ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಮುಖ್ಯಮಂತ್ರಿ ಅಜಾತಶತ್ರು ಧರಂ ಸಿಂಗ್ ವ್ಯಕ್ತಿಚಿತ್ರ

|
Google Oneindia Kannada News

ಬೆಂಗಳೂರು, ಜುಲೈ 27: ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎನ್.ಧರಂ ಸಿಂಗ್(1936 ಡಿಸೆಂಬರ್ 25- 2017 ಜುಲೈ 27) ಅವರು ಇಂದು(ಜುಲೈ 27) ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು. ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಕರ್ನಾಟಕದ 17 ನೇ ಮುಖ್ಯಮಂತ್ರಿಯಾಗಿದ್ದ ಧರಂ ಸಿಂಗ್ ಅವರಿಗೆ 80 ವರ್ಷ ವಯಸ್ಸಾಗಿತ್ತು.

BREAKING NEWS: ಮಾಜಿ ಮುಖ್ಯಮಂತ್ರಿ ಎನ್.ಧರಂ ಸಿಂಗ್ ನಿಧನBREAKING NEWS: ಮಾಜಿ ಮುಖ್ಯಮಂತ್ರಿ ಎನ್.ಧರಂ ಸಿಂಗ್ ನಿಧನ

ಅವರ ಅಂತ್ಯಕ್ರಿಯೆ ಜುಲೈ 28 ರಂದು ಅವರ ಸ್ವಗ್ರಾಮ ಕಲುಬುರ್ಗಿಯ ಜೇವರ್ಗಿಯಲ್ಲಿ ನಡೆಯಲಿದ್ದು, ಇಂದು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಿರಿಯ ಮುಖಂಡ ಧರಂ ಸಿಂಗ್ ನಿಧನಕ್ಕೆ ದೇಶದಾದ್ಯಂತ ಗಣ್ಯರು ಸಂತಾಪ ಸೂಚಿಸಿದ್ದಾರೆ.

Former CM of Karnataka Dharam Singh passes away, here is his profile

ಅಜಾತ ಶತ್ರು ಎಂದೇ ಕರೆಸಿಕೊಂಡಿದ್ದ ಧರಂ ಸಿಂಗ್ ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.

* ನಾರಾಯಣ ಸಿಂಗ್ ಧರಂ ಸಿಂಗ್ ಎಂಬುದು ಅವರ ಪೂರ್ಣ ಹೆಸರು
* ಕಲುಬುರ್ಗಿ ಜಿಲ್ಲೆಯ ಜೇವರ್ಗಿಯ ನೇಲೋಗಿಯ ರಜಪೂತ ಕುಟುಂಬದಲ್ಲಿ 1936 ಡಿಸೆಂಬರ್ 25 ರಂದು ಜನನ
* ತಂದೆ ನಾರಾಯಣ ಸಿಂಗ್, ತಾಯಿ ಪದ್ಮಾವತಿ
* ಪತ್ನಿ ಪ್ರಭಾವತಿ. ಅಜಯಸಿಂಗ್, ವಿಜಯಸಿಂಗ್ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ
* ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂಎ ಮತ್ತು ಎಲ್ ಎಲ್ ಬಿ ಪದವಿ
* 1960 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ ಸಿ)ಗೆ ಸೇರ್ಪಡೆ.
* 1978-2008 ರವರೆಗೆ ವಿಧಾನ ಸಭಾ ಸದಸ್ಯರಾಗಿದ್ದರು
* ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿದ್ದರು
* ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಲೋಕೋಪಯೊಗಿ ಖಾತೆಯನ್ನು ನಿರ್ವಹಿಸಿದ್ದರು.
* ಇದಕ್ಕಿಂತ ಮೊದಲು ಗೃಹ ಖಾತೆ, ಸಮಾಜ ಕಲ್ಯಾಣ ಖಾತೆ, ಅಬಕಾರಿ ಖಾತೆ, ಆದಾಯ ಖಾತೆ ಮೊದಲಾದ ಖಾತೆಗಳಲ್ಲಿ ಸೇವೆ ಸಲ್ಲಿಸಿದ್ದರು.
* ಕೆಪಿಸಿಸಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು
* 1999-2004 ರವರೆಗೆ ಲೋಕೋಪಯೋಗಿ ಸಚಿವರಾಗಿದ್ದರು.
* 2004-2006 ರವರೆಗೆ ಕರ್ನಾಟಕದ 17ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
* 2006- 2007 ರಲ್ಲಿ ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು.
* 2009 ರಲ್ಲಿ ಸಂಸದರಾಗಿಯೂ ಕಾರ್ಯನಿರ್ವಹಿಸಿದ್ದರು.
* 2008 ರಲ್ಲಿ ಅಂದಿನ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ ಅವರು ಧರಂ ಸಿಂಗ್ ಅವರ ವಿರುದ್ಧ ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದರು ಎಂದು ಆರೋಪಿಸಿದ್ದರು. ಧರಂ ಸಿಂಗ್ ಅವರ ಹೆಸರಿನೊಂದಿಗೆ ತಳುಕಿಹಾಕಿಕೊಂಡಿದ್ದ ಪ್ರಮುಖ ವಿವಾದವೆಂದರೆ ಇದೊಂದೇ.
* 2017 ಜುಲೈ 27 ರಂದು ಹೃದಯಾಘಾತದಿಂದ ನಿಧನ.

English summary
Dharam Singh, who was the 17th chief minister of Karnataka passes away on july 27th in M S Ramaiah hospital Bengaluru. Here is his brief profile
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X