• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎರಡು ಗುರಿಗಳನ್ನು ಬೆನ್ನು ಹತ್ತಿದ ದಿವ್ಯ ಸ್ಪಂದನ

By Mahesh
|

ಮಂಡ್ಯ, ಜು.4: ಮಂಡ್ಯದ ಮಾಜಿ ಸಂಸದೆ, ನಟಿ ರಮ್ಯಾ ಅವರು ಮತ್ತೆ ಗ್ರಾಮಗಳತ್ತ ಮುಖ ಮಾಡಿದ್ದಾರೆ. ಕೈಲಿರುವ ಸಿನಿಮಾಗಳನ್ನು ಮುಗಿಸುವ ಜವಾಬ್ದಾರಿ ಜತೆಗೆ ಎರಡು ಪ್ರಮುಖ ಗುರಿಯನ್ನು ಹೊತ್ತಿದ್ದೇನೆ ಅದನ್ನು ಸಾಕಾರಗೊಳಿಸುವುದೇ ನನ್ನ ಪ್ರಮುಖ ಆದ್ಯತೆ ಎಂದು ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

ತಮ್ಮ ಸಾಕು ತಂದೆ ಆರ್ ಟಿ ನಾರಾಯಣ್ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಆರ್ ಟಿ ನಾರಾಯಣ್ ಫೌಂಡೇಶನ್ ಮೂಲಕ ಗ್ರಾಮೀಣ ಭಾಗದ ಮಹಿಳೆಯರು ಗೌರವಯುತವಾಗಿ ಬಾಳ್ವೆ ಮಾಡಲು ಬೇಕಾದ ಸಕಲ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ.[1 ಲಕ್ಷ ಶೌಚಾಲಯ ನಿರ್ಮಾಣ : ರೋಹಿಣಿ]

ಇತ್ತೀಚೆಗಷ್ಟೇ 'ಸ್ಪಂದನ' ಎಂಬ ಹೆಸರಿನಲ್ಲಿ ವಸ್ತ್ರೋದ್ಯಮಕ್ಕೆ ಕಾಲಿಡುತ್ತಿರುವುದಾಗಿ ರಮ್ಯಾ ಹೇಳಿಕೊಂಡಿದ್ದರು. ಸ್ಪಂದನ ಬ್ರ್ಯಾಂಡ್ ನ ಪ್ರತಿ ಬಟ್ಟೆ ಖರೀದಿಯ ಹಣವೆಲ್ಲ ಆರ್ ಟಿ ಫೌಂಡೇಷನ್ ತಲುಪಲಿದೆಯಂತೆ. ಸ್ಪಂದನ್ ಬ್ರ್ಯಾಂಡ್ ಲೋಕಾರ್ಪಣೆ ಜುಲೈ ತಿಂಗಳಿನಲ್ಲೇ ಆಗಲಿದೆ. ಈ ಬಗ್ಗೆ ನಿಮಗೆ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿ ಅಪ್ದೇಟ್ ಮಾಡಿದ್ದಾರೆ. ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರ ಮುಂದಿನ ಎರಡು ಗುರಿಗಳತ್ತ ಒಂದು ನೋಟ ಇಲ್ಲಿದೆ...

ರಮ್ಯಾ ಉದ್ಯಮಿಯಾಗುತ್ತಿದ್ದಾರೆಯೇ?

ರಮ್ಯಾ ಉದ್ಯಮಿಯಾಗುತ್ತಿದ್ದಾರೆಯೇ?

ರಮ್ಯಾ ಅವರು ಆರಂಭಿಸುತ್ತಿರುವುದು ಎನ್ ಜಿಒನಾ? ಅಥವಾ ಪೂರ್ಣ ಪ್ರಮಾಣದ ಉದ್ದಿಮೆಯೇ? ಎಂಬ ಪ್ರಶ್ನೆಗಳು ಎದ್ದಿವೆ. ಸಿನಿಮಾ ರಂಗ, ರಾಜಕೀಯ ನಂತರ ರಮ್ಯಾ ಅವರು ಪೂರ್ಣಪ್ರಮಾಣದ ಉದ್ಯಮಿಯಾಗಲು ಹೊರಟ್ಟಿದ್ದಾರೆಯೇ? ಎಂಬ ಪ್ರಶ್ನೆಗಳಿವೆ.

