ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಕ್ರಿಕೆಟರ್ ವಿಜಯ್ ಭಾರದ್ವಾಜ್ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆ

By Mahesh
|
Google Oneindia Kannada News

ಬೆಂಗಳೂರು, ಜೂ. 08: ಟೀಂ ಇಂಡಿಯಾದ ಮಾಜಿ ಟೆಸ್ಟ್ ಆಟಗಾರ ವಿಜಯ್ ಭಾರದ್ವಾಜ್ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಅವರ ಸಮ್ಮುಖದಲ್ಲಿ ವಿಜಯ್ ಅವರು ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡರು.

39 ವರ್ಷ ವಯಸ್ಸಿನ ಹಾಲಿ ಕಾಮೆಂಟೆಟರ್ ಹಾಗೂ ವಿಶ್ಲೇಷಕ ವಿಜಯ್ ಭಾರದ್ವಾಜ್ ಅವರು ಭಾನುವಾರ (ಜೂ.07) ಸದಸ್ಯತ್ವ ಪಡೆದ ನಂತರ ಮಾತನಾಡಿ, ನಾನು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿ, ಮೋದಿ ಅವರು ಕ್ರೀಡೆಗೆ ನೀಡುವ ಪ್ರೋತ್ಸಾಹ ಅನುಕರಣೀಯ ಎಂದರು. ['ಯುವ ಕ್ರಿಕೆಟರ್ಸ್ ಕೋಚ್, ಥ್ರಿಲ್ಲಿಂಗ್ ವಿಷಯ' : ದ್ರಾವಿಡ್]

ಟೀಂ ಇಂಡಿಯಾ ಪರ 3 ಟೆಸ್ಟ್ ಪಂದ್ಯ ಹಾಗೂ 10 ಏಕದಿನ ಪಂದ್ಯವನ್ನಾಡಿದ್ದ ವಿಜಯ್ ಭಾರದ್ವಾಜ್ ಅವರು ಜಿಂಬಾಬ್ವೆ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಅದರೆ, ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿಯಬೇಕಾಯಿತು. 2002ರಲ್ಲಿ ನಿವೃತ್ತಿ ಹೊಂದಿದರು. [ವಿಜಯ್ ಭಾರದ್ವಾಜ್ ವೃತ್ತಿ ಅಂಕಿ ಅಂಶ]

ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಏನು ನಿರ್ಧರಿಸಿಲ್ಲ. ಈಗಷ್ಟೇ ಸದಸ್ಯತ್ವ ಪಡೆದುಕೊಂಡಿದ್ದೇನೆ. ಪಕ್ಷದ ಹಿರಿಯರು ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ತಮ್ಮ ಹೊಸ ಇನ್ನಿಂಗ್ಸ್ ಬಗ್ಗೆ ಒನ್ ಇಂಡಿಯಾಕ್ಕೆ ತಿಳಿಸಿದರು.

Former Test cricketer Vijay Bharadwaj joins BJP
2002ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರಾದರೂ 2005ರ ತನಕ ಕರ್ನಾಟಕ ಪರ ರಣಜಿ ಆಡಿದರು. 95 ಪ್ರಥಮ ದರ್ಜೆ ಪಂದ್ಯಗಳಿಂದ 5,553 ರನ್ ಹಾಗೂ 14 ಶತಕಗಳನ್ನು ಕಲೆ ಹಾಕಿದ್ದಾರೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ಸ್ ನ ಆಡಳಿತ ಮಂಡಳಿಯಲ್ಲೂ ಸಕ್ರಿಯರಾಗಿದ್ದಾರೆ.

ಅಂಡರ್ 19 ಹಾಗೂ ಭಾರತ ಎ ತಂಡಕ್ಕೆ ರಾಹುಲ್ ದ್ರಾವಿಡ್ ಅವರ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿದ ಭಾರದ್ವಾಜ್, ದ್ರಾವಿಡ್ ಉತ್ತಮ ಆಟಗಾರ ಅಷ್ಟೇ ಅಲ್ಲ, ಉತ್ತಮ ಕೋಚ್ ಕೂಡಾ ಹೌದು. ಭಾರತಕ್ಕೆ ಭಾರತದವರೇ ಕೋಚ್ ಆಗಿದ್ದರೆ ಇನ್ನಷ್ಟು ಉತ್ತಮ ಫಲಿತಾಂಶಗಳನ್ನು ಕಾಣಬಹುದು ಎಂದರು. (ಒನ್ ಇಂಡಿಯಾ ಸುದ್ದಿ)

English summary
Former India Test batsman R Vijay Bharadwaj began a new innings as he joined the Bharatiya Janata Party (BJP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X