ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಭ್ರಷ್ಟ ಸಚಿವರ ಜೊತೆ ಸಿಎಂ ಬೊಮ್ಮಾಯಿ ಬೆಂಗಳೂರು ಸಿಟಿ ರೌಂಡ್'

|
Google Oneindia Kannada News

ಬೆಂಗಳೂರು, ಮೇ 20: ನಗರದಲ್ಲಿ ಎರಡು ದಿನಗಳ ಕೆಳಗೆ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ಕ್ಷೇತ್ರಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದರು. ಇಂದು ಬೆಳಗ್ಗೆ 7.30ಕ್ಕೆ ಕುಮಾರಸ್ವಾಮಿ ಬೆಂಗಳೂರು ಸಿಟಿ ರೌಂಡ್ಸ್ ಆರಂಭಿಸಿದ್ದಾರೆ.

ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ನೆಲಗದರನಹಳ್ಳಿ ರಸ್ತೆಯ ರುಕ್ಮಿಣಿನಗರ, ಪೀಣ್ಯ ಕೈಗಾರಿಕಾ ಪ್ರದೇಶದ ಸಿದ್ದಾರ್ಥ ಕಾಲೋನಿ, ರಾಜಗೋಪಾಲ ನಗರದ ಬಸಪ್ಪನ ಕಟ್ಟೆ, ಚಿಕ್ಕಬಾಣಾವರ ಪುರಸಭೆ ಎದರರಿನ ಕೆರೆ ವೀಕ್ಷಣೆಯನ್ನು ಕುಮಾರಸ್ವಾಮಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ದಾಸರಹಳ್ಳಿ ಶಾಸಕ ಮಂಜುನಾಥ್ ಮತ್ತಿತರ ಜೆಡಿಎಸ್ ಮುಖಂಡರು ಹಾಜರಿದ್ದರು.

ಹೈಕಮಾಂಡ್ ಬುಲಾವ್, ಸಿಎಂ ದೆಹಲಿಗೆ ದೌಡು: ಈ 3 ಕಾರಣಕ್ಕೆ?ಹೈಕಮಾಂಡ್ ಬುಲಾವ್, ಸಿಎಂ ದೆಹಲಿಗೆ ದೌಡು: ಈ 3 ಕಾರಣಕ್ಕೆ?

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, "ಬೆಂಗಳೂರಿನ ಈಗಿನ ಪರಿಸ್ಥಿತಿಗೆ ಬಿಜೆಪಿ ಸರಕಾರ ಮತ್ತು ಏಳು ಮಂದಿ ಭ್ರಷ್ಟ ಸಚಿವರು ಕಾರಣ. ಬರೀ ಬಿಬಿಎಂಪಿಯನ್ನು ದೂರುವುದು ಸರಿಯಲ್ಲ"ಎಂದು ಹೇಳಿದರು.

'ಬಿಎಸ್ವೈ ಹೇಳಿದಂತೆ ಬೆಂಗಳೂರಿನ ಚಿತ್ರಣವೇ ಬದಲು': ಸಿದ್ದರಾಮಯ್ಯ ವ್ಯಂಗ್ಯ'ಬಿಎಸ್ವೈ ಹೇಳಿದಂತೆ ಬೆಂಗಳೂರಿನ ಚಿತ್ರಣವೇ ಬದಲು': ಸಿದ್ದರಾಮಯ್ಯ ವ್ಯಂಗ್ಯ

"ಬಿಪ್ಯಾಕಿನ ಮೋಹನದಾಸ್ ಪೈ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಫೋಟೋ ಸಮೇತ ಸೇವ್ ಬೆಂಗಳೂರು ಫ್ರಂ ಕರಪ್ಟ್ ಬಿಬಿಎಂಪಿ ಆಫೀಸರ್ ಎಂದು ಟ್ವೀಟ್ ಮಾಡಿದ್ದರು. ಕರಪ್ಟ್ ಬಿಜೆಪಿ ಸರಕಾರ ಎಂದು ಆ ಫೋಟೋವನ್ನು ಮೋದಿ ಮುಖಕ್ಕೆ ಕಳುಹಿಸಬೇಕಾಗಿತ್ತು"ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.

