ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಡ್ಜ್ ಮುಂದೆ ತಪ್ಪೊಪ್ಪಿಕೊಂಡ 'ಸೃಷ್ಟಿ' ಗುರುಮೂರ್ತಿ

By Mahesh
|
Google Oneindia Kannada News

ಬೆಂಗಳೂರು, ಅ.12: ಬಂಜೆತನ ನಿವಾರಿಸು­ವುದಾಗಿ ಸಾರ್ವಜ­­ನಿ­ಕರಿಂದ ಹಣ ಪಡೆದು ವಂಚಿಸಿದ ಮತ್ತು ಬಾಡಿಗೆ ತಾಯಿಯಿಂದ ಪಡೆದ ಮಗುವನ್ನು ಅದಲು ಬದಲು ಮಾಡಿರುವ ಆರೋಪ ಹೊತ್ತಿರುವ ಸ್ತ್ರೀರೋಗ ತಜ್ಞ ಕೆ.ಟಿ ಗುರುಮೂರ್ತಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ.7ನೇ ಎಸಿಎಂಎಂ ನ್ಯಾಯಾಲಯದ ಜಡ್ಜ್ ಅವರ ಮುಂದೆ ಆರೋಪಿ ಗುರುಮೂರ್ತಿಯನ್ನು ಭಾನುವಾರ ಮಗುವಿನ ಗೊಂದಲದ ಕಥೆ ವಿವರಿಸಿದ್ದಾನೆ. ಅವರನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಒಂದು ವಾರಗಳ ಪೊಲೀಸ್ ವಶಕ್ಕೆ ನೀಡಲಾಗಿದೆ.

ಬಸವಶ್ವೇರನಗರದ ಹಾವನೂರು ಸರ್ಕಲ್ ಬಳಿ ಇರುವ ಸೃಷ್ಟಿ ಗ್ಲೋಬಲ್‌ ಮೆಡಿಕೇರ್‌ ಅಂಡ್‌ ರಿಸರ್ಚ್ ಫೌಂಡೇ­ಶನ್‌ನ ಸಂಸ್ಥಾಪಕ ಕೆ.ಟಿ.­ಗುರುಮೂರ್ತಿ ಈ ಹಿಂದೆ ಕೂಡಾ ಇಂಥದ್ದೇ ವಂಚನೆ ಆರೋಪದ ಮೇಲೆ ನಂದಿನಿ ಲೇಔಟ್ ಪೊಲೀಸರಿಂದ ಬಂಧಿತನಾಗಿದ್ದ.ಈಗ ಡಾನ್ ಬಾಸ್ಕೋ ಹಾಗೂ ಸರಳಾ ದೇವಿ ದಂಪತಿಗೆ ಮೋಸ ಮಾಡಿದ ಆರೋಪದ ಮೇಲೆ ಬಂಧಿತನಾಗಿ ವಿಚಾರಣೆ ಎದುರಿಸುತ್ತಿದ್ದಾನೆ. [ಬಂಜೆತನ ನಿವಾರಕ 'ನಕಲಿ' ವೈದ್ಯ ಗುರುಮೂರ್ತಿ]

ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯಲು ಸಹಕಾರ ನೀಡುವುದಾಗಿ ಡಾನ್ ಬಾಸ್ಕೋ ಹಾಗೂ ಸರಳಾದೇವಿ ಅವರಿಗೆ ನಂಬಿಸಿದ್ದಾನೆ. ಇದಕ್ಕಾಗಿ ಮುಂಗಡ ಹಣ ರೂಪದಲ್ಲಿ 3.50 ಲಕ್ಷ ಪಡೆದಿದ್ದಾನೆ. ನಂತರ ಡಾನ್ ಬಾಸ್ಕೋ ಅವರ ವೀರ್ಯ ಸಂಗ್ರಹಿಸಲಾಗಿದೆ. ವೀರ್ಯ ಶಕ್ತಿಯುತವಾಗಿದ್ದು, ನಿಮ್ಮ ವೀರ್ಯವನ್ನು ಬಾಡಿಗೆ ತಾಯಿ ಗರ್ಭಕ್ಕೆ ಸೇರಿಸಲಾಗುವುದು ಈ ಬಗ್ಗೆ ನಿಮಗೆ ಕಾಲ ಕಾಲಕ್ಕೆ ಮಾಹಿತಿ ನೀಡುತ್ತೇವೆ ಎಂದು ಗುರುಮೂರ್ತಿ ಹೇಳಿದ್ದಾನೆ.

