ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಜು.17ರಂದು ಬೃಹತ್ ಉಚಿತ ಆರೋಗ್ಯ ಶಿಬಿರ

By Prasad
|
Google Oneindia Kannada News

ಬೆಂಗಳೂರು, ಜುಲೈ 16 : ವಾಸವಿ ಕ್ಲಬ್ಸ್ ಇಂಟರ್‌ನ್ಯಾಷನಲ್ (ಜಿಲ್ಲೆ -ವಿ 301ಎ) ವತಿಯಿಂದ 3ನೇ ಬಾರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೆಂಗಳೂರಿನಲ್ಲಿ ಜುಲೈ 17ರಂದು ಭಾನುವಾರ ಆಯೋಜಿಸಲಾಗಿದೆ.

ಭಾನುವಾರ ಜುಲೈ 17ರಂದು ನಡೆಯುವ ಆರೋಗ್ಯ ಶಿಬಿರವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಉದ್ಘಾಟಿಸಲಿದ್ದು, ಮಾಜಿ ಗೃಹ ಸಚಿವ ಪಿಜಿಆರ್ ಸಿಂಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕಿಮ್ಸ್ ಹಾಸ್ಪಿಟಲ್, ವಿಎಸ್ ಡೆಂಟಲ್ ಕೇರ್, ಒಕ್ಕಲಿಗರ ಸಂಘ ಡೆಂಟಲ್ ಕಾಲೇಜು ಮತ್ತು ಅಪೊಲೋ ಆಸ್ಪತ್ರೆಯ ಸಹಯೋಗದಲ್ಲಿ ನಡೆಯಲಿರುವ ಈ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಇದೇ ಮೊದಲ ಬಾರಿಗೆ ತಜ್ಞ ವೈದ್ಯರು ವಿವಿಧ ರೀತಿಯ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. [ನಿಯಮಿತ ಯೋಗ ಮಹಿಳೆಯ ಸೌಂದರ್ಯಕ್ಕೆ ರಾಮಬಾಣ]

Free Health Check Up Camp in Bengaluru on 17th July

ಹೃದಯ ಸಂಬಂಧಿತ ಕಾಯಿಲೆಗಳ ತಪಾಸಣೆ, ಬಿಪಿ, ಇಸಿಜಿ, ಎಕೋ, ಶುಗರ್ ಟೆಸ್ಟ್, ಆರ್ಥೋಪೆಡಿಕ್ಸ್, ನರರೋಗ ತಪಾಸಣೆ, ಥೈರಾಯಿಡ್, ಸ್ತ್ರೀರೋಗ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ; ದಂತ ತಪಾಸಣೆ, ನೇತ್ರ ತಪಾಸಣೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ತಜ್ಞವೈದ್ಯರು ಪರಿಶೀಲಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.

ಈ ಬಾರಿಯ ಶಿಬಿರದಲ್ಲಿ ದಂತ ತಪಾಸಣೆಗಾಗಿಯೇ 2 ಕೋಟಿ ರು. ಮೌಲ್ಯದ ಸರ್ಜಿಕಲ್ ವಿಶೇಷ ಬಸ್ ಆಗಮಿಸಲಿದೆ. ದಂತ ತಪಾಸಣೆ, ಚಿಕಿತ್ಸೆ ಸೇರಿದಂತೆ ಹಲವು ಆಧುನಿಕ ಚಿಕಿತ್ಸಾ ಸೌಲಭ್ಯಗಳು ಈ ಬಸ್‌ನಲ್ಲಿರುವುದು ವಿಶೇಷ. [ರಕ್ತದೊತ್ತಡ ಮಿದುಳಿಗೆ ಕೊಡಲಿ ಪೆಟ್ಟು ನೀಡೀತು, ಹುಷಾರ್!]

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬೃಹತ್ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ, ಇದರ ಲಾಭ ಪಡೆಯಬಹುದು ಎಂದು ರಜತಾ ಡೆವಲಪರ್ಸ್ ಅಧ್ಯಕ್ಷ ವಿಎನ್. ಕೆಸಿಜಿಎಫ್ ಭೂಪಾಳಂ ಸುನಿಲ್ ಹೇಳಿದ್ದಾರೆ. ಜತೆಗೆ ಕಣ್ಣಿನ ಪೊರೆ ಇದ್ದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸಾ ಸೌಲಭ್ಯವನ್ನೂ ಕಲ್ಪಿಸಲಾಗುವುದು ಎಂದೂ ಅವರು ತಿಳಿಸಿದರು. [ಮಲೇರಿಯಾ ಬಗ್ಗೆ ತಿಳಿಯಲೇಬೇಕಾದ 10 ಸಂಗತಿಗಳು]

ದಿನಾಂಕ : 17 ಜುಲೈ, 2016, ಭಾನುವಾರ
ಸಮಯ : ಬೆಳಗ್ಗೆ 9 ಗಂಟೆಯಿಂದ
ಸ್ಥಳ : ಆದಿಲಕ್ಷ್ಮಮ್ಮ ಕನ್‌ವೆನ್ಷನ್ ಹಾಲ್, ವಾಸವಿ ದೇವಸ್ಥಾನದ ಎದುರು, ವಿವಿಪುರಂ, ಬೆಂಗಳೂರು.

English summary
Vasavi Pride & Vasavi KCGF jointly hosting FREE Health Checkup Camp this Sunday 17th July 2016 9AM at Adilakshmi Coventional Hall, VV Puram, Bengaluru. Rs. 2 crore worth surgical bus for dental check up will be attraction. Dr Sharan Prakash Patil will be inaugurating this camp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X