ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಎಸ್ ಅಧಿಕಾರಿ ಹರ್ಷ ಗುಪ್ತಾ ವರದಿಯಲ್ಲಿ ಎನಿದೆ?

|
Google Oneindia Kannada News

ಬೆಂಗಳೂರು, ನವೆಂಬರ್ 23: ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ ರೋಷನ್ ಬೇಗ್ ಬಂಧನಕ್ಕೆ ಒಳಗಾಗುವ ಮುನ್ನ ರೋಷನ್ ಬೇಗ್ ಹಾಗೂ ಐಎಂಎ ಸಂಸ್ಥೆ ನಡುವೆ ಹೊಂದಿರುವ ಬಾಂಧವ್ಯದ ಕುರಿತು ಹಿರಿಯ ಐಎಎಸ್‌ ಅಧಿಕಾರಿ ಕೊಟ್ಟಿರುವ ವರದಿಯಲ್ಲಿ ಸ್ಫೋಟಕ ಅಂಶಗಳು ಉಲ್ಲೇಖವಾಗಿವೆ.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನವೆಂಬರ್ 19 ರಂದು ವರದಿ ನೀಡಿದ್ದಾರೆ. ಕಂಧಾಯ ಇಲಾಖೆಯ ಮನವಿ ಮೇರೆಗೆ ತನಿಖೆ ನಡೆಸಿ ಹರ್ಷಗುಪ್ತಾ ನೀಡಿರುವ ವರದಿಯಲ್ಲಿ ರೋಷನ್ ಬೇಗ್ ಮತ್ತು ಐಎಂಎ ಸಂಸ್ಥೆ ನಡುವಿನ ಸಂಬಂಧವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಾಕತಳೀಯ ಎಂಬಂತೆ ವರದಿ ನೀಡಿದ ಎರಡೇ ದಿನದಲ್ಲಿ ರೋಷನ್ ಬೇಗ್ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದು, ಐಎಂಎ ಪ್ರಕರಣ ತನಿಖೆಯ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥರಾಗಿರುವ ಹರ್ಷ ಗುಪ್ತ ನೀಡಿರುವ ವರದಿಯ ವಿವರ ಇಲ್ಲಿದೆ.

ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಸಿಬಿಐ ದಾಳಿಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಸಿಬಿಐ ದಾಳಿ

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹಿರಿಯ ಐಎಎಸ್‌ ಅಧಿಕಾರಿ ಹರ್ಷ ಗುಪ್ತಾ ಅವರು ನೀಡಿರುವ ವರದಿಯಲ್ಲಿ " ಮಾಜಿ ಶಾಸಕ ಆರ್‌. ರೋಷನ್ ಬೇಗ್ ಅವರು ಐಎಂಎ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಪ್ರಮೋಟ್ ಮಾಡಿ ಅದರಿಂದ ಲಾಭ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಮಾಡುವುದು ಸೂಕ್ತ" ಎಂದು ತಿಳಿಸಿದ್ದಾರೆ. ಪ್ರಕರಣ ಕುರಿತು ತನಿಖೆ ನಡೆಸಿದ್ದು, " ಐಎಂಎ ಸಂಸ್ಥೆಯ ಭಾಗವಾಗಿ ಮುಲ್ಬರಿ ಗ್ರೀನ್‌ ಸೂಪರ್‌ ಮಾರ್ಕೆಟ್ ಸ್ಥಾಪಿಸಿದ್ದು, ಇನ್‌ಫೆಂಟ್ರಿ ರಸ್ತೆಯಲ್ಲಿರುವ ಈ ಕಚೇರಿಯನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Former MLA Roshan Baig and IMA Scam: What is the report of IAS officer Harsh Gupta?

