ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾರಾಂತ್ಯವನ್ನು ಇನ್ನಷ್ಟು ರುಚಿಕರವಾಗಿಸಿದ ಫುಡ್ ಫೆಸ್ಟಿವಲ್

|
Google Oneindia Kannada News

ಬೆಂಗಳೂರು, ನವೆಂಬರ್ 25: ಕನ್ನಡಿಯಲ್ಲಿ ತನ್ನ ತಾನೇ ಕಂಡು ಬೆರಗಾಗಿದೆ ಸಂತೆ, ಮಾಯಾಲಾಂದ್ರದಿಂದ ಹೊರಬಂದಂತೆ ಒಂದೊಂದೇ ಸರಕು ಸರಂಜಾಮು ಅಂಗಡಿಗಳೇ ತೆರಪಿಲ್ಲದೇ ಬಂದು ಶಿಸ್ತಾಗಿ ಕುಳಿತಿದೆ. ರುಚಿಸದೇ ಇರಬಲ್ಲದೇ ರುಚಿ ಸಂತೆ?

ತಿಂಡಿಪೋತರ ನೆಚ್ಚಿನ ಫುಡ್ ಫೆಸ್ಟಿವಲ್ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರಾರಂಭವಾಗಿದೆ. ಈ ಎರಡು ದಿನ ಮನೆಯಲ್ಲಿ ಅಡುಗೆ ಮಾಡದೆಯೇ ಊಟದ ರುಚಿಯ ಸವಿಯಬಹುದಾಗಿದೆ. ಕೊಳ್ಳುವವನು ಮಾರುವವನು ಮುಖಾಮುಖಿಯಾಗುವ ಬಯಲು ಮಾರಾಟ ಸಂತೆ ಇದಾಗಿದೆ.

ಬೆಂಗಳೂರಿನಲ್ಲಿ ಆಹಾರ ಉತ್ಸವ, ಇದು ತಿಂಡಿ ಪೋತರ ಅಡ್ಡಬೆಂಗಳೂರಿನಲ್ಲಿ ಆಹಾರ ಉತ್ಸವ, ಇದು ತಿಂಡಿ ಪೋತರ ಅಡ್ಡ

ಈ ಸಂತೆ ಬಗೆ ಬಗೆಯ ಆಹಾರ ಪದಾರ್ಥಗಳ ರುಚಿ ತೋರಿಸುವುದಷ್ಟೇ ಅಲ್ಲ. ಪ್ರಮುಖವಾಗಿ ಸಸ್ಯಾಹಾರಿ ಆಹಾರ ಸಂಸ್ಕೃತಿಯ ನಾನಾ ಮುಖಗಳನ್ನು ಪರಿಚಯಿಸುತ್ತದೆ.

ನಾನಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಸೆಲೆಬ್ರಿಟಿಗಳು ಸಂತೆಗೆ ರಂಗು ಬಳಿಯಲಿದ್ದಾರೆ. ಮಂಗಳೂರು ಗೋಲಿ ಬಜೆಯಿಂದ ಹಿಡಿದು ಪಿಜ್ಜಾದವರೆಗೆ, ಕಾರ ಬುಂದಿಯಿಂದ ಹಿಡಿದು ಉಪ್ಪಿನಕಾಯಿವರೆಗೆ, ನಿಪ್ಪಟ್ಟು, ಕೋಡುಬಳೆ, ಬಿಕ್ರಮ್ ಪಾಪಡ್, ಬಂಗಾರ್ ಪೇಟ್ ಪಾನಿಪುರಿ, ಗೋಲಿ ವಡಾಪಾವ್, ಕೇಕ್ ಮತ್ತು ಕ್ರೀಮ್‌ಗಳು, ವೆಜ್ರೋಲ್, ಕೊಲ್ಲಾಪುರಿ ಭೇಲ್, ಹೀಗೆ ನಾನಾ ರೀತಿಯ ತಿಂಡಿಯನ್ನು ಸವಿಯಬಹುದಾಗಿದೆ.

