ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಐಡಿ ಕೈ ಸೇರಿದ ನಿತ್ಯಾನಂದ ಸ್ವಾಮಿ ಧ್ವನಿ ಪರೀಕ್ಷೆ ವರದಿ

|
Google Oneindia Kannada News

ಬೆಂಗಳೂರು, ಅ. 11 : ಬಿಡದಿ ಧ್ಯಾನಪೀಠದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ ಧ್ವನಿ ಪರೀಕ್ಷೆಯ ವರದಿಯನ್ನು ಎಫ್ಎಸ್‌ಎಲ್ ತಜ್ಞರು ಶುಕ್ರವಾರ ಸಿಐಡಿ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ವರದಿಯನ್ನು ಶೀಘ್ರದಲ್ಲೇ ರಾಮನಗರ ಜೆಎಂಎಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ನಿತ್ಯಾನಂದ ಸ್ವಾಮಿಯ ಧ್ವನಿ ಪರೀಕ್ಷೆ ನಡೆಸಿದ್ದ ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ತಜ್ಞರು ಸಿಐಡಿ ಅಧಿಕಾರಿಗಳಿಗೆ ಮುಚ್ಚಿದ ಲಕೋಟೆಯಲ್ಲಿ ಶುಕ್ರವಾರ ವರದಿ ಸಲ್ಲಿಸಿದ್ದಾರೆ. ಸೆ.8ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆ ನಡೆಸಿದ ಬಳಿಕ, ಅವರ ಧ್ವನಿ ಪರೀಕ್ಷೆಯನ್ನು ಮಡಿವಾಳದಲ್ಲಿ ನಡೆಸಲಾಗಿತ್ತು. [ಸಿಐಡಿ ಕೈ ಸೇರಿದ ನಿತ್ಯಾನಂದ ಪುರುಷತ್ವ ಪರೀಕ್ಷೆ ವರದಿ]

Swami Nithyananda

ನಟಿ ರಂಜಿತಾ ಜತೆಗಿನ ರಾಸಲೀಲೆ ಪ್ರಕರಣ ಮತ್ತು ಕಾರು ಚಾಲಕ ಲೆನಿನ್‌ ಕುರುಪ್ಪನ್‌ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟ ಸಿಡಿಯಲ್ಲಿರುವ ಧ್ವನಿ ಹಾಗೂ ನಿತ್ಯಾನಂದ ಸ್ವಾಮಿ ಅವರ ಧ್ವನಿಗೂ ಇರುವ ಸಾಮ್ಯತೆ ತಿಳಿಯಲು ಈ ಪರೀಕ್ಷೆಯನ್ನು ಮಾಡಲಾಗಿತ್ತು. [ಉಸ್ಸಪ್ಪ, ಅಂತೂ ಆಯ್ತು ನಿತ್ಯಾ ಪುರುಷತ್ವ ಪರೀಕ್ಷೆ]

ಧ್ವನಿ ಪರೀಕ್ಷೆ ವರದಿಯನ್ನು ಶೀಘ್ರದಲ್ಲೇ ರಾಮನಗರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗುವುದು ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. ಎಫ್‌ಎಸ್‌ಎಲ್‌ ತಜ್ಞರು ವರದಿಯಲ್ಲಿ ಹೇಳಿರುವ ವೈದ್ಯಕೀಯ ಪರಿಭಾಷೆಯ ಕೆಲವು ಪದಗಳ ಬಗ್ಗೆ ಗೊಂದಲವಿದೆ. ಆದ್ದರಿಂದ ತಜ್ಞರನ್ನು ಸಂಪರ್ಕಿಸಿ ಆ ಪದಗಳ ವಿವರಣೆ ಪಡೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆ ವರದಿ ಸೆ.15ರಂದು ಸಿಐಡಿ ಅಧಿಕಾರಿಗಳ ಕೈ ಸೇರಿದೆ. ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ಟಿ.ದುರ್ಗಣ್ಣ ಅವರು ಪುರುಷತ್ವ ಪರೀಕ್ಷೆ ನಡೆಸಿದ ಆರು ಮಂದಿಯ ವೈದ್ಯ ತಂಡ ವರದಿಗೆ ಸಹಿ ಹಾಕಿ ಸಿಐಡಿಗೆ ಹಸ್ತಾಂತರಿಸಿದೆ ಎಂದು ಹೇಳಿದ್ದಾರೆ. ಎರಡೂ ವರದಿಗಳನ್ನು ಶೀಘ್ರದಲ್ಲೇ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗುತ್ತದೆ.

English summary
The Criminal Investigation Department (CID) received a report from the Forensic Science Laboratory (FSL), Bangalore on voice test of the Controversial self-styled godman Nithyananda swamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X