Bangalore embryologist K T Gurumurthy arrested

ಮದುವೆಯಾಗಿ ಎಂಟು ವರ್ಷ­ವಾದರೂ ಮಕ್ಕಳ ಭಾಗ್ಯ ಕಾಣದ ಮೂಡಲಪಾಳ್ಯ ಬಳಿಯ ಸಂಜೀವಿನಿ­ನಗರದ ಬಾಸ್ಕೊ ದಂಪತಿಗೆ ಗುರುಮೂರ್ತಿ ಮೇಲೆ ನಂಬಿಕೆ ಹುಟ್ಟಿದೆ. ಬಾಸ್ಕೋ ಅವರ ವೀರ್ಯ ಪಡೆದ ಏಳು ತಿಂಗಳ ನಂತರ ನಿಮಗೆ ಹೆಣ್ಣು ಮಗು ಹುಟ್ಟಿದೆ ಎಂದು ಸೃಷ್ಟಿ ಗ್ಲೋಬಲ್ ಆಸ್ಪತ್ರೆಯಿಂದ ಕರೆ ಬಂದಿದೆ. [ಗುರುಮೂರ್ತಿ ಹಳೆ ಕೇಸ್ ಡೀಟೈಲ್ಸ್]

ಏಳೇ ತಿಂಗಳಿಗೆ ಮಗು ಹೇಗೆ ಹುಟ್ಟಲು ಸಾಧ್ಯ ಅವಧಿಗೆ ಮುನ್ನ ಹುಟ್ಟಿದ ಮಗು ಏಕೆ ಎಂದು ಪ್ರಶ್ನಿಸಿದ ಬಾಸ್ಕೋ ಅವರನ್ನು ಗುರುಮೂರ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ವಿಧಿ ಇಲ್ಲದೆ ಮಗುವನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅದರೆ, ಕಳೆದ ನಾಲ್ಕು ವರ್ಷಗಳಲ್ಲಿ ಮಗುವಿನಲ್ಲಿ ಬೆಳವಣಿಗೆ ಕುಂಠಿತವಾಗುತ್ತಿರುವುದು ಬಾಸ್ಕೊ ದಂಪತಿಗೆ ಆತಂಕ ತಂದಿದೆ. ಮಗುವಿನ ಆರೋಗ್ಯದ ಏರುಪೇರು, ಬೆಳವಣಿಗೆ ಕುಂಠಿತಗೊಂಡಿರುವ ಬಗ್ಗೆ ಗುರುಮೂರ್ತಿಯನ್ನು ಪ್ರಶ್ನಿಸಿದ ಬಾಸ್ಕೋಗೆ ಬೆದರಿಕೆ ಒಡ್ಡಲಾಗಿದೆ. ಮಗುವಿನ ಬಗ್ಗೆ ಕೊರಗಿ ಕೊರಗಿ ಸರಳಾದೇವಿ ಅವರು ಇತ್ತೀಚೆಗೆ ನಿಧನರಾಗಿದ್ದಾರೆ.

ಬಾಸ್ಕೊ ಅವರಿಗೆ ಇದು ತನ್ನ ವೀರ್ಯದಿಂದ ಜನಿಸಿದ ಮಗು ಎಂಬುದರ ಬಗ್ಗೆ ಮೊದಲಿನಿಂದಲೂ ಅನುಮಾನ ಇದ್ದೇ ಇತ್ತು. ಮಗುವಿನ ನಿಜವಾದ ತಂದೆ ಯಾರು ಎಂದು ತಿಳಿಯಲು ನಿರ್ಧರಿಸುತ್ತಾರೆ. ಈ ಕಾರಣಕ್ಕಾಗಿ ಅವರು ಸೆಪ್ಟೆಂಬರ್‌ನಲ್ಲಿ ಹೈದರಾ­ಬಾದ್‌ನ ಪ್ರಯೋಗಾಲಯ­ವೊಂದರಲ್ಲಿ ತಮ್ಮ ಹಾಗೂ ಮಗುವಿನ ಡಿಎನ್‌ಎ ಪರೀಕ್ಷೆ ಮಾಡಿಸಿದ್ದರು. ಡಿಎನ್‌ಎ ಪರೀಕ್ಷೆಯಲ್ಲಿ ಬಾಸ್ಕೊ ಅವರು ಮಗುವಿನ ನಿಜವಾದ ತಂದೆಯಲ್ಲ ಎಂಬ ಸಂಗತಿ ಬಹಿರಂಗವಾಗಿತ್ತು

ಪೊಲೀಸರಿಗೆ ಇತ್ತೀಚೆಗೆ ದೂರು ನೀಡಿದ್ದರು. ಆ ದೂರಿನ ಅನ್ವಯ ಗುರುಮೂರ್ತಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಮಕ್ಕಳ ಅಪಹರಣ ಮತ್ತು ಮಾರಾಟ, ವಂಚನೆ, ಶಾಂತಿ ಕದಡುವ ಉದ್ದೇಶದಿಂದ ನಿಂದನೆ ಹಾಗೂ ಅಪರಾಧ ಸಂಚು ಆರೋಪ­ದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಟಿ.ಆರ್‌.ಸುರೇಶ್‌ ಹೇಳಿದ್ದಾರೆ.

English summary
KT Gurumurthy, 40, founder and managing director of Shrushti Global Medical Care and Charitable Trust, Havanoor circle, Basaveshwaranagar arrested by CCB police on Saturday and produced before 7th ACMM Judge today. Gurumurthy is accused of mis matching the surrogate baby one belonging to Don Bosco.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X