ರಮ್ಯಾ ಅವರು ಈ ಉದ್ಯಮಕ್ಕೆ ಇಳಿಯಲು ಕೂಡಾ ಸಾಕು ತಂದೆ ನಾರಾಯಣ್ ಅವರೇ ಸ್ಪೂರ್ತಿ. ಮೈಸೂರಿನವರಾದ ಅವರು ಕಣ್ವ ಹೆಸರಿನ ಕೈಗಾರಿಕೆಗಳ ಒಡೆಯ. ರಫ್ತು ಉದ್ಯಮಿ. ರಾಜ್ಯಸಭಾ ಸದಸ್ಯ ಎಸ್.ಎಂ. ಕೃಷ್ಣ ಅವರ ಆಪ್ತರಾಗಿದ್ದರು.

ರಮ್ಯಾ ಅವರ ಸ್ಪಂದನ ಬ್ರ್ಯಾಂಡ್ ಬಟ್ಟೆ

ರಮ್ಯಾ ಅವರ ಸ್ಪಂದನ ಬ್ರ್ಯಾಂಡ್ ಬಟ್ಟೆ

ನಾರಾಯಣ್ ಅವರು ಬೆಂಗಳೂರಿನ ತಾಜ್‌ವೆಸ್ಟ್ ಎಂಡ್ ಹೋಟೆಲ್‌ನ 1509ನೇ ನಂಬರಿನ ಸೂಟ್‌ನಲ್ಲಿ ಉಳಿಯುತ್ತಿದ್ದರು. 20 ವರ್ಷಗಳ ಹಿಂದೆ 122 ನೇ ನಂಬರಿನ ಸೂಟ್‌ನಲ್ಲಿ ಇದ್ದರು. ನಂತರ ಎರಡು ಕೊಠಡಿಗಳ ಸೂಟ್‌ಗೆ (1509) ಸ್ಥಳಾಂತರ ಆಗಿದ್ದರು. ಅವರು ಊರಲ್ಲಿ ಇರಲಿ- ಬಿಡಲಿ ಅವರ ಹೆಸರಿನಲ್ಲೇ ಕೊಠಡಿ ಇರುತ್ತಿತ್ತು. ಮಂಡ್ಯದಲ್ಲಿ ಸ್ಪರ್ಧಿಸುವುದಕ್ಕೂ ಮುನ್ನ ರಮ್ಯಾ ಅವರ ಅಧಿಕೃತ ನಿವಾಸದ ಇದೇ ಆಗಿತ್ತು. ಅಲ್ಲೆ ರಮ್ಯಾಗೆ ರಾಜಕೀಯ ಹಾಗೂ ಔದ್ಯೋಗಿಕ ರಂಗದ ಪರಿಚಯ ಸಿಕ್ಕಿತು ಎಂಬ ಮಾತಿದೆ.

ರಮ್ಯಾ ಅವರ ಕನಸಿನ ಶೌಚಾಲಯ

ರಮ್ಯಾ ಅವರ ಕನಸಿನ ಶೌಚಾಲಯ

ರಮ್ಯಾ ಅವರ ಕನಸಿನ ಶೌಚಾಲಯ ಮಾದರಿ ಚಿತ್ರ ಇಲ್ಲಿದೆ. ಆರ್ಥಿಕವಾಗಿ ಹಿಂದುಳಿದ ಗ್ರಾಮಾಂತರ ಮಹಿಳೆಯರಿಗೆ ಸ್ವಚ್ಛತೆಗೆ ಅರಿವು ಮೂಡಿಸಲು ರಮ್ಯಾ ಪಣ ತೊಟ್ಟಿದ್ದಾರೆ. ಒಳ ಉಡುಪುಗಳು, ತಿಂಗಳ ರಜೆ ಸಂದರ್ಭದಲ್ಲಿ ಬಳಸುವ ಪ್ಯಾಡ್ ಗಳ ಬಗ್ಗೆ ಅರಿವು ಮೂಡಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಚಿಸುವುದು ನನ್ನ ಆದ್ಯತೆ ಎಂದು ರಮ್ಯಾ ಹೇಳಿದ್ದಾರೆ.

