ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಮೇಲ್ಸೇತುವೆ ಉದ್ಘಾಟನೆಗೆ ಸಿದ್ಧ

ಕಿತ್ತೂರು ರಾಣಿ ಚೆನ್ನಮ್ಮ ವೃತ್ತ(ದೇವೇಗೌಡ ಪೆಟ್ರೋಲ್ ಬಂಕ್ ಬಳಿ)ದ ಬಳಿಯ ಮೇಲ್ಸೇತುವೆ ಕೊನೆಗೂ ಸಿದ್ಧವಾಗಿದೆ. ಜನವರಿ 31, 2017ಕ್ಕೆ ಮುಖ್ಯಮಂತ್ರಿಗಳಿಂದ ಉದ್ಘಾಟನೆಯಾಗಲಿದೆ ಎಂದು ಮೇಯರ್ ಜಿ ಪದ್ಮಾವತಿ ಘೋಷಿಸಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 20: ಕಿತ್ತೂರು ರಾಣಿ ಚೆನ್ನಮ್ಮ ವೃತ್ತ(ದೇವೇಗೌಡ ಪೆಟ್ರೋಲ್ ಬಂಕ್ ಬಳಿ)ದ ಬಳಿಯ ಮೇಲ್ಸೇತುವೆ ಕೊನೆಗೂ ಸಿದ್ಧವಾಗಿದೆ. ಜನವರಿ 31, 2017ಕ್ಕೆ ಮುಖ್ಯಮಂತ್ರಿಗಳಿಂದ ಉದ್ಘಾಟನೆಯಾಗಲಿದೆ ಎಂದು ಮೇಯರ್ ಜಿ ಪದ್ಮಾವತಿ ಘೋಷಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಮೇಯರ್ ಪದ್ಮಾವತಿ ಮುಂತಾದವರು ಸೋಮವಾರ ದೇವೇಗೌಡ ಪೆಟ್ರೋಲ್ ಬಂಕ್ (ಕಿತ್ತೂರು ರಾಣಿ ಸರ್ಕಲ್) ಫ್ಲೈ ಓವರ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.[ಇದು ದೇವೇಗೌಡ ಪೆಟ್ರೋಲ್ ಬಂಕ್ ಫ್ಲೈ ಓವರ್ ಕಥೆ...ವ್ಯಥೆ ]

ಕೆ.ಜೆ.ಜಾರ್ಜ್: '2017ರ ಜನವರಿ 31ಕ್ಕೆ ಈ ಫ್ಲೈ ಓವರ್ ಅನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ. ಸಂಚಾರ ಮಾರ್ಗ ಬದಲಾಯಿಸಿ ಕಾಮಗಾರಿ ನಡೆಸಬೇಕಾಗಿದ್ದರಿಂದ ವಿಳಂಬವಾಗಿದೆ' ಎಂದರು.

Flyover at Kittur Rani Chennamma Circle to be inaugurated Jan 21

ಎಂ. ವೆಂಕಟರಾವ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಬಿಬಿಎಂಪಿ ಕಾಮಗಾರಿಯ ಗುತ್ತಿಗೆ ನೀಡಿದೆ. ಟೆಂಡರ್ ನಲ್ಲಿ ಹಾಕಿದ್ದ ಷರತ್ತಿನ ಅನ್ವಯ 18 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಕಾಮಗಾರಿ ವಿಳಂಬವಾಗಿದ್ದರಿಂದ 2016ರ ಡಿಸೆಂಬರ್ ಬಂದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೊನೆಗೂ ಜನವರಿ ತಿಂಗಳೊಳಗೆ ಸಂಚಾರ ಮುಕ್ತಗೊಳಿಸಲು ಸಂಸ್ಥೆ ಸಿದ್ಧವಾಗಿದೆ.

Flyover at Kittur Rani Chennamma Circle to be inaugurated Jan 21

ಫ್ಲೈ ಓವರ್ ಆರಂಭವಾದ ಮೇಲೆ ದೇವೇಗೌಡ ಪೆಟ್ರೋಲ್ ಬಂಕ್ ಬಳಿಯ ವಾಹನ ಸಂಚಾರ ದಟ್ಟಣೆ ಶೇ 65ರಷ್ಟು ಕಡಿಮೆಯಾಗಲಿದೆ.


ಕದಿರೇನಹಳ್ಳಿ ಮೂಲಕ ರಿಂಗ್ ರಸ್ತೆಯಲ್ಲಿ ಬರುವ ವಾಹನಗಳು ಫ್ಲೈ ಓವರ್ ಮೇಲೆ ಸಾಗಲಿವೆ. ಪದ್ಮನಾಭನಗರ, ಉತ್ತರಹಳ್ಳಿ ಕಡೆಗೆ ಹೋಗುವ ವಾಹನಗಳು ಕೆಳಗೆ ಸಂಚರಿಸಲಿವೆ.

English summary
The flyover near Kittur Rani Chennamma Circle (near Deve Gowda petrol bunk, Padmanabhanagar) is ready and will be inaugurated on January 21, 2017 by CM Siddaramaiah said Mayor G Padmavathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X