ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವತಿಯರಿಗೆ ಉಚಿತವಾಗಿ ಐಎಎಸ್‌ ಕೋಚಿಂಗ್‌ ಯೋಜನೆಗೆ ಚಾಲನೆ

|
Google Oneindia Kannada News

ಬೆಂಗಳೂರು ಏಪ್ರಿಲ್‌ 11: ರಾಜ್ಯದ ಗ್ರಾಮೀಣ ಪ್ರದೇಶದ 20 ಯುವತಿಯರಿಗೆ ಉಚಿತವಾಗಿ ಐಎಎಸ್‌ ಕೋಚಿಂಗ್‌ ನೀಡುವ ದ ಐಎಎಸ್‌ ಹಬ್‌ನ ನೂತನ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ.

ದೇಶದಲ್ಲೇ ಸಿವಿಲ್‌ ಸರ್ವೀಸ್‌ ಪರೀಕ್ಷೆಗಳಿಗೆ ಅತ್ಯುತ್ತಮ ಗುಣಮಟ್ಟದ ತರಬೇತಿಯನ್ನು ನೀಡಲಾಗುವ ದ ಐಎಎಸ್‌ ಹಬ್‌ ನ ಬೆಂಗಳೂರು ಶಾಖೆಗೆ ಇಂದು ಪಶು ವೈದ್ಯಕೀಯ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್‌, ನಿವೃತ್ತ ಡಿಜಿಪಿ ಶಂಕರ್‌ ಬಿದರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ ರವಿ ಸುರಪುರ, ಸೇಲಂ ನ ಪೊಲೀಸ್‌ ವರಿಷ್ಠಾಧಿಕಾರಿ ದೀಪಾ ಗಾಣಿಗೇರ್‌ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ದ ಐಎಎಸ್‌ ಹಬ್‌ ನ ಸಿಎಂಡಿ ಎಂ ಕೆ ಯಾದವ್‌, ಬೆಂಗಳೂರು ಶಾಖೆಯ ನಿರ್ದೇಶಕಿ ಶ್ರೀಮತಿ ಜ್ಯೋತಿ ಗಾಣೀಗೇರ್‌ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ನಂತರ ಮಾತನಾಡಿದ ನಿವೃತ್ತ ಡಿಜಿಪಿ ಶಂಕರ್‌ ಬಿದರಿ, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ. ಈ ವಿದ್ಯಾರ್ಥಿಗಳಿಗೆ ಅಗತ್ಯ ಕೋಚಿಂಗ್‌ ಸಿಕ್ಕಲ್ಲಿ ಉನ್ನತ ಸಾಧನೆ ಮಾಡಬಲ್ಲರು. ಅವರಲ್ಲಿ ಹಲವರಿಗೆ ಆರ್ಥಿಕ ತೊಂದರೆಯಿಂದ ಬಳಲುತ್ತಿರುವವರಿಗೆ ಇಂತಹ ಉಚಿತ ಕೋಚಿಂಗ್‌ ಸೌಲಭ್ಯಗಳು ಬಹಳ ಅನುಕೂಲ ಮಾಡಿಕೊಡುತ್ತವೆ. ಅತ್ಯಾಧುನಿಕ ಸೌಲಭ್ಯಗಳು ಹಾಗೂ ಗುಣಮಟ್ಟದ ಕೋಚಿಂಗ್‌ ಕೇಂದ್ರಗಳು 20 ಯವತಿಯರಿಗೆ ಉಚಿತವಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿ ಕೋಚಿಂಗ್‌ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.

Free IAS coaching Project for 20 Young Rural Women Launched

ಪಶುವೈದ್ಯಕೀಯ ಇಲಾಖೆ ಕಾರ್ಯದರ್ಶಿ ಪಿ ಮಣಿವಣ್ಣನ್‌ ಮಾತನಾಡಿ, ಕಠಿಣ ಪರಿಶ್ರಮದಿಂದ ಉನ್ನತ ಸಾಧನೆ ಮಾಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಉನ್ನತ ಪರೀಕ್ಷೆಗಳಿಗೆ ತಯಾರಾಗಲು ಅತ್ಯುತ್ತಮ ಸೌಲಭ್ಯಗಳು ದೊರಯುತ್ತಿವೆ. ಇದನ್ನು ಸದಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ದ ಐಎಎಸ್‌ ಹಬ್‌ನಿಂದ ಕೋಚಿಂಗ್‌ ಪಡೆದು 2019 ಐಎಎಸ್‌ ಪ್ರೊಬೇಷನರಿ ಅಧಿಕಾರಿ ರಿತಿಕಾ ಜಿಂದಾಲ್‌ ಮಾತನಾಡಿ, ಐಎಎಸ್‌ ಹಬ್‌ ಕೋಚಿಂಗ್‌ ಕ್ಲಾಸ್‌ ನಿಂದ ಹಲವಾರು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕೋಚಿಂಗ್‌ ನೀಡಲಾಗುತ್ತದೆ. ಅಲ್ಲದೆ, ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋಚಿಂಗ್‌ ಕೂಡಾ ನೀಡುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಸಿವಿಲ್‌ ಸರ್ವೀಸಸ್‌ ಪರೀಕ್ಷೆಗಳಲ್ಲಿ ದ ಐಎಎಸ್‌ ಕ್ಲಬ್‌ನ ವಿದ್ಯಾ ರ್ಥಿಗಳು ಉತ್ತಮ ಸಾಧನೆ ತೋರಿಸುತ್ತಿದ್ದಾರೆ ಎಂದರು.

Free IAS coaching Project for 20 Young Rural Women Launched

Recommended Video

ವಿಶ್ವದ ಇ-ಕಾಮರ್ಸ್ ದೈತ್ಯನಿಗೆ ಬಿಗ್ ಶಾಕ್..! | Oneindia Kannada

ದ ಐಎಎಸ್‌ ಹಬ್‌ನ ಬೆಂಗಳೂರು ಶಾಖೆ, ಎಲ್‌ಟೆನ್‌ ಟೆಕ್ನಾಲಜೀಸ್‌ ಮತ್ತು ಐ ಫೋಕಸ್‌ ಟೆಕ್ನಾಲಜಿ ಸರ್ವೀಸಸ್‌ನ ನಿರ್ದೇಶಕಿ ಜ್ಯೋತಿ ಗಾಣೀಗೇರ್‌ ಮಾತನಾಡಿ, ಗ್ರಾಮೀಣ ಪ್ರದೇಶದ ಯುವತಿಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಾವು ಈ ಯೋಜನೆಯನ್ನು ಘೋಷಿಸಿದ್ದೇವೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ನಾವು ಇತರೆ ಕೋರ್ಸ್‌ಗಳಲ್ಲೂ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ್ದು ಗ್ರಾಮೀಣ ಪ್ರದೇಶದ ಪ್ರತಿಭಾವಂತರಿಗೆ ಅಗತ್ಯ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು.

English summary
The new project of the IAS Hub, providing free IAS coaching to 20 young women in the state was launched in the Bengaluru on Sunday(April 11).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X