ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ: ದೂರು ದಾಖಲು

|
Google Oneindia Kannada News

ಬೆಂಗಳೂರು ಡಿಸೆಂಬರ್ 1: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿರುವ ದುಷ್ಕರ್ಮಿಗಳು ಇಪ್ಪತ್ತು ಕೋಟಿ ರೂಪಾಯಿ ಒತ್ತೆ ಹಣಕ್ಕೆ ಬೇಡಿಕೆ ಇಟ್ಟು ಬಿಟ್ಟು ಕಳಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೋಲಾರದ ಮಾಜಿ ಶಾಸಕ ವರ್ತೂರು ಪ್ರಕಾಶ್ ಕೆಲಸದ ನಿಮಿತ್ತ ಕೋಲಾರದ ಬೆಗ್ಗಲಿ ಹೊಸಹಳ್ಳಿಗೆ ಹೋಗಿದ್ದರು. ಅಲ್ಲಿಂದಲೇ ಅಪಹರಣ ಮಾಡಿ ಇಪ್ಪತ್ತು ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಹಣಕ್ಕೆ ಒತ್ತೆ ಇಟ್ಟಿದ್ದಾರೆ. ಆದರೆ ಅಪಹರಣ ಸಂಗತಿ ಬಹಿರಂಗವಾಗಿರಲಿಲ್ಲ. ಮೂರು ದಿನದ ಹಿಂದೆ ಬೆಳ್ಳಂದೂರು ಸಮೀಪದ ಜನ್ನಸಂದ್ರದಲ್ಲಿ ನಂಬರ್ ಪ್ಲೇಟ್ ಇಲ್ಲದ ಫಾರ್ಚುನರ್ ಕಾರ್ ಪತ್ತೆಯಾಗಿತ್ತು. ಸ್ಥಳೀಯರು ಕಾರಿನ ಬಗ್ಗೆ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದರು. ವರ್ತೂರು ಪ್ರಕಾಶ್ ಅವರು ನೀಡಿದ ದೂರಿನ ಮೇರೆಗೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ.

 ಬಳ್ಳಾರಿಯಲ್ಲಿ ಗಣಿ ಮಾಲೀಕರ ಮಗ ನಿಗೂಢವಾಗಿ ನಾಪತ್ತೆ ಬಳ್ಳಾರಿಯಲ್ಲಿ ಗಣಿ ಮಾಲೀಕರ ಮಗ ನಿಗೂಢವಾಗಿ ನಾಪತ್ತೆ

ಕೋಲಾರ ಕ್ಷೇತ್ರದ ಶಾಸಕರಾಗಿದ್ದ ವರ್ತೂರು ಪ್ರಕಾಶ್ ಕೆಲಸದ ನಿಮಿತ್ತ ಕೋಲಾರದ ಬೆಗ್ಗಲಿ ಹೊಸಹಳ್ಳಿಗೆ ಹೋಗಿದ್ದರು. ಅಲ್ಲಿಯೇ ಮಾಸ್ಕ್ ಧರಿಸಿದ್ದ ಎಂಟು ಮಂದಿ ಮುಸುಕು ದಾರಿಗಳು ಅಪಹರಣ ಮಾಡಿದ್ದಾರೆ ಎನ್ನಲಾಗಿದೆ. ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಮೂವತ್ತು ಕೋಟಿ ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ವರ್ತೂರು ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಮೂರು ದಿನದ ಬಳಿಕ ಅವರನ್ನು ಬಿಟ್ಟು ಕಳಿಸಿದ್ದಾರೆ ಎನ್ನಲಾಗಿದ್ದು ಈ ಸಂಬಂಧ ವರ್ತೂರು ಪ್ರಕಾಶ್ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಸ್ಕ್ ಧರಿಸಿದ್ದ ಎಂಟು ಮಂದಿ ಅಪಹರಣಕಾರರು ಕೋಲಾರದ ತೋಟದ ಮನೆಯಿಂದ ಅಪಹರಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು. ಕಾರು ಚಾಲಕ ಸುನೀಲ್ ತಪ್ಪಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅಪಹರಣದ ನಂತರ ವರ್ತೂರು ಪ್ರಕಾಶ್ ಅಪಹರಣಕಾರರಿಗೆ 48 ಲಕ್ಷ ಹಣವನ್ನೂ ನೀಡಿದ್ದಾರೆ ಎನ್ನಲಾಗಿದೆ. ನಯಾಜ್ ಎಂಬ ಹುಡುಗನ ಮೂಲಕ ಹಣ ತರಿಸಿಕೊಟ್ಟಿದ್ದಾರೆ. ಆದರೆ, ಹಣ ಪಡೆದ ನಂತರವೂ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟು ವರ್ತೂರು ಪ್ರಕಾಶ್ ಮೇಲೆ ಅಪಹರಣಕಾರರು ಹಲ್ಲೆ ನಡೆಸಿದ್ದಾರೆ ಎಂದು ವರ್ತೂರು ಪ್ರಕಾಶ್ ದೂರಿನಲ್ಲಿ ವಿವರಿಸಿದ್ದಾರೆ.

Former Minister Varthur Prakash Kidnap: Demand For Rs 20 Crore

ಅಪಹರಣಕ್ಕೆ ಒಳಗಾಗಿದ್ದ ಮಂಗಳವಾರ ಸಂಜೆ ವರ್ತೂರು ಪ್ರಕಾಶ್ ಅವರು ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಬೆಳ್ಳಂದೂರು ಪೊಲೀಸರು ಅಕ್ರಮ ತಡೆ, ಅಪಹರಣ, ಅಕ್ರಮ ಬಂಧನ, ಕೊಲೆಯತ್ನ, ಹಣಕ್ಕಾಗಿ ಬೇಡಿಕೆ, ಹಲ್ಲೆ ಆರೊಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಕೋಲಾರಿನಲ್ಲಿ ನಡೆದಿರುವ ಕಾರಣ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸುವ ಸಾಧ್ಯತೆಯಿದೆ. ಯಾವ ಕಾರಣಕ್ಕಾಗಿ ಅಪಹರಣ ಮಾಡಿದ್ದರು ? ಭೂ ವಿವಾದ ಹಿನ್ನೆಲೆ ಅಪಹರಣ ಮಾಡಲಾಗಿತ್ತೇ ಎಂಬ ಮಾತು ಕೇಳಿ ಬರುತ್ತಿವೆ.

English summary
Former minister Varthur R prakash kidnapped by unknown persons and demanded for 20 crores, case is registered in Bellanduru police station. prakash had gone to kolar Begli hosalli for his farm house, Prakash's Fortuner car with no number plate was found three days ago at Janasandra near Bellandur. Locals had complained about the car to Bellandur station. A complaint has been lodged with Varthoor Prakash at the Bellandur police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X