ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಖ್ಯಾತ ಕಾಡುಗಳ್ಳರ ಜಾಲ ಭೇದಿಸಿದ ಜಾಲಹಳ್ಳಿ ಪೊಲೀಸರು

|
Google Oneindia Kannada News

ಬೆಂಗಳೂರು, ಫೆಬ್ರವರಿ 27; ಕಾಡುಪ್ರಾಣಿಗಳನ್ನು ಭೇಟೆಯಾಡಿ ಅವುಗಳ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಕುಖ್ಯಾತ ಕಾಡುಗಳನ್ನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆತನ ಜತೆ ಇದ್ದ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ತಮಿಳುನಾಡು ತಿರುಪತೂರು ಜಿಲ್ಲೆಯ ಮಂಗಳಂ ಎಂಬ ಗ್ರಾಮದ ಪ್ರಭು ಅಲಿಯಾಸ್ ಕೃಷ್ಣ ಎಂಬುವನೇ ಬಂಧಿತ ಆರೋಪಿ. ಜಾಳಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯ ರೂಬಿಕ್ಸ ಅಪಾರ್ಟ್‌ಮೆಂಟಿನ ಬಳಿ ಜಿಂಕೆ ಚರ್ಮ ಹಾಗೂ ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಎನ್‌ಕೌಂಟರ್; ರೌಡಿ ಭರತನ ಗ್ಯಾಂಗ್‌ಗೆ ಪೊಲೀಸರ ಶೋಧಎನ್‌ಕೌಂಟರ್; ರೌಡಿ ಭರತನ ಗ್ಯಾಂಗ್‌ಗೆ ಪೊಲೀಸರ ಶೋಧ

ಆರೋಪಿಯಿಂದ ಮೂರು ಜಿಂಕೆ ಚರ್ಮಗಳನ್ನು ಸ್ಥಳದಲ್ಲಿ ವಶಪಡಿಸಿಕೊಂಡಿದ್ದರು. ನಂತರ ಆರೋಪಿಯನ್ನು ಅವನ ಗ್ರಾಮಕ್ಕೆ ಕರೆದುಕೊಂಡು ಹೋದಾಗ ಮತ್ತೆ ಮೂರು ಜಿಂಕೆ ಕೊಂಬುಗಳನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Forest Smuggler Arrested By Bengaluru Police

ಉತ್ತರ ವಿಭಾಗದ ಡಿಸಿಪಿ ಎನ್ ಶಶಿಕುಮಾರ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಕುಖ್ಯಾತ ಕಾಡುಗಳನ್ನು ಬಂಧಿಸಿರುವ ಜಾಲಹಳ್ಳಿ ಪೊಲೀಸರಿಗೆ ಉತ್ತರ ವಿಭಾಗದ ಡಿಸಿಪಿ ನಗದು ಬಹುಮಾನ ಘೋಷಿಸಿದ್ದಾರೆ.

English summary
Forest Smuggler Arrested By Bengaluru Police. jalahalli police arrested tamilunadu origin man called prabhu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X