ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋಂ ಐಸೊಲೇಷನ್‌; ಸೋಂಕಿತರಿಗೆ ಉಚಿತ ಆರೋಗ್ಯ ಕಿಟ್

|
Google Oneindia Kannada News

ಬೆಂಗಳೂರು, ಜುಲೈ 30 : ಹೋಂ ಐಸೊಲೇಷನ್‌ನಲ್ಲಿರುವ ಕೋವಿಡ್ ಸೋಂಕಿತರಿಗೆ ಬಿಬಿಎಂಪಿ ಉಚಿತವಾಗಿ ಆರೋಗ್ಯದ ಕಿಟ್ ವಿತರಣೆ ಮಾಡಲಿದೆ. ಯಾವುದೇ ಸೋಂಕಿನ ಲಕ್ಷಣ ಇಲ್ಲದ ಕೋವಿಡ್ ಸೋಂಕಿತರು ಹೋಂ ಐಸೊಲೇಷನ್‌ನಲ್ಲಿ ಇರಲು ಈಗಾಗಲೇ ಕರ್ನಾಟಕ ಸರ್ಕಾರ ಅನುಮತಿ ನೀಡಿದೆ.

Recommended Video

ಏನಿದು ಹೊಸ ಶಿಕ್ಷಣ ರೀತಿ?ಏನಿದು ಹೊಸ ಸಚಿವಾಲಯ ಬದಲಾವಣೆ? | Oneindia Kannada

ಆಕ್ಸಿಮೀಟರ್, ಥರ್ಮಾಮೀಟರ್ ಸೇರಿದಂತೆ ಸೇರಿದಂತೆ ಇತರ ವಸ್ತುಗಳು ಇರುವ ಕಿಟ್‌ ಅನ್ನು ಬಿಬಿಎಂಪಿ ಉಚಿತವಾಗಿ ನೀಡಲಿದೆ. ಇದರಿಂದಾಗಿ ಕೊರೊನಾ ವೈರಸ್ ಸೋಂಕಿತರು ತಮ್ಮ ಆರೋಗ್ಯದ ಪರೀಕ್ಷೆ ಮಾಡಿಕೊಳ್ಳಲು ಅನುಕೂಲವಾಗಲಿದೆ.

ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ

ಕಿಟ್ ನೀಡುವ ಕುರಿತು ಕಂದಾಯ ಸಚಿವ ಆರ್. ಅಶೋಕ ಪ್ರಸ್ತಾವನೆಯನ್ನು ಮಂಡಿಸಿದ್ದರು. ಬಿಬಿಎಂಪಿ ಆಯಕ್ತ ಮಂಜುನಾಥ ಪ್ರಸಾದ್ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಸುಮಾರು 3 ಸಾವಿರ ರೂ.ಗಳ ಈ ಕಿಟ್‌ಗಳನ್ನು ಹೋಂ ಐಸೊಲೇಷನ್‌ನಲ್ಲಿರುವ ರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತದೆ.

ಕರ್ನಾಟಕದಲ್ಲಿ ಹೋಂ ಕ್ವಾರಂಟೈನ್ ನಿಯಮ ಮುರಿದವರು 3 ಲಕ್ಷ ಜನ! ಕರ್ನಾಟಕದಲ್ಲಿ ಹೋಂ ಕ್ವಾರಂಟೈನ್ ನಿಯಮ ಮುರಿದವರು 3 ಲಕ್ಷ ಜನ!

ಬಿಬಿಎಂಪಿ ಕಂಟ್ರೋಲ್ ರೂಂ ಸಿಬ್ಬಂದಿಗಳಿಗೆ ಈ ಉಪಕರಣ ಬಳಕೆ ಮಾಡುವ ಕುರಿತು ಮಾಹಿತಿ ನೀಡಲಿದ್ದಾರೆ. ಐಸೊಲೇಷನ್‌ನಲ್ಲಿರುವ ರೋಗಿಯ ಉಸಿರಾಟದ ಮಟ್ಟ ಶೇ 90ಕ್ಕಿಂತ ಕಡಿಮೆಯಾದರೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಬೇಕಾಗುತ್ತದೆ.

