ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಸಿಬಿ ಕಸ್ಟಡಿಯಲ್ಲಿರುವ ಯುವರಾಜ ಆಲಿಯಾಸ್ ಸ್ವಾಮಿ 'ಮುಂಡಾಯಿಸಿದ' ಕಥೆ ಬಗೆದಷ್ಟು

|
Google Oneindia Kannada News

ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರ ಕಸ್ಟಡಿಯಲ್ಲಿರುವ ಯುವರಾಜ ಆಲಿಯಾಸ್ ಸ್ವಾಮಿಯ ಮಹಾವಂಚನೆ ಪ್ರಕರಣ ಬಗೆದಷ್ಟು ಹೊರಬರುತ್ತಲೇ ಇದೆ. ದೊಡ್ಡವರ ಹೆಸರು ಹೇಳಿಕೊಂಡು ಈತನ ಮಾತಿಗೆ ಮರುಳಾಗಿ ಹಲವರು ಕೋಟ್ಯಾಂತರ ರೂಪಾಯಿ ಈತನಿಗೆ ಸುರಿದಿದ್ದರು.

ಸ್ಟಾರ್ ಹೊಟೇಲ್ ನಲ್ಲಿ ಕೂತು ಡೀಲ್ ಮಾಡುತ್ತಿದ್ದ ಯುವರಾಜ ಸ್ವಾಮಿ, ರಾಜಕಾರಣಿಗಳನ್ನೂ ಯಾಮಾರಿಸಿದ್ದು ಗೊತ್ತಿರುವ ವಿಚಾರ. ರಾಜ್ಯಸಭಾ ಸದಸ್ಯರೊಬ್ಬರಿಗೆ, ಮೂವರು ಸಚಿವರು, ಸಚಿವರ ಆಪ್ತರನ್ನೂ ಈತ ಯಾಮಾರಿಸಿದ್ದ ಎಂದರೆ ಈತ ಎಂತಹ ಖತರ್ನಾಕ್ ಇರಬಹುದು ಎಂದು ಅರ್ಥ ಮಾಡಿಕೊಳ್ಳಬಹುದು.

ಅಮಿತ್ ಶಾ ಪೋಟೋ ತೋರಿಸಿ ಕೋಟಿ ಗಳಿಸಿದ್ದ ಅಮಿತ್ ಶಾ ಪೋಟೋ ತೋರಿಸಿ ಕೋಟಿ ಗಳಿಸಿದ್ದ "ಕಿಲಾಡಿ ರಾಜ" ಸೆರೆ

ಸಿಸಿಬಿ ವಿಚಾರಣೆಯ ವೇಳೆ ಎಲ್ಲಾ ವಿಚಾರಗಳನ್ನು ಬಾಯಿಬಿಡುತ್ತಿರುವ ಯುವರಾಜ ಸ್ವಾಮಿ, ನಿಮ್ಮ ಭವಿಷ್ಯವನ್ನು ನೋಡಿ ಹೇಳಲೇ ಎಂದು ವಿಚಾರಣೆ ನಡೆಸುತ್ತಿದ್ದ ಪೊಲೀಸರನ್ನೇ ಕೇಳಿದ್ದಾನೆಂದು ವರದಿಯಾಗಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಮಾಡಿಕೊಂಡಿರುವ ಈತ, ಯಾವುದೇ ಸಂಕೋಚವಿಲ್ಲದೇ ಪೊಲೀಸರಿಗೆ ಉತ್ತರಿಸುತ್ತಿದ್ದಾನೆ.

ಅಮಿತ್ ಶಾ, ಜೆ.ಪಿ.ನಡ್ಡಾ, ಯಡಿಯೂರಪ್ಪ ಸೇರಿದಂತೆ ದೊಡ್ಡದೊಡ್ಡವರ ಪರಿಚಯವಿದೆ, ನೇರ ಸಂಪರ್ಕವಿದೆ ಎಂದು ಬಣ್ಣದ ಮಾತುಗಳನ್ನು ಆಡುತ್ತಿದ್ದ ಯುವರಾಜ ಸ್ವಾಮಿ, ಬೆಂಗಳೂರು ಸೇರಿದಂತೆ ಹಲವು ಕಡೆ ಆಸ್ತಿಯನ್ನು ಹೊಂದಿದ್ದಾನೆ. ಈತನ ವಂಚನೆಯ ಪಟ್ಟಿಗೆ ಮತ್ತೊಂದು ಕೇಸ್ ಸೇರ್ಪಡೆಯಾಗಿದೆ.

