ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ: ಡ್ರೋಣ್, ಬಲೂನ್ ಹಾರಾಟ ನಿಷೇಧ

|
Google Oneindia Kannada News

ಬೆಂಗಳೂರು, ಫೆಬ್ರವರಿ 15: ಬೆಂಗಳೂರಲ್ಲಿ ಫೆ.20ರಿಂದ 24ರ ವರೆಗೆ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಬಲೂನ್ ಹಾಗೂ ಡ್ರೋಣ್ ಹಾರಾಟವನ್ನು ನಿಷೇಧಿಸಲಾಗಿದೆ.

ಯಲಹಂಕ ವಾಯುನೆಲೆಯಲ್ಲಿ 12ನೇ ಆವೃತ್ತಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಬಲೂನ್ ಹಾರಾಟ ನಿಷೇಧಿಸಲಾಗಿದೆ.

ಏರೋ ಇಂಡಿಯಾ ಪ್ರದರ್ಶನಕ್ಕೆ ಸಜ್ಜಾದ ಏರ್‌ಬಸ್, ವಿಶೇಷತೆ ಏನು?ಏರೋ ಇಂಡಿಯಾ ಪ್ರದರ್ಶನಕ್ಕೆ ಸಜ್ಜಾದ ಏರ್‌ಬಸ್, ವಿಶೇಷತೆ ಏನು?

ಸೇನಾ ಪ್ರದೇಶ ಅಥವಾ ವಾಯುನೆಲೆ, ವಿಮಾನ ನಿಲ್ದಾಣ ಪ್ರದೇಶಕ್ಕೆ ಅನುಮತಿ ಇಲ್ಲದೆ ಪ್ರವೇಶ ಅಥವಾ ಈ ಪ್ರದೇಶದಲ್ಲಿ ಡ್ರೋಣ್ ಹಾರಾಟಕ್ಕೆ ಈಗಾಗಲೇ ನಿಷೇಧವಿದೆ. ಏರೋ ಇಂಡಿಯಾ ಸಂದರ್ಭದಲ್ಲಿ ನಿತ್ಯ ಹತ್ತಾರು ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಪ್ರದರ್ಶನಗೊಳ್ಳಲಿವೆ.

Flying of drone, balloons banned during Aero india 2019

ಡ್ರೋಣ್ ಗಳು ಆಕಾಶದಲ್ಲಿ ಕನಿಷ್ಠ 1-2 ಕಿ.ಮೀ ಎತ್ತರಕ್ಕೆ ಹಾರಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಡ್ರೋಣ್ ಅಥವಾ ಯುಎವಿ ಹಾರಾಟ ನಡೆಸುತ್ತಿರುವ ಹೆಲಿಕಾಪ್ಟರ್ ಅಥವಾ ಯುದ್ಧ ವಿಮಾನಕ್ಕೆ ಬಡಿದರೆ ದುರ್ಘಟನೆ ಸಂಭವಿಸುವ ಸಾಧ್ಯತೆ ಇದೆ.

ಏರೋ ಇಂಡಿಯಾ ಪ್ರದರ್ಶನಕ್ಕಾಗಿ ಬಂದಿಳಿದ ರಫೇಲ್ ವಿಮಾನಗಳು ಏರೋ ಇಂಡಿಯಾ ಪ್ರದರ್ಶನಕ್ಕಾಗಿ ಬಂದಿಳಿದ ರಫೇಲ್ ವಿಮಾನಗಳು

ಕ್ರೀಡಾಕೂಟ, ರಾಜಕೀಯ ಸಮಾರಂಭಗಳಲ್ಲಿ ಹೀಲಿಯಂ ತುಂಬಿದ ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಉದ್ಘಾಟನೆ ಮಾಡುತ್ತಾರೆ ಇದು ಹೆಚ್ಚು ಎತ್ತರಕ್ಕೆ ಹೋಗುತ್ತವೆ ಈ ಬಲೂನ್ ಹಾರಾಟವನ್ನು ಕೂಡ ನಿಷೇಧಿಸಲಾಗಿದೆ.

English summary
Commissioner of Police T Suneel Kumar, who is also additional district magistrate, Bengaluru, has prohibited flying of all sub-conventional aerial platforms during in the city Aero India 2019 from February 20 to 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X