ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಉಚಿತ ಬಸ್ ಪಾಸ್

|
Google Oneindia Kannada News

ಬೆಂಗಳೂರು ಡಿಸೆಂಬರ್ 22: ಲಕ್ಷಾಂತರ ಮಹಿಳಾ ಗಾರ್ಮೆಂಟ್ಸ್ ಕಾರ್ಮಿಕರಿಗೆ ಅನುಕೂಲವಾಗುವಂತೆ ಬಿಎಂಟಿಸಿ ಕಾರ್ಮಿಕ ಇಲಾಖೆ ಸಹಭಾಗಿತ್ವದಲ್ಲಿ ಮಾಸಿಕ ಬಸ್ ಪಾಸ್ ನೀಡಲು ನಿರ್ಧರಿಸಿದೆ.ಬೆಂಗಳೂರಿನ 850 ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಸುಮಾರು 3 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಸುಮಾರು 80% ರಷ್ಡು ಮಹಿಳೆಯರು ಕೆಲಸ ಮಾಡುತ್ತಾರೆ. ಬಹುತೇಕ ಗಾರ್ಮೆಂಟ್ಸ್ ಉದ್ಯೋಗಿಗಳು ತಮ್ಮ ಕೆಲಸದ ಸ್ಥಳವನ್ನು ತಲುಪಲು ಆಟೋಗಳು, ಖಾಸಗಿ ವಾಹನಗಳು ಮತ್ತು ಮಿನಿ ಬಸ್‌ಗಳನ್ನು ಅವಲಂಬಿಸಿದ್ದಾರೆ ಎಂದು BMTC ನಿಂದ ಮಂಗಳವಾರ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಮಹಿಳಾ ಗಾರ್ಮೆಂಟ್ಸ್ ಕಾರ್ಮಿಕರಿಗೆ ಆರ್ಥಿಕ ಸಹಾಯ ಮಾಡಲುವ ಉದ್ದೇಶದಿಂದ ಜನವರಿ 2022ರಲ್ಲಿ ಪ್ರಾರಂಭವಾಗಲಿರುವ 'ವನಿತಾ ಸಂಗಾತಿ' ಯೋಜನೆಯಡಿ ಉಚಿತ ಬಸ್ ಪಾಸ್‌ಗಳನ್ನು ನೀಡಲು ತೀರ್ಮಾನಿಸಲಾಗಿದೆ. ಇದಕ್ಕೆ ತಗಲುವ ವೆಚ್ಚದ ಪೈಕಿ ಶೇಕಡಾ 40ರಷ್ಟು ಹಣ ಗಾರ್ಮೆಂಟ್ಸ್ ಮಾಲೀಕರು, ಶೇಕಡಾ 40ರಷ್ಟು ಹಣವನ್ನು ರಾಜ್ಯ ಸರ್ಕಾರ ಹಾಗೂ ಉಳಿದ ಶೇಕಡಾ 20ರಷ್ಟು ಹಣವನ್ನು ಬಿಎಂಟಿಸಿ ಭರಿಸುತ್ತದೆ. ವನಿತಾ ಸಂಗಾತಿ ಯೋಜನೆ ಅಡಿ 3 ಲಕ್ಷ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಣೆಗೆ ಬಿಎಂಟಿಸಿ ಮುಂದಾಗಿದೆ.

ಮಹಿಳಾ ಗಾರ್ಮೆಂಟ್ಸ್ ಕಾರ್ಮಿಕರು ಉಚಿತ ಬಸ್ ಪಾಸ್ ಪಡೆಯುವುದು ಹೇಗೆ?

'ವನಿತಾ ಸಂಗಾತಿ' ಯೋಜನೆಯಡಿ ಉಚಿತ ಮಾಸಿಕ ಬಸ್ ಪಾಸ್‌ಗಳನ್ನು ಪಡೆಯಲು ಬಯಸುವ ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಗಳು ತಮ್ಮ ಕೋರಿಕೆಯನ್ನು ಆಯಾ ಗಾರ್ಮೆಂಟ್ಸ್ ಫ್ಯಾಕ್ಟರಿ ಮಾಲೀಕರಿಗೆ ಸಲ್ಲಿಸಬೇಕು.