ಈ ಕಟ್ಟಡವನ್ನು ಐಎಂಎ ಸಂಸ್ಥೆ ಲೀಸ್ ಗೆ ಪಡೆದಿದ್ದು, ಐಎಂಎ ವಂಚನೆ ಪ್ರಕರಣ ಭಾಗವಾಗಿ ಕಚೇರಿಯನ್ನು ಜಪ್ತಿ ಮಾಡಲಾಗಿದೆ. ಈ ಕಟ್ಟಡವನ್ನು ಲೀಸ್ ಗೆ ನೀಡಿರುವ ಬಗ್ಗೆ ಕಟ್ಟಡ ಮಾಲೀಕರು ಹೇಳಿಕೆ ದಾಖಲಿಸಿದ್ದು, ಅವರ ಪ್ರಕಾರ ಕಟ್ಟಡವನ್ನ ಮಾಜಿ ಸಚಿವ ಆರ್‌. ರೋಷನ್ ಬೇಗ್ ಅವರಿಗೆ ಸೇರಿದ ದನೀಶ್ ಪಬ್ಲಿಕೇಷನ್ ಪ್ರೆ. ಲಿ.ಗೆ ಲೀಸ್ ನೀಡಿದ್ದು, ಭದ್ರತೆ ಠೇವಣಿಯಾಗಿ ಎರಡೂವರೆ ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾಗಿ ಹೇಳಿದ್ದಾರೆ. ಲೀಸ್ ಅವಧಿ ಮುಗಿದರೂ ಪರಸ್ಪರ ಮಾತುಕತೆಯ ಮೂಲಕ ಲೀಸ್ ಕರಾರು ಮುಂದುವರೆದಿತ್ತು ಎಂದು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಒದಗಿಸುವಂತೆ ರೋಷನ್ ಬೇಗ್ ಅವರಿಗೆ ನೋಟಿಸ್ ನೀಡಲಾಗಿದೆ.

ಬಿ. ಎಂ. ವಿಜಯ ಶಂಕರ್ ಕೊರಳಿಗೆ ಐಎಂಎ ಸುತ್ತಿಕೊಂಡಿದ್ದು ಹೇಗೆ?ಬಿ. ಎಂ. ವಿಜಯ ಶಂಕರ್ ಕೊರಳಿಗೆ ಐಎಂಎ ಸುತ್ತಿಕೊಂಡಿದ್ದು ಹೇಗೆ?

ಇದಕ್ಕೆ ಪ್ರತಿಕ್ರಿಯೆ ನೀಡುವಾಗ ರೋಷನ್ ಬೇಗ್ , ನನ್ನ ಬಳಿ ಯಾವುದೇ ದಾಖಲೆಗಳು ಇಲ್ಲ. ನಾನು ಲೀಸ್ ಪಡೆದ ಕಟ್ಟಡವನ್ನು ಐಎಂಎ ಸಂಸ್ಥೆಗೆ ಲೀಸ್ ಕೊಟ್ಟಿದ್ದೂ ಇಲ್ಲ ಎಂದು ಹಾರಿಕೆ ಉತ್ತರ ನೀಡಿದ್ದರು.

Former MLA Roshan Baig and IMA Scam: What is the report of IAS officer Harsh Gupta?