50 ರು. ಪ್ರವೇಶ ಶುಲ್ಕ ಸಾಮಾನ್ಯರು 50 ರೂ. ಪ್ರವೇಶ ಶುಲ್ಕ ನೀಡಿ ಒಳಗೆ ಹೋಗಬೇಕು. ಪಾಸ್ ಇದ್ದವರಿಗೆ ಇದರಿಂದ ವಿನಾಯಿತಿ. ಶನಿವಾರ ಬೆಳಗ್ಗೆಯೇ ಸಾಗರೋಪಾದಿಯಲ್ಲಿ ಜನ ರುಚಿ ಸಂತೆ ಕಡೆ ಹೆಜ್ಜೆ ಹಾಕಿದರು. ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ವಾರದ ಅಂತ್ಯ ಸುಂದರ ನಿಮ್ಮ ಕುಟುಂಬ ಇಲ್ಲವೇ ಪ್ರೀತಿ ಪಾತ್ರರೊಂದಿಗೆ ತೆರಳಿದರೆ ವಾರಾಂತ್ಯದ ಸಂಜೆಯನ್ನು ಮತ್ತಷ್ಟು ಸುಂದರವಾಗಿಸಬಹುದು.

 ಭಾರತದ ಮೊದಲ ಸೆಲ್ಫೀ ಕೆಫೆ

ಭಾರತದ ಮೊದಲ ಸೆಲ್ಫೀ ಕೆಫೆ

ಸೆಲ್ಫೀ ಕೆಫೆ ಎಂದರೆ ಕೆಫೆಯಲ್ಲಿ ಸೆಲ್ಫೀ ಕ್ಲಿಕ್ಕಿಸುವುದಲ್ಲ ಇದು ಬಹಳ ವಿಶೇಷವಾದ ಕಲೆಯಾಗಿದೆ. ಸ್ಮೂದಿ ಹಾಗೂ ಲಸ್ಸಿಯ ಮೇಲೆ ನಮ್ಮ ಭಾವಚಿತ್ರಗಳು ಬರುವಂತೆ ಮಾಡಿಕೊಡುತ್ತಾರೆ. ಹಲವು ದೇಶಗಳಲ್ಲಿ ಇಂತಹ ಕಲೆಇದೆ. ಆದರೆ ಭಾರತದಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿದ್ದಾರೆ.

ಉಳಿದೆಲ್ಲಾ ಮಳಿಗೆಗಳಿಗಿಂತ ಈ ವಿಶೇಷವಾದ ಕಲೆಯನ್ನು ನೋಡಲು ಸಾವಿರಾರು ಮಂದಿ ಸರದಿಯಲ್ಲಿ ನಿಂತಿದ್ದರು. ಬೆಂಗಳೂರಿನ ಕೋರಮಂಗಲದಲ್ಲಿ ಮೊದಲ ಬಾರಿಗೆ ಮಳಿಗೆಯೊಂದನ್ನು ಇವರು ತೆರೆದಿದ್ದು ಸೆಲ್ಫೀ ಲಸ್ಸೀ ಅಥವಾ ಸೆಲ್ಫೀ ಸ್ಮೂದಿಗಾಗಿ ಅವರನ್ನು ಮದುವೆ ಸಮಾರಂಭ ಹಾಗೂ ಇನ್ನಿತರೆ ಶುಭ ಸಮಾರಂಭಗಳಿಗೆ ಆಹ್ವಾನಿಸಬಹುದಾಗಿದೆ. ಸೆಲ್ಫೀ ಸ್ಮೂತಿಯನ್ನು ಮಾಡುವ ವಿಧಾನವನ್ನು ಕೂಡ ಬ್ಯಾನರ್ ನಲ್ಲಿ ವಿವರಿಸಲಾಗಿತ್ತು.

ಖಡಕ್ ರೊಟ್ಟಿ

ಖಡಕ್ ರೊಟ್ಟಿ

ಬಾಯಲ್ಲಿ ನೀರು ತರಿಸಿದ ಉತ್ತರ ಕರ್ನಾಟಕದ ಖಡಕ್ ರೊಟ್ಟಿ: ಶ್ರೀ ಸಾಯಿ ಗಜಾನನ ಫುಡ್ ಸ್ಟಾಲ್ ನವರು ಹಾಕಿದ್ದ ಮಳಿಗೆಯಲ್ಲಿ ಉತ್ತರ ಕರ್ನಾಟಕ ವಿಶೇಷವಾದ ಖಡಕ್ ರೊಟ್ಟಿ, ಬದನೆ ಬಜ್ಜಿ, ಬೇಳೆ ಒಬ್ಬಟ್ಟು ಕಾಳು ಪಲ್ಯ, ರಾಗಿ ರೊಟ್ಟಿ, ಚಟ್ನಿ ಪುಡಿ ಎಲ್ಲವೂ ಒಂದೇ ಕಡೆ ಲಭ್ಯವಿದೆ.