ಹೋಂ ಕ್ವಾರಂಟೈನ್ ಉಲ್ಲಂಘನೆ; ಬೆಂಗಳೂರಲ್ಲಿ 570 ಎಫ್‌ಐಆರ್ ಹೋಂ ಕ್ವಾರಂಟೈನ್ ಉಲ್ಲಂಘನೆ; ಬೆಂಗಳೂರಲ್ಲಿ 570 ಎಫ್‌ಐಆರ್

ಪ್ರತಿ ವಾರ್ಡ್‌ಗೆ ಅನುದಾನ

ಪ್ರತಿ ವಾರ್ಡ್‌ಗೆ ಅನುದಾನ

ಪ್ರತಿ ವಾರ್ಡ್‌ನಲ್ಲಿನ ಬಿಬಿಎಂಪಿ ಸದಸ್ಯರಿಗೆ ನೀಡಲಾಗುವ ಅನುದಾನದಲ್ಲಿಯೇ ಈ ಮೆಡಿಕಲ್ ಕಿಟ್‌ಗಳನ್ನು ಖರೀದಿ ಮಾಡಿ ಉಚಿತವಾಗಿ ನೀಡಲಾಗುತ್ತದೆ. ಪ್ರತಿ ವಾರ್ಡ್‌ಗೆ ರೇಷನ್ ಕಿಟ್ ಮತ್ತು ಮೆಡಿಕಲ್ ಕಿಟ್ ಖರೀದಿಗೆ 25 ಲಕ್ಷ ರೂ. ಬಿಡುಗಡೆ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.

12 ಸಾವಿರ ಜನರು

12 ಸಾವಿರ ಜನರು

ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿಯೂ ಈ ಕುರಿತು ಚರ್ಚೆ ನಡೆದಿದೆ. ಬಿಬಿಎಂಪಿ ಸದಸ್ಯರು ಈ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ಅನುದಾನ ಬಿಡುಗಡೆ ಮಾಡಿ ಎಂದು ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ 12,000 ಜನರು ಹೋಂ ಐಸೊಲೇಷನ್‌ನಲ್ಲಿದ್ದಾರೆ.

ಐಸೋಲೇಷನ್ ಮಾರ್ಗಸೂಚಿ

ಐಸೋಲೇಷನ್ ಮಾರ್ಗಸೂಚಿ

ಮನೆಯೇ ಕೋವಿಡ್ ಆರೈಕೆ ಕೇಂದ್ರವಾದರೆ ಸೋಂಕು ತಗುಲಿರುವ ವ್ಯಕ್ತಿ ಮನೆಯಲ್ಲಿ ಕಡ್ಡಾಯವಾಗಿ ಪ್ರತ್ಯೇಕವಾಗಿ ವಾಸವಾಗಿರಬೇಕು. ಮನೆಯಲ್ಲಿಯೂ ವೈದ್ಯಕೀಯ ಅಥವ ಎನ್ 95 ಮಾಸ್ಕ್ ಧರಿಸಬೇಕು. ಪ್ರತಿ 8 ಗಂಟೆಗೆ ಮಾಸ್ಕ್ ಅನ್ನು ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಬಳಸಿ ವಿಲೇವಾರಿಗೊಳಬೇಕು. ನಿಗದಿತ ಕೋಣೆಯಲ್ಲೇ ಉಳಿಯಬೇಕು, ಇತರರಿಂದ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಪೌಷ್ಠಿಕ ಆಹಾರ ಸೇವಿಸಿ

ಪೌಷ್ಠಿಕ ಆಹಾರ ಸೇವಿಸಿ

ಹೋಂ ಐಸೊಲೇಷನ್‌ನಲ್ಲಿರುವ ವ್ಯಕ್ತಿಗಳು ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಪ್ರತಿ ದಿನ ಪಲ್ಸ್ ಆಕ್ಸಿಮೀಟರ್ ಮತ್ತು ಡಿಜಿಟಲ್ ಥರ್ಮಾಮೀಟರ್‌ನೊಂದಿಗೆ ನಿಮ್ಮ ಆರೋಗ್ಯವನ್ನು ನಿವೇ ಪರಿಶೀಲಿಸಿಕೊಳ್ಳಬೇಕು. ಧೂಮಪಾನ, ತಂಬಾಕು, ಮದ್ಯ ಸೇವನೆ ಮಾಡಬೇಡಿ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

English summary
BBMP to provide free medical kit for home isolation Covid - 19 positive patients. Kit will have oximeter and thermometer and other things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X