ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲೈಓವರ್ ವಿಲೀನ, ಹೆಬ್ಬಾಳ ಔಟರ್ ರಿಂಗ್ ರಸ್ತೆ ಮಧ್ಯೆ ಸಂಚಾರ ಸುಗಮ

|
Google Oneindia Kannada News

ಬೆಂಗಳೂರು, ಜೂನ್ 25: ಎರಡು ಫ್ಲೈಓವರ್ ವಿಲೀನವಾಗುತ್ತಿರುವ ಕಾರಣ ಹೆಬ್ಬಾಳ ಹಾಗೂ ಔಟರ್‌ರಿಂಗ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವ ಸಾಧ್ಯತೆ ಇದೆ.

ಇದರಿಂದ ನಾಗವಾರ, ವೀರಣ್ಣನಪಾಳ್ಯ ಹಾಗೂ ಹೆಬ್ಬಾಳದ ಜನತೆಗೆ ಅನುಕೂಲವಾಗಲಿದೆ. ಎಂಬೆಸ್ಸಿ ಗ್ರೂಪ್ ಮಾನ್ಯತಾ ಟೆಕ್‌ಪಾರ್ಕ್ ಕ್ಯಾಂಪಸ್‌ ಬಳಿ ಲೂಪ್ ನಿರ್ಮಾಣ ಮಾಡಲು ಬಿಬಿಎಂಪಿಗೆ ಮನವಿ ಮಾಡಿದೆ.

ಬೆಂಗಳೂರಿನ ಈ ವೃತ್ತಗಳಲ್ಲಿ ಅತಿ ಹೆಚ್ಚು ಮಾಲಿನ್ಯ, ಕಾರಣಗಳೇನು? ಬೆಂಗಳೂರಿನ ಈ ವೃತ್ತಗಳಲ್ಲಿ ಅತಿ ಹೆಚ್ಚು ಮಾಲಿನ್ಯ, ಕಾರಣಗಳೇನು?

ಶೀಘ್ರವೇ ಅನುಮತಿ ಸಿಗಲಿದೆ. ವೀರಣ್ಣನಪಾಳ್ಯ ಜಂಕ್ಷನ್ ಹಾಗೂ ನಾಗವಾರ ಜಂಕ್ಷನ್ ಫ್ಲೈಓವರ್‌ನ್ನು ವಿಲೀನ ಮಾಡುವುದಕ್ಕೆ 35 ಕೋಟಿ ರೂ ವೆಚ್ಚಮಾಡಲಾಗುತ್ತಿದೆ. ಫ್ಲೈಓವರ್‌ನಿಂದ ಮಾನ್ಯತಾ ಟೆಕ್‌ಪಾರ್ಕ್‌ ಕಡೆಗೆ ಹೋಗುವ ಮತ್ತು ಬರುವ ದಾರಿಗಳನ್ನು ನಿರ್ಮಿಸಲಾಗುತ್ತದೆ.

Flyover merge may it reduces traffic in Hebbala

ಕೆಆರ್‌ಪುರಂನಿಂದ ಹೆಬ್ಬಾಳ ಕಡೆ ಹೋಗುವ ಮಾರ್ಗದಲ್ಲಿ ಫ್ಲೈಓವರ್ ನಿರ್ಮಿಸಲಾಗುತ್ತಿದೆ. ಕೇವಲ ಮಾನ್ಯತಾ ಟೆಕ್‌ಪಾರ್ಕ್‌ಗೆ ಸಿಬ್ಬಂದಿಗಳಿಗಾಗಿಯೇ ಲೂಪ್ ನಿರ್ಮಿಸಲಾಗುತ್ತಿದೆ.

ಸಂಚಾರ ದಟ್ಟಣೆ ತಗ್ಗಿಸಲು ಬನಶಂಕರಿ ರಿಂಗ್ ರಸ್ತೆ ಮೇಲೆ ಫ್ಲೈಓವರ್? ಸಂಚಾರ ದಟ್ಟಣೆ ತಗ್ಗಿಸಲು ಬನಶಂಕರಿ ರಿಂಗ್ ರಸ್ತೆ ಮೇಲೆ ಫ್ಲೈಓವರ್?

ಈಗ ಕೆಆರ್‌ಪುರಂನಿಂದ ಬರುವ ವಾಹನಗಳು ನಾಗವಾರ ಫ್ಲೈಓವರ್‌ ಪ್ರವೇಶಿಸಿ ಬಳಿಕ ಯು-ಟರ್ನ್ ತೆಗೆದುಕೊಂಡು ಬರುತ್ತಿವೆ, ವಿಪರೀತ ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ. ಹೆಬ್ಬಾಳದಿಂದ ಬರುವವರು ಸರ್ವೀಸ್‌ ರಸ್ತೆಯಲ್ಲಿ ಯಾವುದೇ ಟ್ರಾಫಿಕ್ ಸಮಸ್ಯೆಯಿಲ್ಲದೆ ಬರುವಂತಾಗುತ್ತದೆ. ಬಿಬಿಎಂಪಿಯು ಇದಕ್ಕೆ ವೆಚ್ಚ ಮಾಡುತ್ತಿಲ್ಲ ಎಂಬೆಸ್ಸಿ ಗ್ರೂಪ್ 3.5 ಕೋಟಿ ರೂ ನೀಡಲಿದೆ.

English summary
Flyover merge may it reduces traffic in Hebbala,Junctions such as Nagawara, Veerannapalya and Hebbal will benefit as a result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X