• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಸತಿ ಸಚಿವ ವಿ. ಸೋಮಣ್ಣಗೆ ಮಾಜಿ ಸಿಎಂ ಎಚ್‌ಡಿಕೆ ಸವಾಲು!

|

ಬೆಂಗಳೂರು, ಸೆ. 19: ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಬೆಟ್ಟಿಂಗ್, ಡ್ಯಾನ್ಸ್ ಬಾರ್‌ಗಳನ್ನು ನಡೆಸುತ್ತಿರುವ ಮಾಫಿಯಾದ ಹಣದಿಂದ ನನ್ನ ಸರ್ಕಾರವನ್ನು ಕೆಡವಲಾಯ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಆರೋಪಿಸಿದ್ದಾರೆ. ರಾಜ್ಯದಲ್ಲಿ ಡ್ರಗ್ ಮಾಫಿಯಾ ಸದ್ದು ಮಾಡುತ್ತಿದೆ. ಜೊತೆಗೆ ಹಲವರ ಬಂಧನವೂ ಆಗಿದೆ. ಇನ್ನು ಕೆಲವರ ಬಂಧನ ವಾಗಲಿದೆ ಎಂಬ ಸುದ್ದಿಯೂ ಇದೆ. ಈ ಮಧ್ಯೆ ಇದು ಸರ್ಕಾರದಿಂದ ಜನರ ಗಮನ ಸೆಳೆಯುವ ಪ್ರಯತ್ನವಷ್ಟೆ ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಅಧಿವೇಶನದಲ್ಲಿ ಡ್ರಗ್ ಮಾಫಿಯಾ ವಿಚಾರವನ್ನು ಪ್ರಸ್ತಾಪ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಡ್ರಗ್ ವಿಚಾರದ ಜನರ ಗಮನ ಸೆಳೆಯಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಇನ್ನು ಹದಿನೈದು ದಿನ ಕಾಯಿರಿ. ನಿಮಗೆ ಇದರ ತನಿಖೆ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದು ನಿಮಗೆ ಗೊತ್ತಾಗುತ್ತದೆ. ಹದಿನೈದು ದಿನಗಳ ಬಳಿಕ ಡ್ರಗ್ ತನಿಖೆ ನಡೆಯುತ್ತಿದ್ದರೆ ಒಳ್ಳೆಯದೆ. ಇನ್ನು ಡಿಜೆ ಹಳ್ಳಿ ಗಲಭೆ ಕೂಡ ಇದೇ ಹಾದಿ ಹಿಡಿಯಲಿದೆ. ಡಿಜೆ ಹಳ್ಳಿ ಪ್ರಕರಣದಲ್ಲಿ ನಿಜವಾದ ಆರೋಪಿಯನ್ನು ಹಿಡಿದಿದ್ದಾರಾ? ಇಲ್ಲ. ಹಾಗೆಯೆ ಡ್ರಗ್ ಮಾಫಿಯಾ ವಿಚಾರ ಕೂಡ ಎಂದಿದ್ದಾರೆ.

ಸೋಮಣ್ಣಗೆ ಎಚ್‌ಡಿಕೆ ಸವಾಲು

ಸೋಮಣ್ಣಗೆ ಎಚ್‌ಡಿಕೆ ಸವಾಲು

ಸೋಮಣ್ಣ ವೀಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಎಚ್‌ಡಿಕೆ ಅವರು, ಯಾರೋ‌ ಮನೆ ಕೇಳಿದ್ದಕ್ಕೆ ಮೈತ್ರಿ ಸರ್ಕಾರದಿಂದಾಗಿ ವಸತಿ ಇಲಾಖೆ ಹಾಳಾಗಿದೆ ಎಂದಿದ್ದಾರೆ. ಏನಾಗಿದೆ ಅಂತಾ ದಾಖಲೆ ಕೊಡಿ ಅಂತಾ ಅಧಿವೇಶನದಲ್ಲಿ ಕೇಳುತ್ತೇನೆ.

