ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಭಿವೃದ್ಧಿಯಲ್ಲಿ ತಾರತಮ್ಯ: ಯಲಹಂಕದಲ್ಲಿ ನಿರ್ದಿಷ್ಟ ಧರ್ಮದ ಜನರ ನಿರ್ಲಕ್ಷ: ಎಚ್‌ಡಿಕೆ ಕಿಡಿ

|
Google Oneindia Kannada News

ಬೆಂಗಳೂರು, ಮೇ 21: ಸರ್ವ ಜನಾಂಗವನ್ನು ಸಮಭಾವದಿಂದ ಕಾಣುತ್ತಿದ್ದ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಯಲಹಂಕದಲ್ಲಿ ಅಭಿವೃದ್ಧಿ ವಿಚಾರದಲ್ಲಿ ನಿರ್ಧಿಷ್ಟ ಒಂದು ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ನಗರ ಪ್ರದಕ್ಷಿಣೆ ಎರಡನೇ ದಿನವಾದ ಇಂದು ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಶನಿವಾರ ಬ್ಯಾಟರಾಯನಪುರ, ಹೆಬ್ಬಾಳ ಮತ್ತು ಯಲಹಂಕ ವಿಧಾನಸಭೆ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಡೀ ಬಡಾವಣೆಯನ್ನು ಒಂದು ಸುತ್ತು ಹಾಕಿದರು. ಸಿಲಿಕಾನ್ ಸಿಟಿಯಲ್ಲಿ ಅತಿ ನಿರ್ಲಕ್ಷ್ಯಕ್ಕೆ ಒಳಪಟ್ಟ ಪ್ರದೇಶ ಇದಾಗಿದ್ದು, ರಾಜ್ಯ ಸರಕಾರದ ಮತ್ತು ಸ್ಥಳೀಯ ಶಾಸಕರ ಕಾರ್ಯ ವೈಖರಿಯನ್ನು ಕಟುವಾಗಿ ಟೀಕಿಸಿದರು. ಎಲ್ಲವನ್ನೂ ಸಮಚಿತ್ತದಿಂದ ಆಲಿಸಿದ ಮಾಜಿ ಸಿಎಂ, ಸಂಕಷ್ಟಕ್ಕೆ ಒಳಗಾದ ಜನರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ತಮ್ಮ ಕಡೆಯಿಂದ ಸಹಾಯಹಸ್ತ ಚಾಚಿದರು.

ಹೆಬ್ಬಾಳ, ಯಲಹಂಕ ಹಾಗೂ ಬ್ಯಾಟರಾಯನಪುರಕ್ಕೆ ಭೇಟಿ ಕೊಟ್ಟಿದ್ದೇನೆ. ಬ್ಯಾಟರಾಯನಪುರದಲ್ಲಿ ಕೆಲ ಪ್ರದೇಶಗಳನ್ನು ಕಂಡು ನನಗೆ ಬಹಳ ಆಶ್ಚರ್ಯ ಆಗಿದೆ. ಇಲ್ಲಿನ ಜನರಿಗೆ ಕನಿಷ್ಠ ಮೂಲಸೌಕರ್ಯವೂ ದೊರಕಿಲ್ಲ. ಯಲಹಂಕದಲ್ಲಿ ಒಂದು ಸಮಾಜದ ಜನರು ಹೆಚ್ಚಾಗಿರುವ ಚಿಕ್ಕಬೆಟ್ಟಹಳ್ಳಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇಲ್ಲಿ ರಸ್ತೆಗಳಿಗೆ ಡಾಂಬರು, ಬೀದಿಗಳಿಗೆ ವಿದ್ಯುತ್ ದೀಪ ಸೇರಿ ಯಾವ ಅನುಕೂಲವೂ ಸಿಗುತ್ತಿಲ್ಲ. ಮುಖ್ಯ ಬೀದಿಯಲ್ಲಿ ಅಲ್ಲೊಂದು ಇಲ್ಲೊಂದು ಬೀದಿ ದೀಪ ಕಾಣುತ್ತಿದೆ. ಸಣ್ಣಪುಟ್ಟ ಬೀದಿಗಳಲ್ಲಿ ಜನ ಕತ್ತಲಲ್ಲೇ ಸಂಚಾರ ಮಾಡಬೇಕಿದೆ. ಸ್ಟ್ರೀಟ್ ಲೈಟ್ ಕೂಡ ಹಾಕಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

