• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಾತನಾಗುತ್ತಿರುವ ಖುಷಿಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಜೂನ್ 21: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮನೆಯಲ್ಲಿ ಇಂದು ಎರಡು ಖುಷಿಯ ಕ್ಷಣಗಳಿಗೆ ಸಂಭ್ರಮಿಸಲಾಗುತ್ತಿದೆ.

   ತಂದೆ ಆಗ್ತಿದ್ದಾರೆ Nikhil Kumaraswamy | Filmibeat Kannada

   ಎಚ್.ಡಿ. ಕುಮಾರಸ್ವಾಮಿ ಪುತ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಅವರು ತಂದೆ- ತಾಯಿಯಾಗುತ್ತಿರುವ ಸಂತೋಷದ ವಿಚಾರ ಗೌಡರ ಮನೆಯಿಂದ ಬಂದಿದೆ.

   ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಈಗ ಐದು ತಿಂಗಳ ಗರ್ಭಿಣಿಯಾಗಿದ್ದು, ಸೋಮವಾರದಂದೇ ರೇವತಿಯ ಹುಟ್ಟುಹಬ್ಬವಿದ್ದು, ಎರೆಡೆರಡು ಸಂತೋಷದ ವಿಚಾರಗಳಿಗೆ ಮನೆಯವರೆಲ್ಲರೂ ಸಂಭ್ರಮಿಸುತ್ತಿದ್ದಾರೆ.

   ಮಾಜಿ ಸಿಎಂ ಕುಮಾರಸ್ವಾಮಿಯವರು ಖಾಸಗಿ ಸುದ್ದಿ ಮಾಧ್ಯಮಕ್ಕೆ ತಾವು ಅಜ್ಜ ಅಗುತ್ತಿರುವ ಸಂತೋಷದ ಸುದ್ದಿ ಖಚಿತ ಪಡಿಸಿದ್ದಾರೆ. ರಾಜಕಾರಣಿ ಕಂ ನಟ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ತಂದೆ- ತಾಯಿ ಆಗುತ್ತಿರುವ ಸಂಭ್ರಮದಲ್ಲಿದ್ದು, ಪತ್ನಿಯ ಹುಟ್ಟುಹಬ್ಬಕ್ಕೆ ನಿಖಿಲ್ ವಿಭಿನ್ನವಾಗಿ ಶುಭ ಹಾರೈಸಿದ್ದಾರೆ.

   ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆಯ ಮೆಹಂದಿ ಸಂದರ್ಭದಲ್ಲಿ ಸೆರೆ ಹಿಡಿದ ಫೋಟೋವನ್ನು ಹಂಚಿಕೊಂಡಿದ್ದು, "ಹ್ಯಾಪಿ ಬರ್ತಡೇ ಮೈ ಲವ್' ಎಂದು ಬರೆದುಕೊಂಡಿದ್ದಾರೆ. ನಿಖಿಲ್ ತಂದೆಯಾಗುತ್ತಿರುವ ವಿಚಾರ ತಿಳಿದು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಕೂಡ ಶುಭ ಹಾರೈಸಿದ್ದಾರೆ.

   Former CM H.D Kumaraswamy Is Becoming A Grandfather

   ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ಅಂದರೆ, ಏಪ್ರಿಲ್ 17, 2020ರಂದು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ರಾಮನಗರ ಜಿಲ್ಲೆ ಬಿಡದಿ ತೋಟದ ಮನೆಯಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

   ಒಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುತ್ತಾತ ಆಗುತ್ತಿದ್ದರೆ, ಎಚ್.ಡಿ. ಕುಮಾರಸ್ವಾಮಿ ತಾತ ಆಗುತ್ತಿರುವ ಸಂಭ್ರಮದಲ್ಲಿದ್ದಾರೆ.

   English summary
   JDS youth unit president Nikhil Kumaraswamy wife Revathi is five months pregnant.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X