ಇಷ್ಟಕ್ಕೆ ಬಿಡದ ತನಿಖಾಧಿಕಾರಿಗಳು ಮತ್ತೊಮ್ಮೆ ನೋಟಿಸ್ ನೀಡಿದಾಗ ರೋಷನ್ ಬೇಗ್ ಐಎಂಎ ಸಂಸ್ಥೆಯೊಂದಿಗಿನ ನಂಟಸ್ಥನ ಬಗ್ಗೆ ಬಾಯಿಬಿಟ್ಟಿದ್ದಾರೆ. ನನ್ನ ಮಾಲಿಕತ್ವಕ್ಕೆ ಸೇರಿ ದನೀಶ್ ಪಬ್ಲಿಕೇಷನ್ ಪ್ರೆ. ಲಿ.ನ್ನು ಐಎಂಎ ಸಂಸ್ಥೆಗೆ 2017 ರಲ್ಲಿ ಮಾರಾಟ ಮಾಡಿದ್ದೇನೆ. ಇದಾದ ಬಳಿಕ ಐಎಂಎ ಪಬ್ಲಿಕೇಷನ್ ಪ್ರೆ. ಲಿ ಶುರುವಾಗಿತ್ತು. ಕೆಲ ಕಾಲದ ವರೆಗೂ ನನ್ನ ಕಚೇರಿಯೂ ಅಲ್ಲೇ ಮುಂದುವರೆದಿತ್ತು. ಬಿಲ್ಡಿಂಗ್ ಮಾಲೀಕರಿಗೆ ಎರಡೂ ವರೆ ಲಕ್ಷ ಕ್ಕೆ ನೀಡಿ ನೇರವಾಗಿ ಲೀಸ್ ಗೆ ಪಡೆದುಕೊಳ್ಳಲು ಮಹಮದ್ ಮನ್ಸೂರ್ ಖಾನ್ ಗೆ ತಿಳಿಸಿದ್ದೆ.ಆದರೆ ಈವರೆಗೂ ಮನ್ಸೂರ್ ಖಾನ್ ಅದನ್ನು ನೆರವೇರಿಸಲಿಲ್ಲ. ಬಳಿಕ ಅಲ್ಲಿಯೇ ಮಲ್ಬರಿ ಗ್ರೀನ್ ಸೂಪರ್ ಮಾರ್ಕೆಟ್ ಕಚೇರಿಯನ್ನು ಸ್ಥಾಪಿಸಿದ್ದರು. ಇಷ್ಟು ಹೊರತು ಪಡಿಸಿ ಐಎಂಎ ನಲ್ಲಿ ನನ್ನ ಪಾತ್ರ ಇಲ್ಲ ಎಂದು ರೋಷನ್ ಬೇಗ್ ಕೈತೊಳೆದುಕೊಂಡಿದ್ದರು. ಆದರೆ ತನಿಖೆಯ ದಾಖಲೆಗಳು ಬೇರೆಯದ್ದೇ ಸತ್ಯವನ್ನು ಹೊರ ಹಾಕಿದ್ದವು.

ಇದಕ್ಕೆ ಮಹತ್ವದ ಸಾಕ್ಷಾಧಾರಗಳನ್ನು ಕಲೆಹಾಕಿದ್ದ ಐಎಎಸ್‌ ಅಧಿಕಾರಿ ಹರ್ಷ ಗುಪ್ತಾ ಅವರು, ರೋಷನ್ ಬೇಗ್ ಅವರ ಹೇಳಿಕೆ ಪರಿಗಣಿಸಲು ಸಾಧ್ಯವೇ ಇಲ್ಲ. ರೋಷನ್ ಬೇಗ್ ತನ್ನ ಹೆಸರಿಗೆ ಲೀಸ್ ಪಡೆದಿದ್ದ ಬಿಲ್ಡಿಂಗ್ ನಲ್ಲಿ ಐಎಂಎ ಸಂಸ್ಥೆ ಪಬ್ಲಿಕೇಷನ್ ಮತ್ತು ಮಲ್ಬರಿ ಸೂಪರ್ ಮಾರ್ಕೆಟ್ ಕಚೇರಿ ತೆರೆಯಲು ಅವಕಾಶ ನೀಡಿದ್ದಾರೆ. ಲೀಸ್ ಪಡೆದ ಕಟ್ಟಡವನ್ನು ಮತ್ತೊಬ್ಬರಿಗೆ ಉಪ ಲೀಸ್ ಕೊಡಲು ಕಾನೂನಿನಲ್ಲಿ ಅವಕಾಶ ವಿಲ್ಲ. ಐಎಂಎ ಪಬ್ಲಿಕೇಷನ್ ಸಿಯಾಸತ್ ಡೈಲಿ ಪತ್ರಿಕೆ ಪ್ರಕಟಣೆಯ ಪಾಲುದಾರಿಕೆ ಹೊಂದಿದೆ. ಸಿಯಾಸತ್ ಡೈಲಿ ಪತ್ರಿಕೆ ರೋಷನ್ ಬೇಗ್ ಅವರಿಗೆ ಸೇರಿದ ದನೀಶ್ ಪಬ್ಲಿಕೇಷನ್ ಪ್ರೆ. ಲಿ. ಹೊರ ತರುತ್ತಿರುವ ಪತ್ರಿಕೆಯಾಗಿದ್ದು, ಐಎಂಎ ಸಂಸ್ಥೆಯೊಂದಿಗೆ ರೋಷನ್ ಬೇಗ್ ನೇರ ಸಂಬಂಧ ಹೊಂದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Former MLA Roshan Baig and IMA Scam: What is the report of IAS officer Harsh Gupta?

