ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸೌಧದಲ್ಲಿ ಕೆಲಸ ಗಿಟ್ಟಿಸಿದ್ದ ಬಿಎಂಟಿಸಿ ಡ್ರೈವರ್‌ಗೆ ಜೈಲು!

|
Google Oneindia Kannada News

ಬೆಂಗಳೂರು, ಜನವರಿ 17 : ಫೋರ್ಜರಿ ಸಹಿ ಮಾಡಿ, ನಕಲಿ ದಾಖಲೆಗಳನ್ನು ಕೊಟ್ಟು ವಿಧಾನಸೌಧದಲ್ಲಿ ಕೆಲಸ ಪಡೆದಿದ್ದ ವ್ಯಕ್ತಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಬಿಎಂಟಿಸಿಯಲ್ಲಿದ್ದ ಈತ ಅಮಾನತುಗೊಂಡ ಬಳಿಕ ವಿಧಾನಸೌಧದಲ್ಲಿ ಕೆಲಸಕ್ಕೆ ಸೇರಿದ್ದ.

8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಎಂ.ಮಹೇಶ್ ಬಾಬು ಅವರು ವೈ.ಮಂಜುನಾಥ್ ಎಂಬ ವ್ಯಕ್ತಿಗೆ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿದ್ದಾರೆ. ನಕಲಿ ಜನನ ಪ್ರಮಾಣ ಪತ್ರ, ನಕಲಿ ದಾಖಲೆಗಳನ್ನು ಕೊಟ್ಟು ಮಂಜುನಾಥ್ ಕೆಲಸ ಗಿಟ್ಟಿಸಿದ್ದರು.

ಫೋರ್ಜರಿ ಪ್ರಕರಣ: 20 ವರ್ಷ ನಂತರ ನಟಿಗೆ ಶಿಕ್ಷೆ ಪ್ರಕಟ!

Forgery case : Secretariat driver gets jail

ಮಂಜುನಾಥ್ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಮತ್ತು ಸರ್ಕಾರಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆ ನಿಡಬೇಕು ಎಂದು ಸರ್ಕಾರಿ ಅಭಿಯೋಜಕ ಜಿ.ಎನ್.ಅರುಣ್ ವಾದ ಮಂಡನೆ ಮಾಡಿದ್ದರು.

ಬಿಎಂಟಿಸಿಯಲ್ಲಿ ಸಿಬ್ಬಂದಿ ಹಾಜರಾತಿ ನಿಗಾಕ್ಕೆ ಬರಲಿದೆ ಹೊಸ ವ್ಯವಸ್ಥೆಬಿಎಂಟಿಸಿಯಲ್ಲಿ ಸಿಬ್ಬಂದಿ ಹಾಜರಾತಿ ನಿಗಾಕ್ಕೆ ಬರಲಿದೆ ಹೊಸ ವ್ಯವಸ್ಥೆ

ಏನಿದು ಪ್ರಕರಣ : ವೈ.ಮಂಜುನಾಥ್ 1997ರಿಂದ 2002ರ ತನಕ ಬಿಎಂಟಿಸಿಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಅಸಭ್ಯ ವರ್ತನೆ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು.

2002ರ ಜುಲೈ 30ರಂದು ವಿಧಾನಸೌಧದಲ್ಲಿ ಚಾಲಕರ ಕೆಲಸಕ್ಕೆ ಅರ್ಜಿ ಹಾಕಿದ್ದರು. ನವೆಂಬರ್ 23, 1962ರಲ್ಲಿ ಜನಿಸಿದ್ದ ಅವರು, ಆಗಸ್ಟ್ 11, 1962ರಲ್ಲಿ ಹುಟ್ಟಿದ್ದಾಗಿ ಜನ್ಮ ದಿನಾಂಕ ಬದಲಾವಣೆ ಮಾಡಿದ್ದರು. 1997ರಿಂದ 2001ರ ತನಕ ಖಾಸಗಿ ಕಂಪನಿಯಲ್ಲಿ ಚಾಲಕನಾಗಿದ್ದೆ ಎಂದು ಫೋರ್ಜರಿ ಮಾಡಿದ ಅನುಭವ ಪತ್ರ ಸೇರಿದಂತೆ ಇತರ ದಾಖಲೆ ಒದಗಿಸಿದ್ದರು.

ಓಲಾ ಮಾದರಿ ಸೇವೆ ನೀಡಲು ಬಿಎಂಟಿಸಿ ಸಿದ್ಧತೆ, ಹೇಗೆ ವ್ಯವಸ್ಥೆ?ಓಲಾ ಮಾದರಿ ಸೇವೆ ನೀಡಲು ಬಿಎಂಟಿಸಿ ಸಿದ್ಧತೆ, ಹೇಗೆ ವ್ಯವಸ್ಥೆ?

ವಿಧಾನಸೌಧದಲ್ಲಿ ಕೆಲಸ ಸಿಕ್ಕ ಮೂರು ವರ್ಷದ ಬಳಿಕ ಮಂಜುನಾಥ್ ಮಾಡಿದ ಫೋರ್ಜರಿ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಗೆ ವಿಧಾನಸೌಧದ ಸಿಬ್ಭಂದಿ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದಾಗ ಫೋರ್ಜರಿ ಮಾಡಿರುವುದು ಪತ್ತೆಯಾಗಿತ್ತು.

ಪ್ರಕರಣದ ಕುರಿತು 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 4 ವರ್ಷಗಳ ಜೈಲು ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿದೆ.

English summary
Bengaluru 8th chief metropolitan magistrate court sentenced four year's of imprisonment and Rs 20,000 fine for 56 year old Y. Manjunath for forging his date of birth and hiding his suspension at the BMTC to get the secretariat job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X