ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆ ಶಿವಕುಮಾರ್ ವಿರುದ್ಧ ಬಳಸಿದ್ದ 'ಅವಾಚ್ಯ' ಪದವನ್ನು ವಾಪಸ್ ಪಡೆದ ರಮೇಶ್ ಜಾರಕಿಹೊಳಿ

|
Google Oneindia Kannada News

ಬೆಂಗಳೂರು, ಮಾರ್ಚ್ 27: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಳಸಿದ್ದ ಅವಾಚ್ಯ ಪದವನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಪಸ್ ಪಡೆದಿದ್ದಾರೆ.

ಡಿ.ಕೆ.ಶಿವಕುಮಾರ್ ವಿರುದ್ಧ ಬಳಸಿದ ಕೆಟ್ಟ ಪದವನ್ನು ವಾಪಸ್ ಪಡೆಯುತ್ತೇನೆ. ಮುಜುಗರದಿಂದ ಅಂತಹ ಪದಗಳನ್ನು ಬಳಕೆ ಮಾಡಿದ್ದೇನೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ಚುನಾವಣಾ ಪ್ರಚಾರ ಅರ್ಧಕ್ಕೆ ಬಿಟ್ಟು ಡಿಕೆ ಶಿವಕುಮಾರ್ ವಾಪಸಾಗಿದ್ದೇಕೆ?ಚುನಾವಣಾ ಪ್ರಚಾರ ಅರ್ಧಕ್ಕೆ ಬಿಟ್ಟು ಡಿಕೆ ಶಿವಕುಮಾರ್ ವಾಪಸಾಗಿದ್ದೇಕೆ?

ಸದಾಶಿವನಗರ ನಿವಾಸದ ಮತ್ತೊಮ್ಮೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡಿಕೆಶಿ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

Ramesh Jarkiholi

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಅವಾಚ್ಯ ಪದ ಬಳಸಿದ‌ ಹಿನ್ನೆಲೆ ಯುವ ಕಾಂಗ್ರೆಸ್ ಸದಸ್ಯರು ರಮೇಶ್ ಜಾರಕಿಹೊಳಿ ಸದಾಶಿವನಗರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಡಿಕೆಶಿ ಸಿಡಿಲೇಡಿಗೆ ದುಡ್ಡು ಕೊಟ್ಟು ಗೋವಾಗೆ ಕಳುಹಿಸಿದ್ರಾ ?ಡಿಕೆಶಿ ಸಿಡಿಲೇಡಿಗೆ ದುಡ್ಡು ಕೊಟ್ಟು ಗೋವಾಗೆ ಕಳುಹಿಸಿದ್ರಾ ?

Recommended Video

ಇಬ್ಬರ ರಾಜಕೀಯ ಭವಿಷ್ಯಕ್ಕೆ ಖಳನಾಯಕಿ ಆಗ್ತಾರ ಸಿಡಿ ಗರ್ಲ್ | Oneindia Kannada

ಎರಡು ತಂಡಗಳಾಗಿ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ರಮೇಶ್ ಜಾರಕಿಹೊಳಿ ವಿರುದ್ಧ ಧಿಕ್ಕಾರ ಕೂಗಿದರು. ರಮೇಶ್ ಜಾರಕಿಹೊಳಿ ಕ್ಷಮಾಪಣೆ ಕೇಳಬೇಕು, ಈಗಾಗಲೇ ವಿಷಾದ ವ್ಯಕ್ತಪಡಿಸುವುದಲ್ಲ ಡಿ.ಕೆ.ಶಿವಕುಮಾರ್ ಎದುರೇ ಕ್ಷಮೆ ಕೋರಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು‌.
tamil nadu assembly election 2021, ತಮಿಳುನಾಡು ವಿಧಾನಸಭೆ ಚುನಾವಣೆ 2021

English summary
Former Minister Ramesh Jarkiholi Took back his insensitive words about KPCC president DK Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X