 ಮೋಹನದಾಸ್ ಪೈ ಅವರು ಕೆರೆಯ ಬಗ್ಗೆ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ

ಮೋಹನದಾಸ್ ಪೈ ಅವರು ಕೆರೆಯ ಬಗ್ಗೆ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ

"ಮೋಹನದಾಸ್ ಪೈ ಅವರು ಕೆರೆಯ ಬಗ್ಗೆ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ಅದನ್ನು ಅಕ್ಕಪಕ್ಕದ ರಾಜ್ಯದವರು ದಾವೋಸ್ ನಲ್ಲಿ ಪ್ರದರ್ಶನ ಮಾಡುತ್ತಾರೆ. ಮುಖ್ಯಮಂತ್ರಿಗಳು ಕೇಂದ್ರದ ನಿಯೋಗದೊಂದಿಗೆ ಅಲ್ಲಿಗೆ ಪ್ರಯಾಣಿಸುತ್ತಿದ್ದಾರೆ. ಅಲ್ಲಿಂದ ಏನು ಬಂಡವಾಳ ತರುತ್ತಾರೆ, ಬಿಬಿಎಂಪಿಯನ್ನು ನಡೆಸುತ್ತಿರುವವರು ಬಿಜೆಪಿ ಸರಕಾರವಲ್ಲವೇ? ನಗರಾಭಿವೃದ್ದಿ ಇಲಾಖೆ ಮತ್ತು ಬೆಂಗಳೂರು ಉಸ್ತುವಾರಿ ಮುಖ್ಯಮಂತ್ರಿಗಳೇ ಇದ್ದಾರೆ"ಎಂದು ಎಚ್.ಡಿ.ಕುಮಾರಸ್ವಾಮಿಯವರು ಸರಕಾರದ ವಿರುದ್ದ ಕಿಡಿಕಾರಿದರು.

 ಲೂಟಿ ಹೊಡೆದ ಮಂತ್ರಿಗಳ ಕ್ಷೇತ್ರದಲ್ಲಿ ಸಿಎಂ ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ

ಲೂಟಿ ಹೊಡೆದ ಮಂತ್ರಿಗಳ ಕ್ಷೇತ್ರದಲ್ಲಿ ಸಿಎಂ ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ

"ಒಂದೊಂದು ಕ್ಷೇತ್ರಕ್ಕೆ ಒಂದೂವರೆ ಸಾವಿರ ಕೋಟಿ ಅನುದಾನವನ್ನು ಕಳೆದ ಹತ್ತು ವರ್ಷಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಅವರು ಮಾಡಿರುವಂತಹ ಲೂಟಿ ಕೆಲಸಕ್ಕೋಸ್ಕರ ಅವರನ್ನು ಮಂತ್ರಿಗಳನ್ನಾಗಿ ಇಟ್ಟು ಕೊಳ್ಳಲಾಗಿದೆ. ಬೆಂಗಳೂರು ವ್ಯಾಪ್ತಿಯ ಏಳು ಜನ ಮಂತ್ರಿಗಳಿದ್ದಾರೆ, ಸಿಎಂ ಬಳಿ ಸರಿಯಾದ ಮಾಹಿತಿಯಿಲ್ಲ. ವರ್ಕ್ ಆರ್ಡರ್ ಕೊಟ್ಟಾಗ ಲೂಟಿ ಹೊಡೆಯಲಾಗಿದೆ. ಸಿಎಂ ಏನು ಕ್ರಮ ತೆಗೆದುಕೊಂಡರು. ಇವತ್ತು ಲೂಟಿ ಹೊಡೆದ ಮಂತ್ರಿಗಳ ಕ್ಷೇತ್ರದಲ್ಲಿ ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ"ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

 ಸಚಿವರು ನಿಮ್ಮ ಜೊತೆಗಿದ್ದರೆ ಸಾರ್ವಜನಿಕರಿಂದ ಏನು ಮಾಹಿತಿ ಪಡೆಯಲು ಸಾಧ್ಯ?

