ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ ಸಿಡಿ ಪ್ರಕರಣ : ಎಚ್ ವೈ ಮೇಟಿಗೆ ಕ್ಲೀನ್ ಚಿಟ್

ಎಚ್ ವೈ ಮೇಟಿ ಅವರು ಸೆಕ್ಸ್ ವಿಡಿಯೋದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಗೊತ್ತಿರಬಹುದು. ಆದರೆ, ಈಗ ಎಚ್ ವೈ ಮೇಟಿಗೆ ಕರ್ನಾಟಕ ಸಿಐಡಿಯಿಂದ ಕ್ಲೀನ್ ಚಿಟ್ ಸಿಕ್ಕಿದೆ.

By Mahesh
|
Google Oneindia Kannada News

ಬೆಂಗಳೂರು, ಮೇ 24: ಎಚ್ ವೈ ಮೇಟಿ ಅವರು ಸೆಕ್ಸ್ ವಿಡಿಯೋದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಗೊತ್ತಿರಬಹುದು. ಆದರೆ, ಈ ವಿಡಿಯೋ ಶೂಟಿಂಗ್ ಹಿಂದೆ ಓರ್ವ ಮಹಿಳಾ ರಾಜಕಾರಣಿ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಇದ್ದಾರೆ ಎಂಬ ಸತ್ಯ ಬಹಿರಂಗಗೊಂಡಿತ್ತು. ಆದರೆ, ಈಗ ಎಚ್ ವೈ ಮೇಟಿಗೆ ಕರ್ನಾಟಕ ಸಿಐಡಿಯಿಂದ ಕ್ಲೀನ್ ಚಿಟ್ ಸಿಕ್ಕಿದೆ.

ಮಾಜಿ ಸಚಿವ ಎಚ್.ವೈ.ಮೇಟಿ ಅವರ ರಾಸಲೀಲೆ ಪ್ರಕರಣದಲ್ಲಿ ಮಹಿಳೆ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ. ವಿಡಿಯೋ ಎಡಿಟಿಂಗ್ ಮಾಡಿ ಪ್ರಸಾರ ಮಾಡಲಾಗಿದೆ. ಮೂಲ ವಿಡಿಯೋ ಇಲ್ಲ. ಹೀಗಾಗಿ, ಮೇಟಿ ಅವರ ಮೇಲಿನ ಆರೋಪ ಸಾಬೀತು ಮಾಡಲು ಬೇಕಾದ ಯಾವುದೇ ಅಂಶಗಳು ತನಿಖೆಯಲ್ಲಿ ಕಂಡು ಬಂದಿಲ್ಲ ಎಂದು ಸಿಐಡಿ ಗೃಹ ಇಲಾಖೆಗೆ ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ.[ಮೇಟಿ ರಾಸಲೀಲೆ ವಿಡಿಯೋ ಹಿಂದಿನ ರಹಸ್ಯ]

Former Karnataka minister H Y Meti gets clean chit in sleaze video case

ಈ ಬಗ್ಗೆ ಸಂತ್ರಸ್ತೆ ಮಹಿಳೆ ಸಹ ಯಾವುದೇ ದೂರನ್ನು ದಾಖಲು ಮಾಡಿಲ್ಲ. ಅಲ್ಲದೆ ಆಕೆ ತನ್ನ ಮೇಲೆ ಯಾವುದೇ ದೌರ್ಜನ್ಯ ನಡೆದಿಲ್ಲವೆಂದು ಹೇಳಿಕೆ ನೀಡಿದ್ದು, ತನ್ನ ಮತ್ತು ಮೇಟಿ ಅವರ ಸಂಬಂಧ ತಂದೆ ಮತ್ತು ಮಗಳ ಸಂಬಂಧ ಎಂದು ಹೇಳಿದ್ದಾಳೆ. ಪ್ರಕರಣದ ವಿಚಾರಣೆ ವೇಳೆ ಕೆಲವರು ತನಿಖೆಗೆ ಸಹಕಾರ ನೀಡಿಲ್ಲ ಎಂಬ ಅಂಶಗಳನ್ನು ಪರಿಗಣಿಸಿ ಸಿಐಡಿ ತಂಡ, ಕ್ಲೀನ್ ಚಿಟ್ ನೀಡಿದೆ.

ಡಿಸೆಂಬರ್ 2016ರಂದು 71 ವರ್ಷ ವಯಸ್ಸಿನ ಮೇಟಿ ಅವರು ಸರ್ಕಾರಿ ಉದ್ಯೋಗಿ ವಿಜಯಲಕ್ಷ್ಮಿ ಅವರ ಜತೆ ಇರುವ ಅಶ್ಲೀಲ ವಿಡಿಯೋವೊಂದನ್ನು ಸ್ಥಳೀಯ ವಾಹಿನಿಗಳು ಪ್ರಸಾರ ಮಾಡಿತ್ತು. ಇದಾದ ಬಳಿಕ ಅಬಕಾರಿ ಸಚಿವ ಸ್ಥಾನಕ್ಕೆ ಮೇಟಿ ರಾಜೀನಾಮೆ ನೀಡಿದ್ದರು.

English summary
The Karnataka CID has given former Karnataka minister and Congress leader H Y Meti a clean chit in a sleaze video case. CID in a report submitted to the Home ministry has claimed that the video was edited and doctored. The report also says that the woman purportedly shown in the video with the former minister
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X