ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲಾ ಮಕ್ಕಳಿಗೆ ನೆರವಾಗಲು ಸೋಲಂಕಿ- ಉಡುಪ ಮ್ಯೂಸಿಕ್ ಫೆಸ್ಟ್

|
Google Oneindia Kannada News

ಬೆಂಗಳೂರು ಸೆಪ್ಟೆಂಬರ್‌ 25: ಬೆಂಗಳೂರು ನಗರದ ಸಂಗೀತ ಪ್ರಿಯರು ಬಹುದಿನಗಳಿಂದ ಕಾಯುತ್ತಿದ್ದ ಸಂಗೀತ ಕಾರ್ಯಕ್ರಮ ಬಂದಿದೆ. ಅಕ್ಟೋಬರ್ 2 ರಂದು ಜೆಪಿ ನಗರದ ಆರ್ ವಿ ಡೆಂಟಲ್ ಕಾಲೇಜು ಸಭಾಂಗಣದಲ್ಲಿ ಸಂಜೆ 5 ಗಂಟೆಯಿಂದ ಈ ಮಹೋನ್ನತ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಶಾಲಾ ಮಕ್ಕಳಿಗೆ ನೆರವಾಗುವ ಹಿನ್ನೆಲೆಯಲ್ಲಿ ಈ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ರಾಜಸ್ಥಾನದ ಸೆನ್ಸೇಷನ್ ಎಂದೇ ಖ್ಯಾತರಾಗಿರುವ ನಾತೂಲಾಲ್ ಸೋಲಂಕಿ ಮತ್ತು ಘಟಂ ಪ್ರವೀಣರೆಂದೇ ಖ್ಯಾತರಾಗಿರುವ ಕನ್ನಡಿಗ ಗಿರಿಧರ ಉಡುಪ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ಫೋಕ್, ಫ್ಯೂಶನ್ ಮತ್ತು ಫಿಲ್ಮಿ ಸಂಗೀತ ಕಾರ್ಯಕ್ರಮ ಇದಾಗಿದ್ದು, ಸಂಜೆ 5.30 ರಿಂದ 7 ಗಂಟೆವರೆಗೆ ನಾತೂಲಾಲ್ ಸೋಲಂಕಿ ಮತ್ತು ಗಿರಿಧರ್ ಉಡುಪ ಅವರ ಕಾರ್ಯಕ್ರಮ ಇರಲಿದೆ.

Folk, Fusion and Filmi Evening musical event RV Dental College Auditorium

ಸಂಜೆ 7.30 ರಿಂದ ರಾತ್ರಿ 10 ರವರೆಗೆ ಬಾಲಿವುಡ್ ಬೀಟ್ಸ್ ಇರಲಿದೆ. ಇದರಲ್ಲಿ ಖ್ಯಾತ ಸಂಗೀತ ಕಲಾವಿದರಾದ ಕಿಶೋರ್ ಸೋಧ, ಕೇತ್ ಪೀಟರ್ಸ್, ಅರುಣ್ ಕುಮಾರ್, ವಿಕ್ರಂ ರೊಸಾರಿಯೋ ಸೇರಿದಂತೆ ಹಲವು ಕಲಾವಿದರಿಂದ ಮನಮೋಹಕ ಸಂಗೀತ ಕಾರ್ಯಕ್ರಮ ಇರಲಿದೆ.

ಕಾರ್ಯಕ್ರಮ ವಿವರ:
ದಿನಾಂಕ: 2 ಅಕ್ಟೋಬರ್ 2019
ಸ್ಥಳ: ಆರ್ ವಿ ಡೆಂಟಲ್ ಕಾಲೇಜು ಸಭಾಂಗಣ ಜೆಪಿ ನಗರ, ಬೆಂಗಳೂರು.

English summary
A Folk, Fusion and Filmi Evening musical event October Octaves 2019 series is organised to support the Round Table 44 School Children’s Better Future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X