ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಬೈಕ್‌ ಕಳ್ಳತನ ಮಾಡುತ್ತಿದ್ದವರ ಸೆರೆ

|
Google Oneindia Kannada News

ಬೆಂಗಳೂರು, ಏ.9: ನಮ್ಮ ಮೆಟ್ರೋ ನಿಲ್ದಾಣದ ಪಾರ್ಕಿಂಗ್‌ಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಕಳ್ಳತನವಾಗುತ್ತಿದ್ದು, ಪ್ರಯಾಣಿಕರಿಗೆ ಹಾಗೂ ಮೆಟ್ರೋ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿತ್ತು.

ಬೈಕ್ ಕಳ್ಳರಿಂದ ಬೈಕ್‌ಗಳನ್ನು ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎನ್ನುವ ಆಲೋಚನೆಯಲ್ಲಿದ್ದರು. ಕೊನೆಗೂ ನಾಲ್ವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರು ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿದ ಬೈಕ್‌ಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಒಂದೊಮ್ಮೆ ಮೆಟ್ರೋ ಸ್ಮಾರ್ಟ್‌ಕಾರ್ಡ್ ವಾಪಸ್ ನೀಡಿದರೂ ಹಣ ಮಾತ್ರ ಸಿಗಲ್ಲ ಒಂದೊಮ್ಮೆ ಮೆಟ್ರೋ ಸ್ಮಾರ್ಟ್‌ಕಾರ್ಡ್ ವಾಪಸ್ ನೀಡಿದರೂ ಹಣ ಮಾತ್ರ ಸಿಗಲ್ಲ

ತುಮಕೂರಿನ ಉಪ್ಪಾರಹಳ್ಳಿ ನಿವಾಸಿ ದಿನೇಶ್, ತಾವರೆಕೆರೆ ಸೀಏಹಳ್ಳಿ ಗೇಟ್‌ನ ಮಹೇಶ್, ಹಾಸನ ಶಂಕರಮಠದ ನಿವಾಸಿ ಫೈಜ್ ಷರೀಫ್ ಹಾಗೂ ಬನ್ನೇರುಘಟ್ಟ ಸರ್ಕಲ್‌ ನಿವಾಸಿ ಪ್ರವೀಣ್ ಕುಮಾರ್ ಬಂಧಿತರು.

Four bike thieves arrested in Namma metro parking lot

ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಇರ್ಲೇಬೇಕು ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಇರ್ಲೇಬೇಕು

ಬಂಧಿತರಿಂದ 28 ಲಕ್ಷ ರೂ ಮೌಲ್ಯದ 55 ಬೈಕ್‌ ಮತ್ತು ಸ್ಕೂಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.ರಾಮನಗರದ ಚಿಕ್ಕಲೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದ ಆರೋಪಿಗಳು ಮೆಟ್ರೋ ನಿಲ್ದಾಣದಲ್ಲಿ ನಿಲ್ಲಿಸಿರುತ್ತಿದ್ದ ವಾಹನಗಳನ್ನು ಮಾತ್ರ ಕಳ್ಳತನ ಮಾಡುತ್ತಿದ್ದರು.

English summary
Police arrested thieves in Namma metro station, These people are accused related bike stolen at Metro station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X