ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಪಿಸಿಸಿ ಅಧ್ಯಕ್ಷರ ತಮ್ಮನಿಗೆ ಅಂದು ಜ್ಞಾನ ಇರಲಿಲ್ಲವೇ? ಕುಮಾರಸ್ವಾಮಿ ಪ್ರಶ್ನೆ

|
Google Oneindia Kannada News

ಬೆಂಗಳೂರು, ಅ 16: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ದ ಹರಿಹಾಯುತ್ತಿರುವ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ.ಸುರೇಶ್ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

"ಈ ಭಾಗದ ಸಂಸದರು ಆಗಿರುವ ಅಧ್ಯಕ್ಷರ ತಮ್ಮ, ಬಿಜೆಪಿ ಅಭ್ಯರ್ಥಿ ಮುನಿರತ್ನ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. 250 ಕೋಟಿ ರೂಪಾಯಿಯ ಮೊತ್ತದ ಕಾಮಗಾರಿಯನ್ನು, ನಡೆಸದೆಯೇ ಬಿಲ್ ನೀಡಿ, ಹಣ ಹೊಡೆದಿದ್ದಾರೆ ಎಂದು".

ಆರ್.ಆರ್. ನಗರ ಚುನಾವಣೆಯ ಮೂಲಕ ಜೆಡಿಎಸ್ ಸಮಾಧಿ ಮಾಡಲು ಹೊರಟ್ರಾ ಡಿಕೆಶಿ!ಆರ್.ಆರ್. ನಗರ ಚುನಾವಣೆಯ ಮೂಲಕ ಜೆಡಿಎಸ್ ಸಮಾಧಿ ಮಾಡಲು ಹೊರಟ್ರಾ ಡಿಕೆಶಿ!

"ಆಗ ಮುನಿರತ್ನ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರು. ಆಗ ಈ ಬಗ್ಗೆ ಚಕಾರವೆತ್ತದ ಸಂಸದರು, ಈಗ ಅಪವಾದ ಹೊರಿಸುತ್ತಿರುವುದು ಏಕೆ. ಅಂದು ಅವರಿಗೆ ಬುದ್ದಿ ಇರಲಿಲ್ಲವೇ"ಎಂದು, ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ಅವರನ್ನು ಪ್ರಶ್ನಿಸಿದ್ದಾರೆ.

Former CM HD Kumaraswamy Reply To DK Suresh Allegation Against Munirathna

"ಕೆಪಿಸಿಸಿ ಅಧ್ಯಕ್ಷರು ಮುನಿರತ್ನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ಎಂದು ಈಗ ಆಗ್ರಹಿಸಿದ್ದಾರೆ. ಆಗ ಅವರ ಜೊತೆಗೇ ಕೂತಿತ್ತಾಗ, ಜ್ಞಾನ ಇರಲಿಲ್ಲವೇ"ಎಂದು ಕುಮಾರಸ್ವಾಮಿ, ಡಿಕೆಶಿ ಸಹೋದರರ ಮೇಲೆ ಕಿಡಿಕಾರಿದ್ದಾರೆ.

ಜೆಡಿಎಸ್ಸಿನ ಯಾವ ನಾಯಕರೂ ನಾಮಪತ್ರ ಸಲ್ಲಿಸುವ ವೇಳೆ ನೂರು ಮೀಟರ್ ಒಳಗೆ ಬರಲಿಲ್ಲ. ನಾನು, ನಗರ ಘಟಕದ ಅಧ್ಯಕ್ಷ ಪ್ರಕಾಶ್ ಮತ್ತು ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಲು ಹೋಗಿದ್ದೆವು. ಶರವಣ, ಅಪ್ಪಾಜಿ ಗೌಡ್ರು ಬಂದಿದ್ದರೂ, ಅವರನ್ನು ನಾಮಪತ್ರ ಸಲ್ಲಿಸುವ ಜಾಗಕ್ಕೆ ಬರುವುದು ಬೇಡ ಎಂದು ನಾನೇ ಹೇಳಿದ್ದು. ಅವರೆಲ್ಲಾ ಬ್ಯಾರಿಕೇಡ್ ನಿಂದ ಹೊರಗಿದ್ದರು"ಎಂದು ಕುಮಾರಸ್ವಾಮಿ ಹೇಳಿದರು.

ಆರ್.ಆರ್.ನಗರ ಚುನಾವಣೆ: ಗೆದ್ದರೆ ಒಂದು, ಸೋತರೆ ಇನ್ನೊಂದು: ಉಭಯ ಸಂಕಟದಲ್ಲಿ ಸಿಎಂ ಬಿಎಸ್ವೈಆರ್.ಆರ್.ನಗರ ಚುನಾವಣೆ: ಗೆದ್ದರೆ ಒಂದು, ಸೋತರೆ ಇನ್ನೊಂದು: ಉಭಯ ಸಂಕಟದಲ್ಲಿ ಸಿಎಂ ಬಿಎಸ್ವೈ

"ನಾವು ನಾಮಪತ್ರ ಸಲ್ಲಿಸಲು ಹೋದಾಗ, ಬಿಜೆಪಿಯವರು ಹೊರಗೆ ಬರುತ್ತಿದ್ದರು. ಅವರು ಕೂಡಾ ಇದ್ದಿದ್ದು ಮೂರೇ ಜನ. ಅದರಲ್ಲಿ ಕಾಂಗ್ರೆಸ್ಸಿನವರು ಜಾತ್ರೆ ಮಾಡಿಕೊಂಡು ಇದ್ದವರು. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಅದಕ್ಕೆ ಕ್ರಮ ತೆಗೆದುಕೊಂಡರೆ, ಅದನ್ನೂ ರಾಜಕೀಯವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗುತ್ತಿದೆ"ಎಂದು ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.

Recommended Video

Chris Gayle ಮೊದಲ ಪಂದ್ಯದಲ್ಲೇ ಸುನಾಮಿ | Oneindia Kannada

English summary
Former CM HD Kumaraswamy Reply To DK Suresh Allegation Against Munirathna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X