ಥೈಲ್ಯಾಂಡ್ ರೋಲ್ ಓವರ್

ಥೈಲ್ಯಾಂಡ್ ರೋಲ್ ಓವರ್

ಥೈಲ್ಯಾಂಡಿನ ವಿಶೇಷ ತಿನಿಸುಗಳು ಈ ಮಳಿಗೆಯಲ್ಲಿ ಲಭ್ಯವಿದ್ದವು, ಥೈಲ್ಯಾಂಡ್ನ ಐಸ್ ಕ್ರೀಂ ರೋಲ್ಸ್ ಅದರಲ್ಲಿ ಪ್ರಮುಖವಾಗಿತ್ತು. ಅದರಲ್ಲಿ ಸುಮಾರು ೩೦ ರೀತಿಯ ರೋಲ್ ಗಳನ್ನು ಇಡಲಾಗಿತ್ತು. ಬೆಂಗಳೂರಿನಲ್ಲಿ ಸಿಗದ ತಿನಿಸುಗಳು ಇದಾಗಿದ್ದ ಕಾರಣ ಜನರು ಬೇಗ ಆಕರ್ಷಿತರಾದರು. ಇದನ್ನು ಹೊರತು ಪಡಿಸಿ ಸ್ಟೋನ್ ಮಂಕೀಸ್ ಅವರ ಐಸ್ ಕ್ರೀಂಗಳು ಕೂಡ ಲಭ್ಯವಿದ್ದವು.

ಒಟ್ಟು ೧೭೦ ಸ್ಟಾಲ್ ಗಳು

ಒಟ್ಟು ೧೭೦ ಸ್ಟಾಲ್ ಗಳು

170 ಸ್ಟಾಲ್ ಗಳು: ಸಂತೆಯಲ್ಲಿ 170 ಅಧಿಕ ಸ್ಟಾಲ್ ಗಳಿವೆ. ಉಡುಪಿ ಕೆಫೆ, ಭರ್ಜರಿ ಭೋಜನ, ಆರೋಗ್ಯಕ್ಕೆ ಉಪಯೋಗವಾಗುವಂತಹ ಮಧೂಮೇಹವನ್ನು ಕಡಿಮೆ ಮಾಡುವ, ತಲೆನೋವನ್ನು ನಿವಾರಸುವ, ಹೊಟ್ಟನೋವನ್ನು ಕಡಿಮೆ ಮಾಡುವ, ರಕ್ತಹೀನತೆ ಹೋಗಲಾಡಿಸುವ ಹೀಗೆ ನಾನಾ ಉಪಯೋಗಗಳನ್ನು ನೀಡುವಂತಹ ಅಡಕೆಪುಡಿಗಳು ಲಭ್ಯವಿದ್ದವು.

ಪಡ್ಡು, ದೋಸೆ, ಇಡ್ಲಿ, ತಟ್ಟೆ ಇಡ್ಲಿ, ಪಲಾವ್, ಅವರೆಕಾಳು ತಿಂಡಿ ಎಲ್ಲವನ್ನು ಸವಿಯಬಹುದಾಗಿದೆ. ಎಲ್ಲ ಸ್ಟಾಲ್ ಗಳಲ್ಲೂ ತಿಂಡಿಗೆ ಯಾವ ಬೆಲೆ ಎಂಬ ಬೋರ್ಡ್ ನ್ನು ನೇತುಹಾಕಿದ್ದಾರೆ. ಮೈಸೂರ್ ಪಾಕ್, ಭೋಪಾಲ್, ಹೈದರಾಬಾದ್, ಉಡುಪಿ, ಗುಜರಾತ್, ಮಧ್ಯಪ್ರದೇಶದಿಂದ ಆಗಮಿಸಿದ್ದರು.

English summary
Bengaluru is witnessing a delicious and tasty treats this weekend in Freedom park with biggest Food festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X