ಡ್ರಗ್ಸ್: ಮಹಾಲಯ ಅಮಾವಾಸ್ಯೆಯ ದಿನದಂದು ಕುಮಾರಸ್ವಾಮಿ ಸಿಡಿಸಿದ ಹೊಸ ಬಾಂಬ್

ಕಳೆದ ಮೈತ್ರಿ ಸರ್ಕಾರದ ಕಾಲದಲ್ಲಿ ವಸತಿ ಇಲಾಖೆಯಲ್ಲಿ ಮಾಡಿರುವ ಸಮಸ್ಯೆಗಳನ್ನು ಪರಿಹರಿಸವುದೇ ನಮ್ಮ ಕೆಲಸವಾಗಿದೆ ಎಂದಿದ್ದಾರೆ. ಜೊತೆಗೆ ಸಚಿವ ಸೋಮಣ್ಣ ಮನೆ ಕೇಳಿದ ವ್ಯಕ್ತಿಗೆ ಫೋನ್‌ನಲ್ಲಿ ಬಾಯಿಗೆ ಬಂದಂತೆ ಬೈದಿದ್ದಾರೆ. ವಸತಿ ಇಲಾಖೆಯಲ್ಲಿನ ಸಮಸ್ಯೆಗಳಿಗೆ ಹಿಂದಿನ ಸರ್ಕಾರ ಕಾರಣ ಎಂದಿದ್ದಾರೆ. ನನ್ನಿಂದ ಯಾವುದೇ ಸಮಸ್ಯೆ ಆಗಿಲ್ಲ. ವಸತಿ ಇಲಾಖೆಯಲ್ಲಿ ನನ್ನ ಅವಧಿಯಲ್ಲಿ ಅನೇಕ ಕೆಲಸ ಮಾಡಿದ್ದೇನೆ. ಇದೆಲ್ಲವನ್ನೂ ನಾನು ಸದನದಲ್ಲಿ ಚರ್ಚೆ ಮಾಡುತ್ತೇನೆ. ನಾನಿದ್ದಾಗ ಮಾಡಿರುವ ಸಮಸ್ಯೆ ಬಗ್ಗೆ ಅವರು ತಿಳಿಸಲಿ ಎಂದು ವಸತಿ ಸಚಿವ ಸೊಮಣ್ಣ ಅವರಿಗೆ ಎಚ್‌ಡಿಕೆ ಸವಾಲು ಹಾಕಿದ್ದಾರೆ.

ಡಿ.ಜೆ. ಹಳ್ಳಿ ಪ್ರಕರಣ ಏನಾಯ್ತು?

ಡಿ.ಜೆ. ಹಳ್ಳಿ ಪ್ರಕರಣ ಏನಾಯ್ತು?

ಡಿ.ಜೆ. ಹಳ್ಳಿ ಪ್ರಕರಣದಲ್ಲಿ ನಮ್ಮವರೇ ನಮಗೆ ತೊಂದರೆ ಮಾಡಿದ್ದಾರೆ ಅಂತಾ ಎಂಎಲ್‌ಎನೇ ಹೇಳಿದ್ದಾರೆ. ಮೂಲ ಅವರಲ್ಲೇ ಇದೆ, ಅದಕ್ಕೆ ಪ್ರೇರಣೆ ಕೊಟ್ವವರು ಯಾರು? ಮ್ಯಾಜಿಸ್ಟ್ರೇಟ್ ತನಿಖೆ ಏನಾಯ್ತು? ಗಾಂಜಾ ಹೊಡೆದವರನ್ನು ಅರೆಸ್ಟ್ ಮಾಡಿದ್ರೋ, ಪಾಪ ಅಮಾಯಕರನ್ನ ಅರೆಸ್ಟ್ ಮಾಡಿದ್ರೋ ಗೊತ್ತಿಲ್ಲ, ಸಾವಿರಾರು ಮಕ್ಕಳನ್ನು ತಗೊಂಡು ಹೋಗಿ ಅಲ್ಲೆಲ್ಲೋ ಬಳ್ಳಾರಿ ಜೈಲಲ್ಲಿ ಹಾಕಿದ್ದಾರೆ. ಆದ್ರೆ ಮುಖ್ಯ ಆರೋಪಿಯನ್ನ ಇಲ್ಲಿವರೆಗೂ ಬಂಧಿಸಿದ್ದಾರಾ? ಇಲ್ಲ. ಹೀಗೆ ಡ್ರಗ್ಸ್ ಪ್ರಕರಣ ಕೂಡ ಆಗಲಿದೆ ಎಂದರು.

