ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಎಸ್ ಅಧಿಕಾರಿಗಳು ಇನ್ನು ಬೇಕಾಬಿಟ್ಟಿ ವಿದೇಶಕ್ಕೆ ಹೋಗೋಹಾಗಿಲ್ಲ

By Nayana
|
Google Oneindia Kannada News

Recommended Video

ಐಎಎಸ್ ಅಧಿಕಾರಿಗಳ ಬೇಕಾಬಿಟ್ಟ ವಿದೇಶ ಪ್ರವಾಸಕ್ಕೆ ಬ್ರೇಕ್ | Oneindia Kannada

ಬೆಂಗಳೂರು, ಸೆಪ್ಟೆಂಬರ್ 6: ಸರ್ಕಾರಿ ಅಧಿಕಾರಿಗಳು ಅಧಿಕೃತವಾಗಿ ವಿದೇಶ ಪ್ರವಾಸ ಮಾಡಬೇಕಿದ್ದರೆ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

ಈಗಾಗಲೇ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಅವರು ಐಎಎಸ್ ಅಧಿಕಾರು ಸೇರಿದಂತೆ ಸರ್ಕಾರಿ ಹಿರಿಯ ಅಧಿಕಾರಿಗಳು ಸರ್ಕಾರಿ ಕಾರುಗಳನ್ನು ಬಿಟ್ಟು ಓಲಾ, ಊಬರ್ ಕ್ಯಾಬ್ ಮೂಲಕ ಓಡಾಡಿ ಎಂದು ಆದೇಶ ಹೊರಡಿಸಿದ್ದಾರೆ. ಇದೀಗ ಸರ್ಕಾರಿ ಅಧಿಕಾರಿಗಳ ಪ್ರವಾಸಕ್ಕೂ ಬ್ರೇಕ್ ಬಿದ್ದಂತಾಗಿದೆ.

ಸರ್ಕಾರಿ ಅಧಿಕಾರಿಗಳ ಕಾರು ಬಳಕೆ: ವಿಜಯ್‌ಭಾಸ್ಕರ್ ಹೊಸ ಆದೇಶವೇನು? ಸರ್ಕಾರಿ ಅಧಿಕಾರಿಗಳ ಕಾರು ಬಳಕೆ: ವಿಜಯ್‌ಭಾಸ್ಕರ್ ಹೊಸ ಆದೇಶವೇನು?

ಕೆಲವು ಅಧಿಕಾರಿಗಳು ನೇರವಾಗಿ ಎಚ್‌ಡಿ ಕುಮಾರಸ್ವಾಮಿಗೆ ವಿದೇಶದ ಪ್ರವಾಸದ ಕುರಿತು ಮನವಿ ಸಲ್ಲಿಸುತ್ತಿರುವ ಕಾರಣದಿಂದ ಡಿಪಿಆರ್ ಕಾರ್ಯದರ್ಶಿ ಅಂಜುಂ ಪರ್ವೇಜ್ ಪರಿಷ್ಕೃತ ಮಾರ್ಗಸೂಚಿ ಸುತ್ತೋಲೆ ಹೊರಡಿಸಿದ್ದಾರೆ.

Foreign trip for IAS babus not be cup of tea!

ಸರ್ಕಾರಿ ಕಾರು ಬೇಡವೆಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ! ಸರ್ಕಾರಿ ಕಾರು ಬೇಡವೆಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ!

ಅಧಿಕೃತ ಪ್ರವಾಸಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಆಯಾ ಇಲಾಖೆಯ ಸಚಿವರ ಅನುಮತಿ ಪಡೆದುಕೊಳ್ಳುವುದು ನಿಯಮದಲ್ಲಿದೆ ಆದರೆ ಸಾಕಷ್ಟು ಅಧಿಕಾರಿಗಳು ನೇರವಾಗಿ ಮುಖ್ಯಮಂತ್ರಿಯವರ ಬಳಿ ಸಮ್ಮಿತಿಗೆ ಮನವಿ ಮಾಡುತ್ತಿದ್ದಾರೆ.

ಬಿಬಿಎಂಪಿಗೆ ಬೇಕಂತೆ 12 ಐಷಾರಾಮಿ ಹೊಚ್ಚ ಹೊಸ ಕಾರುಗಳು ಬಿಬಿಎಂಪಿಗೆ ಬೇಕಂತೆ 12 ಐಷಾರಾಮಿ ಹೊಚ್ಚ ಹೊಸ ಕಾರುಗಳು

ಇದೀಗ ಅಧಿಕೃತವಾಗಿ ಪ್ರವಾಸಕ್ಕೆ ತೆರಳಬೇಕಾಗಿದ್ದರೆ ಆಯಾ ಇಲಾಖೆ ಸಚಿವರ ಅನುಮತಿ ಕಡ್ಡಾಯವಾಗಿರುತ್ತದೆ ಬಳಿಕ ನಿಗದಿತ ನಮೂನೆಯಲ್ಲಿ ಕಡತವನ್ನು ಡಿಪಿಆರ್ ಗೆ ಸಲ್ಲಿಸಬೇಕು. ಡಿಪಿಆರ್ ಮೂಲಕವೇ ಪ್ರಸ್ತಾವನೆಯನ್ನು ಸಿಎಂಗೆ ಸಲಲ್ಇಸಬೇಕಾಗಿದೆ. ತಂಡದಲ್ಲಿ ತೆರಳುವುದಾದರೆ ನಿಯೋಗದ ಪೂರ್ಣ ಮಾಹಿತಿಯನ್ನೂ ಒದಗಿಸಬೇಕಾಗುತ್ತದೆ.

English summary
DPAR has issued a revised circular mentioning tough procedure for IAS officers to visit abroad and mandated seeking permission from concerned department's minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X