ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮ್ಮಿಶ್ರ ಸರಕಾರದ ಶಾಕಿಂಗ್ ಘಟನೆಯನ್ನು ಬಹಿರಂಗಗೊಳಿಸಿದ ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಅ 29: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ವೇಳೆ ನಡೆದ ಶಾಕಿಂಗ್ ಘಟನೆಯೊಂದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಚುನಾವಣಾ ಪ್ರಚಾರದ ವೇಳೆ ನೆನೆಪಿಸಿಕೊಂಡಿದ್ದಾರೆ.

"ಕಾಂಗ್ರೆಸ್‌ ಜೊತೆಗಿನ ಸರಕಾರದ ವೇಳೆ ಕಚೇರಿಗೆ ತಡವಾಗಿ ಹೋಗಿದ್ದಕ್ಕೆ ಕಾಂಗ್ರೆಸ್‌ ಶಾಸಕರೊಬ್ಬರು ಮುನಿಸಿ ಕೊಂಡಿದ್ದರು. ಅಷ್ಟು ಕಷ್ಟ ಸಹಿಸಿಕೊಂಡು ಮೈತ್ರಿ ಸರಕಾರದಲ್ಲಿ ಕೆಲಸ ಮಾಡಿದ್ದೇನೆ" ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಯಾರ್ರಿ ಅವನು ಮುನಿರತ್ನ? ನಮಗೆ ಗಾಡ್‌ಫಾದರ್‌ ಆಗೋದಕ್ಕೆ!ಯಾರ್ರಿ ಅವನು ಮುನಿರತ್ನ? ನಮಗೆ ಗಾಡ್‌ಫಾದರ್‌ ಆಗೋದಕ್ಕೆ!

ರಾಜರಾಜೇಶ್ವರಿ ನಗರ ವ್ಯಾಪ್ತಿಯ ಲಕ್ಷ್ಮೀದೇವಿ ವಾರ್ಡ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ನಡೆಸಿ ಮಾತನಾಡಿದ ಎಚ್ಡಿಕೆ, "ಕೃಷ್ಣಾದಲ್ಲಿ ಜನರ ಸಮಸ್ಯೆ ಆಲಿಸಿ, ನನ್ನ ಕಚೇರಿಗೆ ಹೋಗಿದ್ದೆ. ಆಗ ನನ್ನ ಕಚೇರಿಗೆ ಬಂದ ಕಾಂಗ್ರೆಸ್‌ ಶಾಸಕರೊಬ್ಬರು ನಿಮಗೆ ಎಷ್ಟು ಹೊತ್ತು ಕಾಯೋದು ಎಂದು ಅವರು ತಂದಿದ್ದ 10-12 ಪತ್ರಗಳನ್ನು ಇಸ್ಪೀಟ್ ಎಲೆಯಂತೆ ಬಿಸಾಡಿದ್ದರು" ಎಂದು ಆ ಘಟನೆಯನ್ನು ನೆನಪಿಸಿಕೊಂಡರು.

Former CM HD Kumaraswamy Revealed Incident During Coalition Government With Congress

"ಕಾಂಗ್ರೆಸ್ ಶಾಸಕರಿಗೆ ಬೇಕಾಗಿದ್ದು ತಮ್ಮ ಸ್ವಂತ ಲಾಭ. ಜನ ಕಲ್ಯಾಣವಲ್ಲ. ಕಾಂಗ್ರೆಸ್ಸಿಗರು ನೀಡಿದ ಕಿರುಕುಳದ ನಡುವೆಯೂ ರೈತರ ಹಿತ ಕಾಯಲು 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದೆ. ಒಬ್ಬ ಮುಖ್ಯಮಂತ್ರಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದರೆ ಅದು ನಾನು ಮಾತ್ರ" ಎಂದು ಕುಮಾರಸ್ವಾಮಿ ಹೇಳಿದರು.

"ಅಂತಹ ಸ್ಥಿತಿಯಲ್ಲಿ ಕಾಂಗ್ರೆಸ್‌ನವರು ನನ್ನನ್ನು ಇಟ್ಟಿದ್ದರು. ಇನ್ನು, ಮೋದಿ ಎಚ್‌ಎಎಲ್‌ನ್ನು ಮಾರುವುದಕ್ಕೆ ಹೊರಟಿದ್ದಾರೆ. ಅದಾನಿಗೆ 6 ವಿಮಾನ ನಿಲ್ದಾಣಗಳನ್ನು ನೀಡಿದ್ದಾರೆ. ಮುಖೇಶ್‌ ಅಂಬಾನಿ ಆದಾಯ ಗಂಟೆಗೆ 94 ಕೋಟಿ ರೂ. ಇದೆಯಂತೆ. ಅವರ ಸಲಹೆಯನ್ನು ತೆಗೆದುಕೊಂಡು ಪ್ರತಿ ಕುಟುಂಬಕ್ಕೂ ದಿನಕ್ಕೆ ನೂರು ರೂಪಾಯಿ ಬರುವಂತೆ ಮಾಡಬಹುದಲ್ಲ" ಎಂದು ಕುಮಾರಸ್ವಾಮಿ ಹೇಳಿದರು.

ಪಶ್ಚಿಮ ಪದವೀಧರ ಕ್ಷೇತ್ರ ಪರಿಷತ್ ಚುನಾವಣೆ: ಜೆಡಿಎಸ್ ಯುಟರ್ನ್ ಪಶ್ಚಿಮ ಪದವೀಧರ ಕ್ಷೇತ್ರ ಪರಿಷತ್ ಚುನಾವಣೆ: ಜೆಡಿಎಸ್ ಯುಟರ್ನ್

"ಬೆಂಗಳೂರು ನಗರದ ಅಭಿವೃದ್ಧಿಗೆ ದುಡ್ಡು ತಂದವರು ಯಾರೋ, ಹೆಸರು ಮಾಡ್ಕೊಂಡಿದ್ದು ಯಾರೋ, ಐಟಿ ಸೆಕ್ಟರ್ ಗೆ ಹೊಸ ಆಯಾಮವನ್ನ ನೀಡಿದ್ದು ದೇವೇಗೌಡರು, ದೇವೇಗೌಡ ಸ್ಕೀಮ್ ಅಂತ ದಕ್ಷಿಣ ಆಫ್ರಿಕಾದಲ್ಲಿ ಆಕ್ಸಲರೆಟೆಡ್‌ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. 1988ರಲ್ಲಿ ನಂದಿನಿ‌ ಬಡಾವಣೆಯನ್ನು ಒಡಿಬೇಕು ಎಂಬ ಆದೇಶ ಬಂದಾಗ ನಿಮ್ಮ ನೆರವಿಗೆ ಬಂದಿದ್ದು ದೇವೇಗೌಡರು" ಎಂದು ಕುಮಾರಸ್ವಾಮಿ ಹೇಳಿದರು.

English summary
Former CM HD Kumaraswamy Revealed Incident During Coalition Government With Congress,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X