ಈ ಬಗ್ಗೆ ಹೆಚ್ಚಿನ ಅರಿವು ಮೂಡಬೇಕು

ಈ ಬಗ್ಗೆ ಹೆಚ್ಚಿನ ಅರಿವು ಮೂಡಬೇಕು

ಸರ್ಕಾರ ಸ್ಯಾನಿಟರಿ ಪ್ಯಾಡ್ ಗಳನ್ನು ನೀಡಬೇಕು. ಈ ಬಗ್ಗೆ ಹೆಚ್ಚಿನ ಅರಿವು ಮೂಡಬೇಕು. ನಮ್ಮ ಫೌಂಡೇಷನ್ ಮೂಲಕ ಒಮ್ಮೆ ಬಳಸಿ ಎಸೆಯಲ್ಪಡುವ ಸ್ಯಾನಿಟರಿ ಪ್ಯಾಡ್, ಒಳ ಉಡುಪು ಹಾಗೂ ಸಾವಯಮ ಹತ್ತಿ ಬಟ್ಟೆ ಚೀಲಗಳನ್ನು ವಿತರಿಸಲಾಗುವುದು ಇದೆಲ್ಲ ನೇರವಾಗಿ ಅವರ ಕೈ ತಲುಪುವ ವ್ಯವಸ್ಥೆ ಕಲ್ಪಿಸಲಾಗುವುದು. ಅಂಗಡಿಗೆ ಹೋಗಿ ಕೇಳಿ ಪಡೆಯಲು ನಮ್ಮ ಹಳ್ಳಿ ಹುಡುಗಿಯರು ಹಿಂದೇಟು ಹಾಕುತ್ತಾರೆ.

ಶೌಚಾಲಯದ ಮಹತ್ವದ ಬಗ್ಗೆ ರಮ್ಯಾ

ಶೌಚಾಲಯದ ಮಹತ್ವದ ಬಗ್ಗೆ ರಮ್ಯಾ

ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ, ಸ್ನಾನಗೃಹಗಳ ಸ್ಥಾಪನೆಗೆ ಸರ್ಕಾರದ ನೆರವು ಕೂಡಾ ಸಿಗುತ್ತದೆ. ಆದರೆ, ಈ ಬಗ್ಗೆ ಜನರಿಗೆ ಅರಿವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಸ್ನಾನ ಮಾಡುವ ಅನಿವಾರ್ಯತೆಗೆ ಮಹಿಳೆಯರು ಒಳಗಾಗುವುದು ಬೇಡ.

ಸುರೇಶ್ ಚಂದ್ರ ಎಂಬ ನನ್ನ ಗೆಳೆಯ ಮಾಡಿರುವ ಶೌಚಾಲಯಗಳ ಮಾದರಿ ಇಲ್ಲಿದೆ. ಶಿಪ್ಪಿಂಗ್ ಕಂಟೇನರ್ ಗಳನ್ನು ಬಳಸಿಕೊಂಡು ಈ ವಿನ್ಯಾಸ ರಚಿಸಲಾಗಿದ್ದು, ಸೌರಶಕ್ತಿ ಬಳಸಿಕೊಂಡು ವಿದ್ಯುತ್ ಪೂರೈಕೆ ನೀಡಲಾಗುತ್ತದೆ. ಇವೆರಡು ಗುರಿ ಮುಟ್ಟಲು ನಿಮ್ಮ ಸಹಕಾರ ಅಗತ್ಯ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
I've two goals I want to achieve through the RT Narayan foundation in the coming years. 1. Provide sanitary hygiene products for poor women and young girls in villages.2. Do away with open defecation. Provide toilet facilities & bath facilities. Most women take a bath in their saree for lack of privacy tweeted by former MP of Mandya Ramya alias Divya Spandana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more