ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಬುಕ್ಕಿಗಳು, 28 ಲಕ್ಷ ವಶ

|
Google Oneindia Kannada News

ಬೆಂಗಳೂರು, ಸೆ. 29 : ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಗೆ ದುಬೈನ ಬುಕ್ಕಿಗಳ ನಂಟಿರುವುದು ಬೆಳಕಿಗೆ ಬಂದಿದ್ದು, ನಾಲ್ವರಿಂದ 23 ಲಕ್ಷ ಹಣ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರ್‌.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿ ಅಪಾರ್ಟ್‌ಮೆಂಟ್‌ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಸೂರಜ್, ಬಾಲರಾಜ್, ಅನಿಲ್, ನಜೀರ್ ಅವರನ್ನು ಬಂಧಿಸಿದ್ದು, ಹಣ ಎಣಿಸುವ ಯಂತ್ರ, 28 ಲಕ್ಷ ನಗದು, ಮೊಬೈಲ್, ಲ್ಯಾಪ್‌ ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ. [ಚಾಂಪಿಯನ್ಸ್ ಲೀಗ್ ವೇಳಾಪಟ್ಟಿ]

ಬಂಧಿತ ಸೂರಜ್ ಬೆಟ್ಟಿಂಗ್ ನಡೆಸುವ ಪ್ರಮುಖ ವ್ಯಕ್ತಿಯಾಗಿದ್ದು ಆಂಧ್ರಪ್ರದೇಶ, ಮುಂಬೈಗೂ ಕರೆ ಮಾಡಿರುವ ಮಾಹಿತಿ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಬಂಧಿತರಿಗೆ ದುಬೈನ ಹಲವು ವ್ಯಕ್ತಿಗಳ ಸಂಪರ್ಕವಿರುವುದು ಅವರ ದೂರವಾಣಿ ಕರೆಗಳ ವಿವರಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

Betting

ಬೆಂಗಳೂರಿನಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯ ನಡೆಯುತ್ತಿರುವುದರಿಂದ ಬುಕ್ಕಿಗಳ ಬಂಧನ ತೀವ್ರ ಕುತೂಹಲ ಕೆರಳಿಸಿದೆ. ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಬುಕ್ಕಿಗಳ ಕೈವಾಡವಿದೆಯೇ ಎಂದು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಂದಹಾಗೆ ಸೆ. 29ರ ಸೋಮವಾರ ಕೆಕೆಆರ್‌-ಡಾಲ್ಫಿನ್ಸ್‌ ನಡುವೆ ಹೈದರಾಬಾದ್‌ನಲ್ಲಿ ಪಂದ್ಯ ನಡೆಯಲಿದೆ. ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ತಾಜಾ ಸ್ಕೋರ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

English summary
Central Crime Branch police Bangalore arrested four bookies from R.T.Nagar. Suraj, Balraj, Anil Kumar and Nazeer were picked up from an apartment in Sultanpalya. Police suspect Suraj headed the betting syndicate in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X