ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: 'ಜಾಹೀರಾತಿನಲ್ಲಿ ಬೇಕೆಂದೇ ನೆಹರೂ ಚಿತ್ರ ಕೈಬಿಟ್ಟಿದ್ದೇವೆ'

|
Google Oneindia Kannada News

ಬೆಂಗಳೂರು, ಆಗಸ್ಟ್ 14: ರಾಜ್ಯ ಸರಕಾರ ನೀಡಿರುವ ಜಾಹೀರಾತಿನಲ್ಲಿ ನೆಹರು ಅವರಿಗೆ ಅವಮಾನ ಮಾಡಲಾಗಿದೆ ಎಂದು ರಾಜ್ಯದಲ್ಲಿ ಆಕ್ರೋಶ ಹೆಚ್ಚಾಗುತ್ತಿರುವ ಸಮಯದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಬಿಜೆಪಿ ಸರಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

"ಸರ್ಕಾರದ ಜಾಹೀರಾತಿನಲ್ಲಿ ಉದ್ದೇಶಪೂರ್ವಕವಾಗಿಯೇ ನೆಹರೂ ಭಾವಚಿತ್ರ ಕೈಬಿಟ್ಟಿದ್ದೇವೆ. ನೆಹರೂ ದೇಶ ವಿಭಜನೆಗೆ ಕಾರಣರಾದವರು, ಮಹಾತ್ಮ ಗಾಂಧಿಯವರ ಮಾತನ್ನೇ ನೆಹರು ಕೇಳಲಿಲ್ಲ. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ವಿಸರ್ಜಿಸಿ ಅಂತ ಗಾಂಧೀಜಿ ಹೇಳಿದ್ದರು. ಆದರೆ, ನೆಹರು ಕಾಂಗ್ರೆಸ್ ವಿಸರ್ಜಿಸಲಿಲ್ಲ. ಹಾಗಾಗಿ ನಾವು ಜಾಹೀರಾತಿನಲ್ಲಿ ನೆಹರೂ ಭಾವಚಿತ್ರ ಕೈಬಿಟ್ಟಿದ್ದೇವೆ " ಎಂದು ರಾಜ್ಯ ಸರ್ಕಾರದ ನಡೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸಮರ್ಥಿಸಿಕೊಂಡರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಉದ್ದೇಶಪೂರ್ವಕವಾಗಿ ನೆಹರು ಫೋಟೋವನ್ನು ಪತ್ರಿಕೆಯಲ್ಲಿ ನೀಡಿದ ಸರ್ಕಾರಿ ಜಾಹೀರಾತಿನಲ್ಲಿ ಕೈ ಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೌದು ನಾವು ಉದ್ದೇಶಪೂರ್ವಕವಾಗಿಯೇ ನೆಹರೂ ಭಾವಚಿತ್ರ ಕೈ ಬಿಟ್ಟಿದ್ದೇವೆ" ಎಂದರು.

 Former PM JawaharLal Nehru AD controversy: We deliberately dropped Nehrus image in the AD says BJP

"ದೇಶ ವಿಭಜನೆಯ ಕರಾಳ ನೆನಪು ಅಂತ ಆಚರಣೆ ಮಾಡುತ್ತಿದ್ದೇವೆ. ಗಾಂಧೀಜಿಯವರ ಮಾತನ್ನು ನೆಹರು ಕೇಳಲಿಲ್ಲ, ಮಹಾತ್ಮ ಗಾಂಧೀಜಿಯವರ ಮಾತನ್ನು ಕೇಳದೆ, ದೇಶ ವಿಭಜನೆಗೆ ಕಾರಣವಾಗಿರುವ ನೆಹರೂರವರ ಫೋಟೋವನ್ನು ನಾವು ಹಾಕುವುದಿಲ್ಲ" ಎಂದು ಬಿಜೆಪಿ ಸರಕಾರದ ಕ್ರಮಕ್ಕೆ ಸಮರ್ಥನೆ ನೀಡಿದರು.

English summary
former PM JawaharLal Nehru ad controversy: We deliberately dropped Nehru's image in the ad BJP State General Secretary N. Ravikumar. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X