Bengaluru: Free bus pass likely to bring relief for women garment employees

ಗಾರ್ಮೆಂಟ್ಸ್‌ನ ಮಾಲೀಕರು ಪಾಸ್‌ಗಳನ್ನು ಪಡೆಯುವ ಮಹಿಳಾ ಉದ್ಯೋಗಿಗಳ ಪಟ್ಟಿಯನ್ನು ಸಂಗ್ರಹಿಸಿ ಕರ್ನಾಟಕ ಕಾರ್ಮಿಕ ಮಂಡಳಿ, ಬೆಂಗಳೂರು ([email protected]) ಗೆ ಡಿಸೆಂಬರ್ 22 ರಿಂದ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಕಾರ್ಮಿಕ ಮಂಡಳಿಯು ಅರ್ಜಿಗಳನ್ನು ಪರಿಶೀಲಿಸುತ್ತದೆ ಮತ್ತು ಅರ್ಹ ಮಹಿಳಾ ಉದ್ಯೋಗಿಗಳ ಪಟ್ಟಿಯನ್ನು BMTC ಗೆ ಸಲ್ಲಿಸುತ್ತದೆ.

ವನಿತಾ ಸಂಗಾತಿ ಪಾಸ್​ಗಾಗಿ ಗಾರ್ಮೆಂಟ್ಸ್‌ ಮಾಲೀಕರಿಂದ ಸ್ವೀಕರಿಸುವ ಕೋರಿಕೆಗಳನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಬೆಂಗಳೂರು ಅವರು ಪರಿಶೀಲಿಸಿ, ಅರ್ಹ ಮಹಿಳಾ ಕಾರ್ಮಿಕರ ಪಟ್ಟಿಯನ್ನು ಬಿಎಂಟಿಸಿಗೆ ಕಳುಹಿಸಬೇಕು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸ್ವೀಕರಿಸುವ ಪಟ್ಟಿಗನುಸಾರವಾಗಿ, ಗಾರ್ಮೆಂಟ್ಸ್‌ ಮಾಲೀಕರಿಂದ ಅವಶ್ಯವಾದ ದಾಖಲೆಗಳ ಪ್ರತಿಗಳನ್ನು ಹಾಗೂ ಗಾರ್ಮೆಂಟ್ಸ್‌ ಮಾಲೀಕರ ಪಾಲಿನ ಮೊತ್ತ ಶೇ.40ರಷ್ಟನ್ನು ಪಡೆದು (ಆರ್‌.ಟಿ.ಜಿ.ಎಸ್‌/ ಎನ್.ಇ.ಎಫ್‌.ಟಿ ಮೂಲಕ), ವನಿತಾ ಸಂಗಾತಿ ಪಾಸುಗಳನ್ನು ಕೆಂಪೇಗೌಡ ಬಸ್‌ ನಿಲ್ದಾಣ ಪಾಸ್ ಕೌಂಟರ್‌ನಿಂದ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

Bengaluru: Free bus pass likely to bring relief for women garment employees

ವನಿತಾ ಸಂಗಾತಿ ಪಾಸ್​ಗಳನ್ನು ಪಡೆಯುವ ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರು ಬೆಂ.ಮ.ಸಾ.ಸಂಸ್ಥೆಯ ಮಾಸಿಕ ಪಾಸಿನ ಗುರುತಿನ ಚೀಟಿಯನ್ನು ಪಡೆಯಬೇಕು.

ಪಾಸುಗಳನ್ನು ಪಡೆದ ಮಹಿಳಾ ಕಾರ್ಮಿಕರು ಸಂಸ್ಥೆಯ ಎಲ್ಲಾ ಸಾಮಾನ್ಯ ಸೇವೆಗಳಲ್ಲಿ ಅನಿಯಮಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಗಾರ್ಮೆಂಟ್ಸ್‌ ಮಾಲೀಕರು ಜನವರಿ 2022ರ ತಿಂಗಳಿಗೆ ಅವಶ್ಯವಿರುವ ವನಿತಾ ಸಂಗಾತಿ ಪಾಸುಗಳ ಬೇಡಿಕೆಯನ್ನು ದಿನಾಂಕ 22.12.2021ರಿಂದ ಕಾರ್ಮಿಕ ಇಲಾಖೆಗೆ ([email protected] )ಸಲ್ಲಿಸಬಹುದಾಗಿರುತ್ತದೆ.

ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಲಾಗಿತ್ತು. ಸದ್ಯ ಬಸವರಾಜ ಬೊಮ್ಮಾಯಿ ಸರ್ಕಾರ ಇದನ್ನು ಕಾರ್ಯರೂಪಕ್ಕೆ ತರುತ್ತಿದೆ. ಲಕ್ಷಾಂತರ ಮಹಿಳಾ ಗಾರ್ಮೆಂಟ್ಸ್ ಕಾರ್ಮಿಕರಿಗೆ ಅನುಕೂಲವಾಗಲಿದೆ.

English summary
In a move that could benefit lakhs of women garment workers, BMTC along with the labour department has decided to issue monthly bus passes for them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X