ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತದಾನದ ಜಾಗೃತಿ ಮೂಡಿಸಿದ ದ್ರಾವಿಡ್ ಗೆ ಮತದಾನದ ಹಕ್ಕಿಲ್ಲ

|
Google Oneindia Kannada News

ಬೆಂಗಳೂರು, ಏಪ್ರಿಲ್ 14: ಟೀಂ ಇಂಡಿಯಾದ ಮಾಜಿ ನಾಯಕ, ಕರ್ನಾಟಕ ಚುನಾವಣೆ ಆಯೋಗದ ಐಕಾನ್‌ ಮತ್ತು ರಾಯಭಾರಿಯಾಗಿದ್ದ ರಾಹುಲ್​ದ್ರಾವಿಡ್​ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗದಂಥ ಪರಿಸ್ಥಿತಿ ಎದುರಾಗಿದೆ. ಇಂದಿರಾನಗರ ನಿವಾಸಿಗಳಾಗಿದ್ದ ದ್ರಾವಿಡ್ ಅವರ ಕುಟುಂಬಕ್ಕೂ ಕೂಡ ಮತದಾನದ ಹಕ್ಕು ಕೈತಪ್ಪಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕಿರುವ ದ್ರಾವಿಡ್ ಕುಟುಂಬದವರ ಹೆಸರು ಮತದಾನದ ಪಟ್ಟಿಯಿಂದ ಡಿಲೀಟ್ ಆಗಿದ್ದು, ಮತ್ತೆ ಸೇರಿಸಲು ಆಗದಂಥ ಪರಿಸ್ಥಿತಿ ಎದುರಾಗಿದೆ.

Former EC Amabassador Rahul Dravid Will Not be Able to Vote

ಏನು ಕಾರಣ: ಇಂದಿರಾನಗರದಲ್ಲಿದ್ದ ರಾಹುಲ್​ ಕುಟುಂಬ ಈಗ ಅಶ್ವತ್ಥ್‌ನಗರದ ನಿವಾಸಿಗಳಾಗಿದ್ದಾರೆ. ವಿಳಾಸ ಬದಲಾವಣೆಗಾಗಿ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ಸರಿಯಾದ ವೇಳೆಗೆ ಫಾರ್ಮ್‌ 6 ಅನ್ನು ಸಲ್ಲಿಸಬೇಕಿತ್ತು. ಆದರೆ, ನಿಗದಿತ ವೇಳೆಯಲ್ಲಿ ಅರ್ಜಿ ಸಲ್ಲಿಸದ ಕಾರಣ ಮತದಾನ ಪಟ್ಟಿಯಿಂದ ರಾಹುಲ್‌ ದ್ರಾವಿಡ್‌ ಹೆಸರು ಮತ್ತೆ ಸೇರ್ಪಡೆಯಾಗಿಲ್ಲ.

ಮತದಾನ ನಮ್ಮ ಹಕ್ಕು, ವೋಟಿಂಗ್ ಪರ ದ್ರಾವಿಡ್ ಬ್ಯಾಟಿಂಗ್!ಮತದಾನ ನಮ್ಮ ಹಕ್ಕು, ವೋಟಿಂಗ್ ಪರ ದ್ರಾವಿಡ್ ಬ್ಯಾಟಿಂಗ್!

ಬೆಂಗಳೂರಿನ ಸೆಂಟ್ರಲ್ ಲೋಕಸಭಾ ಕ್ಷೇತ್ರದ ಶಾಂತಿನಗರ ವಿಧಾನಸಭಾ ವಿಭಾಗದ ಇಂದಿರಾನಗರದ 12ನೇ ಮುಖ್ಯರಸ್ತೆ ನಿವಾಸಿಯಾಗಿದ್ದರು. ಅಶ್ವಥ್ ನಗರಕ್ಕೆ ಮನೆ ಶಿಫ್ಟ್ ಆದ ಬಳಿಕ ದ್ರಾವಿಡ್​ ಸಹೋದರ ವಿಜಯ್​ ಫಾರ್ಮ್​ 7ನ್ನು ಇಂದಿರಾನಗರದ ಮತದಾನದ ಅಧಿಕಾರಿಗಳಿಗೆ ನೀಡಿದ್ದರು.

ನಂತರ ಇಂದಿರಾನಗರದ ಮತದಾರರ ಪಟ್ಟಿಯಿಂದ ದ್ರಾವಿಡ್​ ಕುಟುಂಬದ ಹೆಸರನ್ನು ಅಳಿಸಲಾಗಿದೆ. ಮಾ. 16ರೊಳಗೆ ಮತದಾರರ ಹೆಸರು ಸೇರಿಸಲು ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು ಆದರೆ, ನಿಗದಿತ ವೇಳೆಯಲ್ಲಿ ವಿಳಾಸ ಬದಲಾವಣೆ ಅರ್ಜಿ ಸಲ್ಲಿಸಿಲ್ಲ ಎಂದು ದೊಮ್ಮಲೂರು ವಿಭಾಗದ ಅಧಿಕಾರಿ ಹೇಳಿದ್ದಾರೆ.

English summary
Former India captain Rahul Dravid will not be able to vote during the 2019 Lok Sabha Elections as his name has been deleted from the electorate list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X