ಇದೇ ಜಾಗನ್ನು ಒಬ್ಬ ಶಾಸಕರಾಗಿ ರೋಷನ್ ಬೇಗ್ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಸಾರ್ವಜನಿಕರನ್ನು ಭೇಟಿ ಮಾಡುವ ಕಚೇರಿಯನ್ನಾಗಿ ಬಳಸಿದ್ದಾರೆ. ಅದೇ ಕಚೇರಿಯನ್ನು ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಬಳಿಸಿದ್ದಾರೆ. ಒಬ್ಬ ಶಾಸಕರೇ ಐಎಂಎ ಸಂಸ್ಥೆಯ ಕಚೇರಿಯಲ್ಲಿ ಕೂತು ಕೆಲಸ ಮಾಡುತ್ತಿದ್ ಕಾರಣದಿಂದ ಐಎಂಎ ಸಂಸ್ಥೆ ಮೇಲೆ ಜನರ ನಂಬಿಕೆ ಹುಟ್ಟಲು ಮೂಲ ಕಾರಣವಾಗಿದೆ ಎಂಬುದು ಸಾಮಾನ್ಯ ಜ್ಞಾನ ಇರುವರಿಗೆ ಗೊತ್ತಾಗುತ್ತದೆ.

ಇದೇ ಕಾರಣಕ್ಕಾಗಿಯೇ ಜನ ಸಾಮಾನ್ಯರು ದುಡಿದ ಎಲ್ಲಾ ಹಣವನ್ನು ಐಎಂಎ ಮೇಲೆ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಐಎಂಎ ಸಂಸ್ಥೆಯ ವ್ಯಾಪಾರ ಚಟುವಟಿಕೆಗಳನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದಾರೆ. ಲಭ್ಯವಿರುವ ದಾಖಲೆಗಳ ಪ್ರಕಾರ ರೋಷನ್ ಬೇಗ್ ಐಎಂಎ ಸಂಸ್ಥೆಯ ವಹಿವಾಟಿನಲ್ಲಿ ನೇರವಾಗಿ ಭಾಗಿಯಾಗಿದ್ದು, ಅಕ್ರಮ ಲಾಭ ಪಡೆದುಕೊಂಡಿದ್ದಾರೆ. ರೋಷನ್ ಬೇಗ್ ಅವರ ವಿರುದ್ಧ ಕ್ರಮ ಜರುಗಿಸುವ ಮುನ್ನ ಬೇಗ್ ವೈಯಕ್ತಿಕ ಆಸ್ತಿ ಸಂಪಾದನೆ ಸೇರಿದಂತೆ ಸಿಬಿಐನಿಂದ ವರದಿ ತರಿಸಿಕೊಂಡ ಬಳಿಕ ಸರ್ಕಾರ ಮುಂದಿನ ಕ್ರಮಕ್ಕೆ ಆದೇಶಿಸಬಹುದು ಹಣ ಹೂಡಿಕೆದಾರರ ಹಿತ ರಕ್ಷಣೆ ದೃಷ್ಟಿಯಿಂದ ಇದು ಅಗತ್ಯ ಎಂದು ಹರ್ಷ ಗುಪ್ತಾ ಅವರು ಕಂದಾಯ ಇಲಾಖೆಗೆ ರವಾನಿಸಿರುವ ಪತ್ರದಲ್ಲಿ ವಿವರಸಿದ್ದಾರೆ.