ಸ್ಟಾರ್ ಹೊಟೇಲ್ ನಲ್ಲೇ ಎಲ್ಲಾ ಡೀಲ್ ಗಳನ್ನು ಮಾಡುತ್ತಿದ್ದ ಯುವರಾಜ ಸ್ವಾಮಿ

ಸ್ಟಾರ್ ಹೊಟೇಲ್ ನಲ್ಲೇ ಎಲ್ಲಾ ಡೀಲ್ ಗಳನ್ನು ಮಾಡುತ್ತಿದ್ದ ಯುವರಾಜ ಸ್ವಾಮಿ

ಸ್ಟಾರ್ ಹೊಟೇಲ್ ನಲ್ಲೇ ಎಲ್ಲಾ ಡೀಲ್ ಗಳನ್ನು ಮಾಡುತ್ತಿದ್ದ ಯುವರಾಜ ಸ್ವಾಮಿ, ಶ್ರೀಮಂತರು ಮತ್ತು ರಾಜಕಾರಣಿಗಳನ್ನೇ ಟಾರ್ಗೆಟ್ ಮಾಡಿದ್ದು ವಿಚಾರಣೆಯ ವೇಳೆ ಬಹಿರಂಗಗೊಂಡಿದೆ. ವಂಚನೆಯಿಂದ ಸಂಪಾದಿಸಿರುವ ಎಲ್ಲಾ ಆಸ್ತಿಗಳನ್ನು ತನ್ನೆಲ್ಲಾ ಮಕ್ಕಳ ಹೆಸರಿನಲ್ಲಿ ಬರೆದಿದ್ದು, ಅದರೆ ತೆರಿಗೆಯನ್ನು ಮಾತ್ರ ನಾನು ಕಟ್ಟುತ್ತಿದ್ದೇನೆಂದು ಹೇಳಿದ್ದಾನೆಂದು ವರದಿಯಾಗಿದೆ.

ಸಿಸಿಬಿ ಕಸ್ಟಡಿ

ಸಿಸಿಬಿ ಕಸ್ಟಡಿ

ಯುವರಾಜ ಸ್ವಾಮಿ ಸಿಸಿಬಿ ಕಸ್ಟಡಿಯಲ್ಲಿದ್ದಾನೆ ಎನ್ನುವುದು ಗೊತ್ತಾದ ನಂತರ ಈಗ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರು ಮೂಲದ ರಿಯಾಲ್ಟಿ ಉದ್ಯಮಿಯೊಬ್ಬರು ಈತನ ವಿರುದ್ದ ದೂರು ದಾಖಲಿಸಿದ್ದಾರೆ. ಡಾ. ಗುರುರಾಜ್ ರವಿ ಎನ್ನುವವರು ಆರೂವರೆ ಕೋಟಿ ರೂಪಾಯಿಯನ್ನು ಯುವರಾಜ ಸ್ವಾಮಿಗೆ ನೀಡಿದ್ದೇನೆಂದು ದೂರು ದಾಖಲಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣದ ಬಳಿ ಜಮೀನು ಇದ್ದು, ನಾಲ್ವರು ಸಹೋದರರ ವಿವಾದದ ಕಾರಣ ಮಾರಾಟ ಮಾಡಲು ಆಗುತ್ತಿಲ್ಲ. 150 ಕೋಟಿ ರೂಪಾಯಿ ಮೌಲ್ಯದ ಜಮೀನು ಇದಾಗಿದೆ. ವಿವಾದ ಬಗೆಹರಿಸಿ ಜಮೀನನ್ನು ನಿಮಗೆ ಕೊಡಿಸುತ್ತೇನೆ ಎಂದು ಯುವರಾಜ ಸ್ವಾಮಿ, ಹಂತಹಂತವಾಗಿ ಆರೂವರೆ ಕೋಟಿ ರೂಪಾಯಿಯನ್ನು ತನ್ನ ಅಕೌಂಟಿಗೆ ಹಾಕಿಸಿಕೊಂಡಿದ್ದ ಎಂದು ಗುರುರಾಜ್ ದೂರಿನಲ್ಲಿ ಹೇಳಿದ್ದಾರೆ.

ನಿಮ್ಮ ಅಧಿಕಾರಿಗಳೇ ನನ್ನನು ನಂಬಿದ್ದಾರಲ್ಲಾ

ನಿಮ್ಮ ಅಧಿಕಾರಿಗಳೇ ನನ್ನನು ನಂಬಿದ್ದಾರಲ್ಲಾ

ಐಷಾರಾಮಿ ಜೀವನ ನಡೆಸುತ್ತಿದ್ದ ಯುವರಾಜ, ಪ್ರತಿಷ್ಠಿತ ಹೋಟೆಲ್ ​ಗಳಲ್ಲಿ ಊಟ, ಕಾಫಿಗೆ ತೆರಳಿದಾಗ ಎರಡು ಸಾವಿರ ಬಿಲ್ ಆದರೆ ಐವತ್ತು ಸಾವಿರ ಹಣ ಕೊಡುತ್ತಿದ್ದ. ದುಡ್ಡು ಕೊಟ್ಟರೆ ಹೊಟೇಲ್ ನವರು ನನ್ನನ್ನು ಚೆನ್ನಾಗಿ ಉಪಚರಿಸುತ್ತಿದ್ದರು. ನಿಮ್ಮ ಅಧಿಕಾರಿಗಳೇ ನನ್ನನು ನಂಬಿದ್ದಾರಲ್ಲಾ ಎಂದು ಸಿಸಿಬಿ ಪೊಲೀಸರಿಗೆ ಉತ್ತರಿಸಿದ್ದಾನೆ.

English summary
Fraud Case CCB Police Interrogation Of Yuvaraja Swamy One More Complaint Registered,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X