 ಅಭಿವೃದ್ಧಿ ತಾರಮ್ಯವೇ ದೊಡ್ಡ ದೇಶದ್ರೋಹ

ಅಭಿವೃದ್ಧಿ ತಾರಮ್ಯವೇ ದೊಡ್ಡ ದೇಶದ್ರೋಹ

ಚುನಾವಣೆಯಲ್ಲಿ ಈ ಜನ ಮತ ಕೊಡಲಿಲ್ಲ ಎಂದು ಯಲಹಂಕದಲ್ಲಿ ಈ ಪ್ರದೇಶಕ್ಕೆ ಯಾವುದೇ ಕೆಲಸ ಮಾಡಿಕೊಡುತ್ತಿಲ್ಲ. ಇಲ್ಲಿನ ನಾಗರೀಕರು ತೆರಿಗೆ ಕಟ್ಟುತ್ತಾರೆ. ಆದರೂ ಇವರಿಗೆ ಕನಿಷ್ಟ ಮೂಲ ಸೌಕರ್ಯವೂ ಇಲ್ಲ ಎಂದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದು ಇಲ್ಲ . ಇಷ್ಟೊಂದು ಕೀಳು ಮಟ್ಟದ ರಾಜಕಾರಣ ಮಾಡಬಾರದು. ನಾನೆಂದೂ, ಎಲ್ಲಿಯೂ ಇಂಥ ರಾಜಕೀಯ ನೋಡಿಲ್ಲ. ಸದಾ ಅವರು ದ್ರೋಹಿಗಳು, ಇವರು ದ್ರೋಹಿಗಳು ಎನ್ನುತ್ತಾರೆ. ಆದರೆ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಿರುವುದೇ ದೊಡ್ಡ ದೇಶದ್ರೋಹ. ಇದಕ್ಕಿಂತ ಕೆಟ್ಟ ರಾಜಕೀಯ ಮತ್ತೊಂದಿಲ್ಲ ಎಂದು ಬಿಜೆಪಿ ಹಾಗೂ ಯಲಹಂಕ ಶಾಸಕರ ವಿರುದ್ಧ ಹರಿಹಾಯ್ದರು.

 ಇಂತಹ ರಾಜಕಾರಣ ಎಷ್ಟು ದಿನ

ಇಂತಹ ರಾಜಕಾರಣ ಎಷ್ಟು ದಿನ

ಕೋಗಿಲು ಕ್ರಾಸ್ ಅಪಾರ್ಟ್ಮೆಂಟ್ ವೀಕ್ಷಣೆ ಮಾಡಲು ಹೋದರೆ ಅಲ್ಲಿನ ಜನರನ್ನು ಶಾಸಕರು ಮತ್ತವರ ಪಟಾಲಂ ಹೆದರಿಸುತ್ತಾರಂತೆ. ಯಾರಾದ್ರೂ ನನ್ನನ್ನು ಭೇಟಿಯಾಗಲು ಬಂದರೆ ಅಪಾರ್ಟ್ಮೆಂಟ್ ನೆಲಸಮ ಮಾಡಿಸುತ್ತೇವೆ ಎಂದು ಧಮ್ಕಿ ಹಾಕುತ್ತಾರಂತೆ. ಈ ಬಗ್ಗೆ ನನಗೆ ಮಾಹಿತಿ ಬಂದಿದೆ. ಈ ರೀತಿಯ ರಾಜಕಾರಣ ಎಷ್ಟು ದಿ‌ನ ನಡೆಯುತ್ತೇ?. ಇಲ್ಲಿ ಏನಾದರೂ ಮೂಲ ಸೌಕರ್ಯ ಸಮಸ್ಯೆ ಬಗೆಹರಿಸಿಲ್ಲ ಅಂದರೆ ನಾನೆ ಇಲ್ಲಿಗೆ ಬಂದು ಪ್ರತಿಭಟನೆಗೆ ಕೂರಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