ಎಚ್. ವಿಶ್ವನಾಥ್ ಬಗ್ಗೆ ಚರ್ಚೆ ಬೇಡ

ಎಚ್. ವಿಶ್ವನಾಥ್ ಬಗ್ಗೆ ಚರ್ಚೆ ಬೇಡ

ಮಾಜಿ ಸಚಿವ ಹೆಚ್‌. ವಿಶ್ವನಾಥ್ ಅವರ ಬಗ್ಗೆ ಚರ್ಚೆ ಮಾಡದಿರುವುದು ಒಳಿತು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಡಾನ್ಸ್ ಬಾರ್, ಬೆಟ್ಟಿಂಗ್ ಮಾಫಿಯಾಗಳು ಸರ್ಕಾರ ಬೀಳಿಸಲು ಕಾರಣ. ಹೀಗೆಂದು ನಾನೂ ಹೇಳಿಕೆ ನೀಡಿದ್ದು ನಿಜ. ಕ್ರಿಕೆಟ್ ಬೆಟ್ಟಿಂಗ್,ಡಾನ್ಸ್ ಬಾರ್ ಮುಚ್ಚಲು ಕ್ರಮ ಕೈಗೊಳ್ಳಲು ಸೂಚಿಸಿದ್ದೆ. ಮೈತ್ರಿ ಸರ್ಕಾರದ ವೇಳೆ ನಾನು ಸೂಚನೆ ನೀಡಿದ್ದೆ. ಅಧಿಕಾರಿಗಳು ರೇಡ್ ಮಾಡಲು ಆರಂಭಿಸಿದ್ದರು. ಅದೇ ಸಂದರ್ಭದಲ್ಲಿ ಮುಂಬೈಗೆ ವಿಶೇಷ ವಿಮಾನಗಳಲ್ಲಿ ಶಾಸಕರು ಹೋಗಿದ್ದರು. ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ವ್ಯಕ್ತಿ ಅವರ ಜೊತೆ ಹೋಗಿದ್ದ. ಅಧಿಕಾರಿಗಳು ರೇಡ್ ಮಾಡಿದಾಗ ಶ್ರೀಲಂಕಾಗೆ ಓಡಿ ಹೋಗಿದ್ದ ವ್ಯಕ್ತಿ ನಂತರ ಶಾಸಕರೊಂದಿಗೆ ಮುಂಬೈಗೆ ಹೋಗಿದ್ದ ಎಂದರು.

ಸಂತ್ರಸ್ತರಿಗೆ ಮನೆ ಹಂಚಿಕೆಯಲ್ಲಿ ಅಕ್ರಮ; ಅಧಿಕಾರಿ ಅಮಾನತಿಗೆ ಸೋಮಣ್ಣ ಆದೇಶ

  Worlds Longest Tunnel - Atal Tunnel ಇದೆ ನೋಡಿ ಜಗತ್ತಿನ ಅತಿ ಉದ್ದದ ಸುರಂಗ ಮಾರ್ಗ | Oneindia Kannada
  ಶಿರಾ ಉಪ ಚುನಾವಣೆ

  ಶಿರಾ ಉಪ ಚುನಾವಣೆ

  ಶಿರಾ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಹೆಸರು ಪೈನಲ್ ಆಗಿದೆ. ಪಕ್ಷದಲ್ಲಿ ಚರ್ಚೆ ಮಾಡಿದ್ದೇವೆ. ಶೀಘ್ರ ಹೆಸರು ಘೋಷಣೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

  ಅಧಿಕಾರದಿಂದ ನನಗೆ ಮತ್ತು ಬರೋದಿಲ್ಲ. ನಾನು ಅವತ್ತು ಮತ್ತಿನಲ್ಲಿ ಮಲಗಿರಲಿಲ್ಲ. 25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೇನೆ. ಕಾಂಪೀಟ್ ವಿತ್ ಚೀನಾ ಎಂದು ನಾನು 9 ಉದ್ಯಮಗಳಿಗೆ ಚಾಲನೆ ನೀಡಿದ್ದೆ. ರಾಜ್ಯಕ್ಕೆ ನನ್ನದೇ ಆದ ಕೊಡುಗೆ ಕೊಟ್ಟಿದ್ದೇನೆ. ಸಾರಾಯಿ ಮತ್ತು ಲಾಟರಿ ನಿಲ್ಲಿಸಿದವನು ನಾನು. ಹೆಚ್. ವಿಶ್ವನಾಥ್ ಎಂತಹ ಅಭಿರುಚಿಯುಳ್ಳ ಮನುಷ್ಯ ಎಂದು ಗೊತ್ತಿದೆ. ಅವರ ಬಗ್ಗೆ ಮಾತನಾಡುವುದು ಬೇಡ ಎಂದರು.

  English summary
  Former CM HDK challenges V Somanna to give detail scandal in Housing Department
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X