ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ರಸ್ತೆಯಲ್ಲ ಸ್ವಾಮಿ ಫೂಟ್‌ಪಾತ್ , ಸ್ವಲ್ಪ ಕೆಳಗಿಳೀರಿ

|
Google Oneindia Kannada News

ಬೆಂಗಳೂರು, ಜು.1: ಇದು ಫೂಟ್‌ಪಾತ್ ಸ್ವಾಮಿ ರಸ್ತೆಯಲ್ಲ ಸ್ವಲ್ಪ ಗೆಳಗಿಳೀರಿ, ನಿಮ್ಮ ವಾಹನ ಓಡಿಸುವ ಜಾಗ ಇದಲ್ಲ ಎಂದು ಬೈದುಕೊಳ್ಳುತ್ತಾ ಪಾದಚಾರಿಗಳು ಓಡಾಡುವ ಪರಿಸ್ಥಿತಿ ಬಂದಿದೆ.

ಓಲ್ಡ್ ಮದ್ರಾಸ್ ರಸ್ತೆಯಲ್ಲಿ ವಾಹನ ಸವಾರರಿಗೆ ಹಾಗಿರಲಿ ಪಾದಚಾರಿಗಳಿಗೂ ನಿತ್ಯ ನರಕ. ವಾಹನ ಸವಾರರು ಗಂಟೆಗಟ್ಟಲೆ ಸಿಗ್ನಲ್‌ಗಳ ಬಳಿ ಇನ್ನೊಂದೆಡೆ ನಿಲ್ಲಬೇಕಲ್ಲ ಎಂದು ಸೋಮಾರಿತನದಿಂದ ಪಾದಚಾರಿಗಳು ಓಡಾಡಲೆಂದು ಮಾಡಿರುವ ಮಾರ್ಗಗಳ ಮೇಲೆ ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅದರಿಂದ ಒಂದೆರೆಡು ಹೆಜ್ಜೆ ಮುಂದೆ ಹೋಗಿದ್ದೇವೆ ಎನ್ನುವ ಖುಷಿ ಅವರಿಗಿರಬಹುದು ಆದರೆ ಪಾದಚಾರಿಗಳು ಏನು ಮಾಡಬೇಕು.

ಡಿಸಿಎಂ ಪರಮೇಶ್ವರ ಝೀರೋ ಟ್ರಾಫಿಕ್ ದರ್ಬಾರಿಗೆ ಜನ ಹೈರಾಣ ಡಿಸಿಎಂ ಪರಮೇಶ್ವರ ಝೀರೋ ಟ್ರಾಫಿಕ್ ದರ್ಬಾರಿಗೆ ಜನ ಹೈರಾಣ

ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್‌ ಮಾಲ್‌ನಿಂದ ಬೈಯಪ್ಪನಹಳ್ಳಿಯವರೆಗೆ ಹೋಗುವಾಗ ಪಾದಚಾರಿಗಳ ಅವಸ್ಥೆ ಹೇಗಾಗಿರುತ್ತೆ ಎನ್ನುವುದಕ್ಕೆ ಸ್ನೇಹರತ್ನ ಎನ್ನುವವರು ಒಂದು ವಿಡಿಯೋ ಮಾಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Footpaths are for walking not for wheeling

ಬೈಯಪ್ಪನಹಳ್ಳಿ ಸುತ್ತಮುತ್ತಲು ಓಡಾಡುವವರು ಸಾಮಾನ್ಯವಾಗಿ ಟೆಕ್ಕಿಗಳೇ ಇದ್ದಾರೆ, ಅಥವಾ ವಿದ್ಯಾವಂತರಿದ್ದಾರೆ, ಎಷ್ಟೇ ಓದಿಕೊಂಡರೂ ಟ್ರಾಫಿಕ್ ನಿಯಮಗಳ ಬಗ್ಗೆ ಕನಿಷ್ಠ ಪ್ರಜ್ಞೆ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.

ದಿನನಿತ್ಯ ಸಾವಿರಾರು ವಾಹನಗಳು ಆ ರಸ್ತೆಯಲ್ಲಿ ಸಂಚರಿಸುತ್ತವೆ. ಅದರಲ್ಲಿ ಸುಮಾರು ನೂರಕ್ಕಿಂತಲೂ ಹೆಚ್ಚು ದ್ವಿಚಕ್ರ ವಾಹನಗಳು ಫೂಟ್‌ಪಾತ್‌ ಮೇಲೆ ಚಲಿಸುತ್ತದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ.

ಟ್ರಾಫಿಕ್ ಪೊಲೀಸರು ಎಚ್ಚೆತ್ತುಕೊಂಡು ನಗರದಲ್ಲಿ ಎಲ್ಲೆಲ್ಲಿ ಫೂಟ್‌ಪಾತ್‌ಗಳನ್ನೇ ರಸ್ತೆ ಅಂದುಕೊಂಡಿರುವವರಿಗೆ ಪಾಠ ಕಲಿಸಬೇಕಿದೆ. ಕೇವಲ ಇದೊಂದೇ ರಸ್ತೆಯಲ್ಲ ಪ್ರತಿ ರಸ್ತೆಯಲ್ಲೂ ಇಂತಹ ಸವಾರರು ಇದ್ದಾರೆ. ವಿಶಾಲವಾದ ರಸ್ತೆ ಇದ್ದರೂ ಪಾದಚಾರಿ ಮಾರ್ಗದಲ್ಲಿ ಸಂಚರಿಸುವುದನ್ನು ಮಾತ್ರ ಬಿಡುತ್ತಿಲ್ಲ.

English summary
Nowadays Footpath has become a road for two-wheelers, Footpaths are for walking not for wheeling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X