ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಗರದಲ್ಲಿ 4 ಗಂಟೆ ಲೋಡ್ ಶೆಡ್ಡಿಂಗ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 09 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಲೋಡ್ ಶೆಡ್ಡಿಂಗ್ ಅವಧಿಯನ್ನು ಒಂದು ಗಂಟೆಗಳ ಕಾಲ ವಿಸ್ತರಣೆ ಮಾಡಲಾಗಿದೆ. ವಿದ್ಯುತ್ ಕೊರತೆಯ ಕಾರಣ ನಗರದಲ್ಲಿ ಬುಧವಾರದಿಂದ ಪ್ರತಿದಿನ 4 ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ ಅವರು ಈ ಕುರಿತ ಮಾಹಿತಿ ನೀಡಿದ್ದಾರೆ. 'ನಗರದಲ್ಲಿ ವಿದ್ಯುತ್ ಕೊರತೆ ತೀವ್ರವಾಗಿರುವುದರಿಂದ ದಿನಕ್ಕೆ 3 ಗಂಟೆ ಇದ್ದ ಲೋಡ್‌ ಶೆಡ್ಡಿಂಗ್ ಅವಧಿಯನ್ನು 4 ಗಂಟೆಗೆ ವಿಸ್ತರಿಸಲಾಗಿದೆ' ಎಂದು ಹೇಳಿದ್ದಾರೆ. ['ಕತ್ತಲೆ ಭಾಗ್ಯ' ಯೋಜನೆಯ ಪ್ರಯೋಜನಗಳು ಯಾವವು?!]

load shedding

ಎಲ್ಲಿ ಎಷ್ಟು ಲೋಡ್ ಶೆಡ್ಡಿಂಗ್ : ಬೆಂಗಳೂರು ನಗರದಲ್ಲಿ ವಸತಿ ಪ್ರದೇಶಗಳಲ್ಲಿ 4 ಗಂಟೆ, ವಾಣಿಜ್ಯ ಪ್ರದೇಶಗಳಲ್ಲಿ 3 ಗಂಟೆ ಮತ್ತು ಕೈಗಾರಿಕ ಪ್ರದೇಶಗಳಲ್ಲಿ 2 ಗಂಟೆ ಲೋಡ್ ಶೆಡ್ಡಿಂಗ್ ಇರಲಿದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ತಲಾ 1 ಗಂಟೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ['ಕತ್ತಲೆ ಭಾಗ್ಯ' ಕರೆಕ್ಟಾಗಿ ಎಷ್ಟು ಗಂಟೆ ಹೇಳಿ?]

ಬೆಂಗಳೂರು ನಗರಕ್ಕೆ ಪ್ರತಿದಿನ 4 ಸಾವಿರ ಮೆಗಾವಾಟ್ ವಿದ್ಯುತ್ ಅಗತ್ಯವಿದೆ. ಆದರೆ, ಈಗ 2800 ಮೆಗಾ ವಾಟ್ ಮಾತ್ರ ದೊರೆಯುತ್ತಿದೆ. ಪ್ರದೇಶಗಳ ವಿದ್ಯುತ್ ಬಳಕೆಗೆ ಅನುಗುಣವಾಗಿ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರುತ್ತದೆ. ಲೋಡ್ ಶೆಡ್ಡಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಿ ಬೆಸ್ಕಾಂ ವೆಬ್‌ಸೈಟ್‌ಗೆ ಭೇಟಿ ನೀಡಿ. [ಬೆಸ್ಕಾಂ ವೆಬ್ ಸೈಟ್]

English summary
Bangalore Electricity Supply Company (BESCOM)announced that, Four hours of load shedding in Bengaluru city from Wednesday, September 9, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X