ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈನ್ಯಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ: ನಿರ್ಮಲಾ ಸೀತಾರಾಮನ್

|
Google Oneindia Kannada News

Recommended Video

ಸೈನ್ಯಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ: ನಿರ್ಮಲಾ ಸೀತಾರಾಮನ್..! | Oneindia Kannada

ಬೆಂಗಳೂರು, ಫೆಬ್ರವರಿ 19 : ಉಗ್ರ ಸಂಘಟನೆಗಳ ವಿರುದ್ಧ ನಾವು ಸಾಕಷ್ಟು ಸಾಕ್ಷ್ಯಗಳನ್ನು ನೀಡಿದ್ದೇವೆ. ಮುಂಬೈ ದಾಳಿ ನಂತರ ಈ ಹಿಂದಿನ ಸರ್ಕಾರವು ಸಹ ಹಲವು ಸಾಕ್ಷ್ಯಗಳನ್ನು ನೀಡಿದೆ. ಆದರೆ ಅವುಗಳ ವಿರುದ್ಧ ಪಾಕಿಸ್ತಾನ ಯಾವ ಕ್ರಮವನ್ನೂ ಜರುಗಿಸಿಲ್ಲ ಎಂದು ರಕ್ಷಣಾ ಸಚಿವ ನಿರ್ಮಲಾ ಸೀತಾರಾಮ್ ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಏರ್‌ ಶೋನಲ್ಲಿ ಇಂದು ವಿಮಾನ ಅವಘಡದಲ್ಲಿ ಮೃತರಾದ ಸಾಹಿಲ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಯಾರು ಗನ್ ಎತ್ತುತ್ತಾರೋ ಅವರನ್ನು ಇಲ್ಲವಾಗಿಸುತ್ತೇವೆ: ಸೇನೆ ಎಚ್ಚರಿಕೆಯಾರು ಗನ್ ಎತ್ತುತ್ತಾರೋ ಅವರನ್ನು ಇಲ್ಲವಾಗಿಸುತ್ತೇವೆ: ಸೇನೆ ಎಚ್ಚರಿಕೆ

ಪುಲ್ವಾಮಾ ದಾಳಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದೆ ಪುಲ್ವಾಮಾ ದಾಳಿಯಂತಹಾ ದಾಳಿಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಹೇಳಿದ ಅವರು, ನಾವು ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಹೇಳಿದರು.

Forces have been given freedom: Nirmala Sitharaman

ನಮ್ಮ ಸರ್ಕಾರ ಏನು ಮಾಡಲಿದೆ ಎಂದು ನಾನು ಹೇಳುವುದಿಲ್ಲ, ಭಾರತೀಯರು ಮತ್ತು ನಮ್ಮ ಸೇನೆ ಅನುಭವಿಸುತ್ತಿರುವ ನೋವು ಮತ್ತು ಆಕ್ರೋಶವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಗುಜರಾತ್ ನಲ್ಲಿ ಉಗ್ರರ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ಗುಜರಾತ್ ನಲ್ಲಿ ಉಗ್ರರ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ

ಮೋದಿ ಅವರು ಈಗಾಗಲೇ ಹೇಳಿರುವಂತೆ, ಭಾರತೀಯ ಸೇನೆಗೆ ಪೂರ್ಣ ಸ್ವಾತಂತ್ರ ನೀಡಿದ್ದೇವೆ, ಅವರು ತಮ್ಮಿಷ್ಟದಂತೆ ಮುಂದಿನ ಹೆಜ್ಜೆ ಇಡಬಹುದು ಎಂದು ರಕ್ಷಣಾ ಮಂತ್ರಿ ಅವರು ಹೇಳಿದರು.

ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಭರ್ಜರಿ ಶಾಕ್ ನೀಡಿದ ಕೇಂದ್ರ ಸರಕಾರಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಭರ್ಜರಿ ಶಾಕ್ ನೀಡಿದ ಕೇಂದ್ರ ಸರಕಾರ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಕ್ಷಣಾ ಮಂತ್ರಿ, ನಮ್ಮ ಸೇನೆ ಧೃತಿಗೆಟ್ಟಿಲ್ಲ, ಭಾರತೀಯರು ತೋರಿಸಿದ ಪ್ರೀತಿಗೆ ಇನ್ನಷ್ಟು ಪ್ರೇರಣೆ ಪಡೆದುಕೊಂಡಿದ್ದಾರೆ. ಅವರು ಯಾವುದೇ ಸಂದರ್ಭವನ್ನು ಎದುರಿಸಲು ಸಿದ್ದರಾಗಿದ್ದಾರೆ ಎಂದು ಹೇಳಿದರು.

English summary
Prime Minister has already said that forces have been given freedom to respond at any given time and as they see fit said defense minister Nirmala Sitaraman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X