 ನರಕದಲ್ಲಿದ್ದೇವೆ ಅನ್ನಿಸುತ್ತಿದೆ

ನರಕದಲ್ಲಿದ್ದೇವೆ ಅನ್ನಿಸುತ್ತಿದೆ

ಥಣಿಸಂದ್ರದ ಬಿಬಿ ಸ್ಟ್ರಿಂಗ್ ವಿಲ್ಲಾಸ್ ಎಂಬ ಅಪಾರ್ಟ್ ಮೆಂಟ್ ಜನರು ಮಾಜಿ ಮುಖ್ಯಮಂತ್ರಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಈ ಅಪಾರ್ಟ್‌ಮೆಂಟ್‌ನಲ್ಲಿ 52 ಪ್ಲ್ಯಾಟ್ ಗಳಿವೆ. ಬೇಸ್‌ಮೆಂಟ್‌ಗೆ ಮಳೆ ನೀರು ನುಗ್ಗಿದ ಪರಿಣಾಮ ಎಲ್ಲರೂ ಖಾಲಿ ಮಾಡಿ ಹೋಟೆಲ್ ನಲ್ಲಿ ತಂಗಿದ್ದಾರೆ.
" ಪ್ರತಿ ವರ್ಷ ಮಳೆ ಬಂದಾಗ ನೀರು ತುಂಬುತ್ತದೆ. ಇಲ್ಲಿ 52 ಪ್ಲ್ಯಾಟ್‌ ಗಳಿವೆ. ಸಾಕಷ್ಟು ಬಾರಿ ದೂರು ನೀಡಿದ್ರು ನಮ್ಮ ಅಳಲು ಕೇಳೋರಿಲ್ಲ. ಹಿರಿಯರು, ಮಕ್ಕಳು ಮನೆಯಲ್ಲಿ ಇದ್ದಾರೆ. ಸಹಾಯವಾಣಿ ಆ್ಯಪ್ ನಲ್ಲೂ ಹೇಳಿದ್ರು ಕೇಳೋರಿಲ್ಲ. ಸ್ಥಳೀಯ ಶಾಸಕರು ಸ್ಪಂದನೆ ಮಾಡುತ್ತಿಲ್ಲ.
13 ವರ್ಷದಿಂದ ಇದೇ ಅಪಾರ್ಟ್ ಮೆಂಟ್ ಇದ್ದೇವೆ. ಕರೆಂಟ್ ಇಲ್ಲ, ನೀರಿಲ್ಲ. ಹೋಟೆಲ್ ನಲ್ಲಿ ಇರುವ ಪರಿಸ್ಥಿತಿ ಬಂದಿದೆ.
ಬೆಂಗಳೂರು ಸಿಟಿಯಲ್ಲಿ ಬಹಳ ನಿರ್ಲಕ್ಷಿತ ಜಾಗವೆಂದರೆ ಇದೇ. ನರಕದಲ್ಲಿ ಇದ್ದೇವೆ ಅನ್ನಿಸುತ್ತಿದೆ" ಎಂದು ಅವರು ಮಹಿಳೆಯೊಬ್ಬರು ಬೇಸರ ತೋಡಿಕೊಂಡರು.
ಇದನ್ನು ಆಲಿಸಿದ ಹೆಚ್‌ಡಿಕೆ ಈ ಬಗ್ಗೆ ಕೂಡಲೇ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ಅವರಿಗೆ ಭರವಸೆ ನೀಡಿದರು.

 ಸೋಮಣ್ಣ-ಅಶೋಕ್‌ಗೆ ತಿರುಗೇಟು

ಸೋಮಣ್ಣ-ಅಶೋಕ್‌ಗೆ ತಿರುಗೇಟು

ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದ ಅಶೋಕ್‌ ಅವರಿಗೆ ಇಂದು ನಗರ ಜಿಲ್ಲಾಧಿಕಾರಿ ಹಾಗೂ ವಿಶೇಷ ಜಿಲ್ಲಾಧಿಕಾರಿಗಳ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ನೆನೆದು ತಿರುಗೇಟು ನೀಡಿದರು. " ಕಂದಾಯ ಸಚಿವರೇ ನಿಮ್ಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏನು ನಡೀತಿದೆ ನೋಡಿ. ಐದು ಲಕ್ಷ ಭ್ರಷ್ಟಾಚಾರದ ಹಣ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಸೋಮಣ್ಣ ಅವರೇ ನನಗೆ ಆರೋಗ್ಯದ ಬಗ್ಗೆ ಸಲಹೆ ಕೊಡ್ತಿಯಲ್ಲಪ್ಪ? ನೋಡಪ್ಪ, ಲೂಟಿ, ದರೋಡೆ ನೋಡಲು ಚಂಬಲ್ ಕಣಿವೆಗೆ ಅಥವಾ ಬಿಹಾರಕ್ಕೆ ಹೋಗಬೇಕಿಲ್ಲ,ಬೆಂಗಳೂರಿನಲ್ಲೇ ನೋಡಬಹುದು. ಸಲಹೆ ಕೊಡುವ ಬದಲು, ಜನರ ಬಳಿ ಬಂದು ನೋವನ್ನು ಆಲಿಸಿ ಎಂದು ಕುಟುಕಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಟಿ.ಎ.ಶರವಣ, ರಮೇಶ್ ಗೌಡ, ಜೆಡಿಎಸ್ ನಗರ ಅಧ್ಯಕ್ಷ ಆರ್. ಪ್ರಕಾಶ್, ಯಲಹಂಕ ಜೆಡಿಎಸ್ ಅಧ್ಯಕ್ಷ ಕೃಷ್ಣಪ್ಪ ಹಾಗೂ ಸ್ಥಳೀಯ ಜೆಡಿಎಸ್ ಮುಖಂಡರು ಹಾಜರಿದ್ದರು.

English summary
HD kumaraswamy to visit some of Rain affected areas in Bengaluru on saturday and listened to the problems of the people there. Lot of People told their problems in front of former chief minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X