ಸಚಿವರು ನಿಮ್ಮ ಜೊತೆಗಿದ್ದರೆ ಸಾರ್ವಜನಿಕರಿಂದ ಏನು ಮಾಹಿತಿ ಪಡೆಯಲು ಸಾಧ್ಯ?

"ಕಾಟಾಚಾರದ ನಗರ ಪ್ರದಕ್ಷಿಣೆ, ಭ್ರಷ್ಟ ಸಚಿವರೊಂದಿಗೆ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಅಂತಹ ಸಚಿವರು ಜೊತೆಗಿದ್ದರೆ ಸಾರ್ವಜನಿಕರಿಂದ ಏನು ಮಾಹಿತಿ ಪಡೆಯಲು ಸಾಧ್ಯ? ಅವರು ಮಾಡಿರುವಂತಹ ಲೂಟಿಯನ್ನು ಜನರು ಹೇಳುತ್ತಾರಾ? ರಾಜ್ಯ ಮತ್ತು ಬೆಂಗಳೂರು ನಗರವನ್ನು ಸಂಪೂರ್ಣವಾಗಿ ನುಂಗು ಹಾಕುವ ಮೊದಲು, ಇಲ್ಲಿನ ಪರಿಸ್ಥಿತಿ ಸರಿಪಡಿಸಿ ಎಂದು ಮೋದಿಯವರಲ್ಲಿ ಮೋಹನದಾಸ್ ಪೈ ಅವರು ಕೇಳಿಕೊಳ್ಳಲಿ"ಎಂದು ಕುಮಾರಸ್ವಾಮಿ ಮನವಿ ಮಾಡಿದರು.

 ಬೆಂಗಳೂರು ನಗರ ಪ್ರದಕ್ಷಿಣೆ ವಿಚಾರದಲ್ಲಿ ನಾನು ರಾಜಕೀಯ ಬೆರೆಸುತ್ತಿಲ್ಲ

ಬೆಂಗಳೂರು ನಗರ ಪ್ರದಕ್ಷಿಣೆ ವಿಚಾರದಲ್ಲಿ ನಾನು ರಾಜಕೀಯ ಬೆರೆಸುತ್ತಿಲ್ಲ

"ಬೆಂಗಳೂರು ನಗರ ಪ್ರದಕ್ಷಿಣೆ ವಿಚಾರದಲ್ಲಿ ನಾನು ರಾಜಕೀಯ ಬೆರೆಸುತ್ತಿಲ್ಲ. ಎರಡು ದಿನಗಳ ಕೆಳಗೆ ಎಸ್.ಎಂ.ಕೃಷ್ಣ ಅವರು ಬ್ಯ್ರಾಂಡ್ ಬೆಂಗಳೂರು ಹಾಳಾಗುತ್ತಿದೆ ಎಂದು ಪತ್ರ ಬರೆದಿದ್ದಾರೆ. ಯಾರಿಂದ ಹಾಳಾಗುತ್ತಿದೆ? ಸಿದ್ದರಾಮಯ್ಯನವರು ನನ್ನ ಅವಧಿಯಲ್ಲಿ ಅತಿಹೆಚ್ಚಿನ ಅನುದಾನ ನೀಡಲಾಗಿತ್ತು ಎಂದು ಹೇಳುತ್ತಾರೆ. ಅದರಲ್ಲಿ ಮೂಲಭೂತ ಸೌಲಭ್ಯಕ್ಕೆ ಹೋದ ಹಣವೆಷ್ಟು" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Recommended Video

ಬೆಂಗಳೂರಿನಲ್ಲಿ ಭಾರೀ ಮಳೆ , ಸಿದ್ದರಾಮಯ್ಯ ಹೇಳಿದ್ದೇನು | OneIndia Kannada

English summary
Former CM H D Kumaraswamy Criticized CM Bommai During His Bengaluru Rounds. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X