Former MLA Roshan Baig and IMA Scam: What is the report of IAS officer Harsh Gupta?

ಹರ್ಷ ಗುಪ್ತಾ ಅವರ ಈ ವರದಿ ಸರ್ಕಾರದ ಕೈಸೇರುತ್ತಿದ್ದಂತೆ ರೋಷನ್ ಬೇಗ್ ಸಿಬಿಐ ಬಂಧನಕ್ಕೆ ಒಳಗಾಗಿರವುದು ಕಾಕತಳೀಯ. ಮಾತ್ರವಲ್ಲ, ಸಿಬಿಐ ಅಧಿಕಾರಿಗಳು ಐಎಂಎ ಸಂಸ್ಥೆ ಜತೆಗಿನ ರೋಷನ್ ಬೇಗ್ ಸಂಬಂಧ, ಬಳಿಕ ಅವರು ಗಳಿಸಿರುವ ಆಸ್ತಿಗಳು, ಉಡುಗೊರೆ ರೂಪದಲ್ಲಿ ಐಎಂಎನಿಂದ ವಸೂಲಿ ಮಾಡಿರುವ ಸಂಪತ್ತಿನ ಬಗ್ಗೆ ಸಿಬಿಐ ತನಿಖೆ ಮುಂದುವರೆಸಿದೆ.

Recommended Video

ಪಬ್ ಜಿ ಆಟಗಾರರಿಗೆ 6 ಕೋಟಿ ಬಹುಮಾನ!! | Oneindia Kannada

ಬೇಗ್ ಆಸ್ತಿ ಜಪ್ತಿ ? ಇನ್ನು ಸಾರ್ವಜನಿಕರ ಹಣ ದುರ್ಬಳಿಕೆ ಮಾಡಿಕೊಂಡಿರುವ ಐಎಂಎ ಸಂಸ್ಥೆಯಿಂದ ಅಕ್ರಮ ಲಾಭ ಪಡೆದುಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳು ಲಭ್ಯವಾದಲ್ಲಿ, ಬೇಗ್ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡರೂ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ಹೂಡಿಕೆ ಮಾಡಿರುವುದು ಬರೋಬ್ಬರಿ ನಾಲ್ಕು ಸಾವಿರ ಕೋಟಿ. ಆದರೆ ಸದ್ಯ ಐಎಂಎ ಆಸ್ತಿ ಜಪ್ತಿ ಯಾಗಿರುವುದು ಕೇವಲ ನಾನೂರು ಕೋಟಿ ಮಾತ್ರ. ಐಎಂಎನಿಂದ ಅಕ್ರಮ ಲಾಭ ಪಡೆದುಕೊಂಡವರ ಆಸ್ತಿ ಜಪ್ತಿಯಾದಲ್ಲಿ ಸಂತ್ರಸ್ರರ ಪಾಲಿಗೆ ಹಾಕಿದ ದುಡ್ಡು ವಾಪಸು ಬರುವ ನಂಬಿಕೆ ಇಮ್ಮಡಿಯಾಗಬಹುದು.

English summary
Former Minister R. Roshan Baig was involved in the IMA transaction. IAS officer Harsha Gupta has submitted a report on Roshan Baig being an accomplice. The report was submitted to Principal Secretary of the Revenue Department on November 19. Roshan Baig , who promoted the IMA, has made an illegal profit. He said it was appropriate to seek a report from the CBI before taking action against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X