ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಲಕಿ ಗಂಟಲಿನಿಂದ ಫುಟ್‌ಬಾಲ್‌ ಗಾತ್ರದ ಗಡ್ಡೆ ತೆಗೆದ ಬೆಂಗಳೂರಿನ ವೈದ್ಯರು

|
Google Oneindia Kannada News

ಬೆಂಗಳೂರು, ಫೆಬ್ರವರಿ 17: ಬೆಂಗಳೂರಿನ ಆಸ್ಪತ್ರೆಯ ವೈದ್ಯರು 15 ವರ್ಷದ ಬಾಲಕಿ ಗಂಟಲಿನಲ್ಲಿನ ಸುಮಾರು 3.5 ಕೆ.ಜಿ ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಮೂಲಕ ಬಾಲಕಿಗೆ ಹೊಸ ಜೀವ ನೀಡಿದ್ದಾರೆ.

ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಸುರಭಿಗೆ ಚಿಕ್ಕ ವಯಸ್ಸಿನಲ್ಲಿಯೇ ಕುತ್ತಿಗೆ ಸಮೀಪ ಊತವಾಗಿದ್ದನ್ನು ಪೋಷಕರು ಗಮನಿಸಿದ್ದರು. ನಂತರ ಅದು ಕುತ್ತಿಗೆಯಲ್ಲಿ ದೊಡ್ಡದಾಗಿ ಬೆಳೆಯಲು ಆರಂಭಿಸಿತ್ತು. ಇದೀಗ ಕುತ್ತಿಗೆಯಿಂದ ಎದೆ ಭಾಗದವರೆಗೂ ಗಡ್ಡೆ ವಿಸ್ತರಿಸಿಕೊಂಡಿದ್ದು, ಸುಮಾರು ಹತ್ತು ವರ್ಷಗಳಿಂದಲೂ ಸುರಭಿ ಬೆನ್ ಈ ಗಡ್ಡೆಯಿಂದಾಗಿ ಕಷ್ಟಪಡುತ್ತಿದ್ದರು. ಉಸಿರಾಡಲು ಹಾಗೂ ಆಹಾರ ನುಂಗಲು ಸಮಸ್ಯೆಯಾಗುತ್ತಿದ್ದು, ಮಲಗಲೂ ಆಗುತ್ತಿರಲಿಲ್ಲ. ಅತಿಯಾದ ನೋವು ಕಾಣಿಸಿಕೊಂಡ ಕಾರಣ ಶಾಲೆಯನ್ನೂ ಬಿಡಬೇಕಾಯಿತು.

ಮಹಿಳೆ ಗರ್ಭಾಶಯದಿಂದ 7 ಕಿಲೋ ಗಡ್ಡೆ ತೆಗೆದ ಮೈಸೂರಿನ ವೈದ್ಯರುಮಹಿಳೆ ಗರ್ಭಾಶಯದಿಂದ 7 ಕಿಲೋ ಗಡ್ಡೆ ತೆಗೆದ ಮೈಸೂರಿನ ವೈದ್ಯರು

ಇಷ್ಟು ವರ್ಷಗಳಲ್ಲಿ ಬಾಲಕಿಯ ಪೋಷಕರು ಹಲವು ವೈದ್ಯರಿಗೆ ತೋರಿಸಿದ್ದಾರೆ. ನಂತರ ಬೆಂಗಳೂರಿಗೆ ಬಂದಿದ್ದಾರೆ.

Bengaluru Football Size Tumour Removed From 15 Year Old Girl Neck

ಸಿಎಂಐ ಆಸ್ಪತ್ರೆಯ 21 ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು, ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಂತಿದ್ದ ಫುಟ್ ಬಾಲ್ ಗಾತ್ರದ ಗಡ್ಡೆ ಹೊರತೆಗೆಯುವಲ್ಲಿ ಗೆದ್ದಿದ್ದಾರೆ. ಈ ಗಡ್ಡೆಯನ್ನು ಫೈಬ್ರೊಮಾಟೋಸಿಸ್ ಎಂದು ವೈದ್ಯರು ಗುರುತಿಸಿದ್ದಾರೆ. ಇದೀಗ ಆಕೆ ಸಾಮಾನ್ಯರಂತೆ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಆಸ್ಪತ್ರೆ ಹೇಳಿಕೆ ನೀಡಿದೆ.

"ಬಾಲಕಿ ಗಂಟಲಿನಲ್ಲಿ ಮೂರು ಗಡ್ಡೆಗಳಿದ್ದವು. ಇವುಗಳೊಂದಿಗೆ ನರಗಳೂ ಇದ್ದಿದ್ದರಿಂದ ಶಸ್ತ್ರಚಿಕಿತ್ಸೆ ಅತಿ ಕ್ಲಿಷ್ಟವಾಗಿತ್ತು" ಎಂದು ಮಕ್ಕಳ ತಜ್ಞ ಚೇತನ್ ಗಿಣಿಗೇರಿ ಹೇಳಿದ್ದಾರೆ.

Recommended Video

103ಕ್ಕೆ ಏರಿಕೆಯಾದ ಬಿಳೇಕಹಳ್ಳಿ ಅಪಾರ್ಟ್‌ಮೆಂಟ್‌ನ ಕೊರೊನಾ ಸೋಂಕಿತರ ಸಂಖ್ಯೆ | Oneindia Kannada

"ನನಗೆ ಎಲ್ಲಾ ಹುಡುಗಿಯರಂತೆ ಇರಲು ಸಾಧ್ಯವಾಗುತ್ತಲೇ ಇರಲಿಲ್ಲ. ಹೊರಗೆ ಹೋಗಲೂ ಹಿಂಜರಿಯುವಂತಾಗಿತ್ತು. ಎಲ್ಲಾ ಭರವಸೆಗಳನ್ನೂ ಕಳೆದುಕೊಂಡಿದ್ದೆ. ಈಗ ಮತ್ತೆ ಹೊಸ ಜೀವನ ದೊರೆತಿದೆ" ಎಂದು ಸುರಭಿ ಹೇಳಿಕೊಂಡಿದ್ದಾರೆ. ಕ್ರೌಡ್ ಫಂಡಿಂಗ್ ಮೂಲಕ 70 ಲಕ್ಷ ರೂಪಾಯಿ ಸಂಗ್ರಹಗೊಂಡಿದ್ದು, ಅದನ್ನು ಶಸ್ತ್ರಚಿಕಿತ್ಸೆಗೆ ನೀಡಲಾಗಿದೆ.

English summary
Doctors of CMI hospital here have successfully removed a 3.5 kg crippling tumour from a 15- year-old girl's neck,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X