ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರಿಗೆ ಒಂದು ಗಂಟೆ ಉಚಿತ ಇಂಟರ್ನೆಟ್: ಡಿಸಿಎಂ ಅಶ್ವತ್ಥನಾರಾಯಣ

|
Google Oneindia Kannada News

ಬೆಂಗಳೂರು, ನವೆಂಬರ್ 20: ನಗರವಾಸಿಗಳಿಗೆ ಉಪಮುಖ್ಯಮಂತ್ರಿ ಅಶ್ವತ್ಥಾರಾಯಣ ಸಂತಸ ಸುದ್ದಿ ನೀಡಿದ್ದಾರೆ. ಪ್ರತಿ ದಿನ ಒಂದು ಗಂಟೆ ಉಚಿತ ಇಂಟರ್ನೆಟ್ ಸೇವೆ ನೀಡುವುದಾಗಿ ಅವರು ಘೋಷಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಬೆಂಗಳೂರು ಟೆಕ್ ಸಮಿಟ್' ನಲ್ಲಿ ಮಾತನಾಡಿದ ಅವರು, ನಗರದಲ್ಲಿ ಸಾರ್ವಜನಿಕ ವೈಪೈ ಹಾಟ್‌ ಸ್ಪಾಟ್‌ಗಳನ್ನು ನಿರ್ಮಿಸಿ ಪ್ರತಿದಿನ ಒಂದು ಗಂಟೆ ಉಚಿತ ಇಂಟರ್ನೆಟ್ ಸೇವೆ ನೀಡುವುದಾಗಿ ಹೇಳಿದ್ದಾರೆ.

'ಉಚಿತ ಇಂಟರ್ನೆಟ್‌ ನೀಡುವುದು ನಗರವಾಸಿಗಳ ಬಹುದಿನಗಳ ಬೇಡಿಕೆ ಆಗಿದ್ದು, ಅದನ್ನು ಶೀಘ್ರವೇ ಈಡೇರಿಸಲಾಗುವುದು. ಜನಸಂದಣಿ ಪ್ರದೇಶಗಳನ್ನು ಗುರುತಿಸಿ ರೂಟರ್‌ಗಳನ್ನು ಅಳವಡಿಸಿ ವೇಗದ ಇಂಟರ್ನೆಟ್‌ ಸೌಲಭ್ಯ ಒದಗಿಸಲಾಗುವುದು' ಎಂದು ಅಶ್ವತ್ಥನಾರಾಯಣ್ ಹೇಳಿದರು.

Free Internet To Bengaluru People: DCM Ashwath Narayan

ನಗರದಲ್ಲಿ 4000 ವೈ-ಪೈ ಹಾಟ್‌ಸ್ಪಾಟ್‌ ಗಳನ್ನು ಅಳವಡಿಸಲಾಗುವುದು. ವೈ-ಫೈ ಟವರ್, ಕ್ಯಾಮೆರಾ ಎಲ್ಲ ಸೌಲಭ್ಯಗಳುಲ್ಲ ಈ ಹಾಟ್‌ಸ್ಪಾಟ್‌ಗಳ ಅಳವಡಿಕೆಗೆ ಸುಮಾರು 100 ಕೋಟಿ ಖರ್ಚಾಗುವ ಸಾಧ್ಯತೆ ಇದ್ದು, ಆ್ಯಕ್ಟ್ ಸಂಸ್ಥೆ ಜೊತೆ ಈ ಬಗ್ಗೆ ಮಾತುಕತೆ ಮುಗಿದಿದ್ದು, ಒಂಬತ್ತು ತಿಂಗಳಲ್ಲಿ ಯೋಜನೆ ಜಾರಿ ಆಗಲಿದೆ ಎಂದರು.

ನಗರವಾಸಿಗಳಿಗೆ ಒದಗಿಸಲಾಗುವ ಇಂಟರ್ನೆಟ್‌ನ ವೇಗ 1 ಗಿಗಾ ಬೈಟ್ ಸ್ಪೀಡ್‌ನದ್ದಾಗಿರುತ್ತದೆ. ನಾಲ್ಕು ವರ್ಷಗಳ ಬೇಡಿಕೆ ಈಗ ಈಡೇರಲಿದೆ. ಡಿಜಿಟಲ್ ಭಾರತ ಘೋಷಣೆಗೆ ನಾವು ಬದ್ಧವಾಗಿದ್ದೇವೆ ಎಂದು ಅಶ್ವತ್ಥನಾರಾಯಣ ಹೇಳಿದರು.

English summary
DCM Ashwath Narayan said, government will give free internet to Bengalauru people soon. He said one hour free internet will be issued freely.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X