಚಿತ ಹಾಲು ವಿತರಣೆ ಮಾಡುತ್ತಿತ್ತು. ಆದರೆ ಅದು ಗ್ಯಾಂಗ್‌ವಾರ್‌ಗೆ ತಿರುಗಿರುವ ಘಟನೆ ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

ಲಾಕ್ ಡೌನ್; ಬೆಂಗಳೂರಿಂದ ವಿದೇಶಕ್ಕೆ ಮರಳಿದ್ದು 3 ಸಾವಿರ ಜನರು ಲಾಕ್ ಡೌನ್; ಬೆಂಗಳೂರಿಂದ ವಿದೇಶಕ್ಕೆ ಮರಳಿದ್ದು 3 ಸಾವಿರ ಜನರು

ಹರೀಶ್, ರಾಜಣ್ಣ, ಗಿರಿನರಸಿಂಹಯ್ಯ ಹಾಗೂ ವೆಂಕಟೇಶಪ್ಪ ಅವರು ಬಿಬಿಎಂಪಿ ಅಧಿಕಾರಿಗಳು ನೀಡಿದ್ದ ಹಾಲನ್ನು ಉಚಿತವಾಗಿ ಜನರಿಗೆ ವಿತರಣೆ ಮಾಡುತ್ತಿದ್ದರು.

Free Milk Distribution Turns Gangwar In Bengaluru

ಆರ್ ಗೃಹಿಣಿ ಅಂಜಲಿ ಸರತಿಯಲ್ಲಿ ನಿಂತಿದ್ದರು, ಆ ಸಂದರ್ಭದಲ್ಲಿ ವಿತರಕರು ತಮಗೆ ಬೇಕಾದ ಜನರಿಗೆ ಅರ್ಧ ಲೀಟರ್‌ಗಿಂತಲೂ ಹೆಚ್ಚು ಹಾಲು ವಿತರಣೆ ಮಾಡುವುದನ್ನು ನೋಡಿ ಅದನ್ನು ವಿರೋಧಿಸಿದರು.ಇದರಿಂದ ಕೋಪಗೊಂಡ ಹರೀಶ್ ಮತ್ತೆ ರಾಜಣ್ಣ ಅಂಜಲಿಯವರನ್ನು ನಿಂದಿಸಿ ಅವರನ್ನು ಆ ಜಾಗದಿಂದ ಹೊರಡುವಂತೆ ಹೇಳಿದರು.

ಬಳಿಕ ಅಲ್ಲೇ ನಿಂತಿದ್ದ ಭಾನು ಎಂಬುವವರು ಅಂಜಲಿಯ ಹತ್ತಿರ ಅವರು ನಡೆದುಕೊಂಡ ರೀತಿಯನ್ನು ಪ್ರಶ್ನಿಸಿದರು. ಅಂಜಲಿಯವರ ಸಂಬಂಧಿ ಕೆಂಚಪ್ಪ ಹಾಗೂ ಸಂಕೇತ್ ಬಂದು ವಾದಕ್ಕಿಳಿದರು. ಅದು ಬಳಿಕ ಗ್ಯಾಂಗ್‌ ವಾರ್‌ ಆಗಿ ಪರಿವರ್ತನೆಗೊಂಡಿತ್ತು. ಬಳಿಕ 50ಕ್ಕೂ ಹೆಚ್ಚು ಹಾಲಿನ ಪ್ಯಾಕೇಟ್‌ಗಳನ್ನು ಹರಿದು ರಸ್ತೆಯಲ್ಲಿ ಚೆಲ್ಲಿದರು.

ಒಬ್ಬರನ್ನೊಬ್ಬರು ದೂಷಿಸುತ್ತಾ ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ಇಬ್ಬರೂ ದೂರು ದಾಖಲಿಸಿದ್ದಾರೆ ಪೊಲೀಸ್ ಇಬ್ಬರು ಮಹಿಳೆ ಸೇರಿ ಒಟ್ಟು 9 ಮಂದಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

English summary
Free Distribution Of Milk near Nagasandra Metro Station Turned into gangwar of sorts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X